SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್


Team Udayavani, Jul 3, 2024, 2:23 PM IST

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

ಹೈದರಾಬಾದ್:‌ ಪ್ರಿನ್ಸ್‌ ಮಹೇಶ್‌ ಬಾಬು ವೃತ್ತಿ ಬದುಕಿನ ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼSSMB29ʼ ಅನೌನ್ಸ್‌ ಆದ ದಿನದಿಂದ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಎಸ್‌ ಎಸ್‌ ರಾಜಮಮೌಳಿ ಎನ್ನುವುದು ಕೂಡ ಒಂದು.

“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್‌ ಬಾಂಡ್‌ ಅಥವಾ ಇಂಡಿಯಾನ ಜೋನ್ಸ್‌  ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್‌ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಈ ಹಿಂದೆ ಹೇಳಿದ್ದರು.

ಸಿನಿಮಾದಲ್ಲಿ ಮಹೇಶ್‌ ಬಾಬು ಬಹು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಗಳು ವಿಭಿನ್ನವಾಗಿರಲಿದೆ. ಅದಕ್ಕಾಗಿ ನಿರ್ದೇಶಕ ರಾಜಮೌಳಿ ಅವರೇ ಮಹೇಶ್‌ ಬಾಬು ಅವರ ಲುಕ್ ಟೆಸ್ಟ್‌ ಗಳನ್ನು ಮಾಡಿಸಿದ್ದಾರೆ. ಇದರಲ್ಲಿ ಒಟ್ಟು ಎಂಟು ವಿಭಿನ್ನ ಲುಕ್‌ ಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿ ಆಗಿತ್ತು.

ಇದನ್ನೂ ಓದಿ: ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

ಅಡ್ವೆಂಚರ್‌ ಜಂಗಲ್‌, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

ಇದೀಗ ಈ ಸಿನಿಮಾದ ಬಗ್ಗೆ ಅಪ್ಡೇಟ್‌ ವೊಂದು ಹೊರಬಿದ್ದಿದೆ. ಚಿತ್ರದ ತಯಾರಿಗಾಗಿ ರಾಜಮೌಳಿ ಹಾಗೂ ತಂಡ ಶ್ರಮವಹಿಸುತ್ತಿದೆ. ಈ ನಡುವೆ ಖ್ಯಾತ ಕಲಾವಿದರೊಬ್ಬರು ಚಿತ್ರದ ಭಾಗವಾಗಲಿದ್ದಾರೆ ಎನ್ನಲಾಗಿದೆ.

ಖ್ಯಾತ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಮಹೇಶ್‌ ಬಾಬು ಚಿತ್ರದಲ್ಲಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲ ಸಮಯದಿಂದ ಪೃಥ್ವಿರಾಜ್‌ ಜೊತೆ ರಾಜಮೌಳಿ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಇದೀಗ ಪೃಥ್ವಿರಾಜ್‌ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಆ ಮೂಲಕ ಮೊದಲ ಬಾರಿಗೆ ಪೃಥ್ವಿರಾಜ್‌ ಮಹೇಶ್‌ ಬಾಬು ಹಾಗೂ ರಾಜಮೌಳಿ ಜೊತೆ ಕೆಲಸ ಮಾಡಲಿದ್ದಾರೆ.

ಸದ್ಯ ರಾಜಮೌಳಿ ಈ ಸಿನಿಮಾದ ಸ್ಕ್ರಿಪ್ಟ್‌ ಪೂರ್ಣಗೊಳಿಸಿದ್ದು, ಕಲಾವಿದರ ಆಯ್ಕೆ ಹಾಗೂ ಪ್ರೀ ಪ್ರೊಡಕ್ಷನ್‌ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವರದಿ ತಿಳಿಸಿದೆ.

2024ರ ಕೊನೆಯಲ್ಲಿ ಅಥವಾ 2025ರ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

 

ಟಾಪ್ ನ್ಯೂಸ್

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

1-tej

RJD; ಶಿವಲಿಂಗ ತಬ್ಬಿದ‌ ತೇಜ್‌ಪ್ರತಾಪ್‌: ವೀಡಿಯೋ ವೈರಲ್‌

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1

ಕೆಲಸವಿಲ್ಲದೆ ಮಾನಸಿಕ ಒತ್ತಡ: 33ರ ಹರೆಯದಲ್ಲೇ ನೇಣಿಗೆ ಶರಣಾದ ಖ್ಯಾತ ಕಾರ್ಯಾಕಾರಿ ನಿರ್ಮಾಪಕಿ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Naveen Patnaik

BJD; ಚುನಾವಣೆ ಸೋಲು:ಒಡಿಶಾ ಘಟಕ ಪುನಾರಚನೆ

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

supreem

Supreme Court; ದಿವ್ಯಾಂಗರ ಅವಹೇಳನ ತಡೆಗೆ ಮಾರ್ಗಸೂಚಿ

suicide (2)

Puri ಜಗನ್ನಾಥ ರಥಯಾತ್ರೆ ವೇಳೆ ನೂಕುನುಗ್ಗಲು: ಸಾವು 2ಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.