ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ಮೃತ ಕುಟುಂಬಕ್ಕೆ ವಯಕ್ತಿಕ ತಲಾ 3 ಲಕ್ಷ ರೂ. ಪರಿಹಾರ ವಿತರಣೆ

Team Udayavani, Jul 3, 2024, 8:48 PM IST

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ವಿಜಯಪುರ : ತಮ್ಮ ಬಸವನಬಾಗೇವಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಸಂಭವಿಸಿರುವ ದುರಂತ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಹೇಳಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕುರಿತು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಪರಿಶೀಲಿದ ಸಚಿವರು, ಇದೊಂದು ಅಸಹ್ಯದ ಘಟನೆಯಾಗಿದ್ದು, ಈ ದುರ್ಘಟನೆ ನಡೆಯಬಾರದಿತ್ತು, ಈ ಬಗ್ಗೆ ವಿಷಾದಿಸುವುದಾಗಿ ಹೇಳಿದರು.

ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವುದಾಗಿ ಹೇಳಿದ ಸಚಿವರು, ದುರಂಥದಲ್ಲಿ ಸಿಲುಕಿದಾಗ ಈಜು ಬಲ್ಲವರು ಈಜಿ ದಡ ಸೇರಿದ್ದು, ಈಜು ಬಾರದವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಾನೇ ಮಾತನಾಡಿದ್ದೇನೆ. ಮೃತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕುರಿತು ಪ್ರಯತ್ನ ಮಾಡುವುದಾಗಿ ಹೇಳಿದರು.

ಸದರಿ ದುರಂತ ಘಟನೆಯಲ್ಲಿ ಪಿಎಸ್‍ಐ ನೇತೃತ್ವದಲ್ಲೇ ಪೊಲೀಸರು ಜೂಜಾಡುವ ದುರ್ಬಲರ ಮೇಲೆ ದಾಳಿ ಮಾಡಿದ್ದು, ಇದೇ ಇಡೀ ದುರಂತಕ್ಕೆ ಪ್ರಮುಖ ಕಾರಣ ಎಂಬ ದೂರುಗಳಿವೆ. ಆದರೆ ಜಿಲ್ಲೆಯಲ್ಲಿ ಗಣ್ಯರು, ಉಳ್ಳವರು ಪೊಲೀಸರಿಗೆ ಹಣ ಕೊಟ್ಟು ಇಸ್ಪೀಟ್ ಜೂಜು ಆಡಿಸುತ್ತಿದ್ದಾರೆ ಎಂಬ ಆರೋಪವಿದೆ ಎಂದು ಹರಿಹಾಯ್ದರು.

ಆದರೆ ಪೊಲೀಸರು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ದುರ್ಬಲರು ಜೂಜು ಆಡಿದಾಗ ದಾಳಿ ಮಾಡುತ್ತಾರೆ. ಸದರಿ ಪ್ರಕರಣದಲ್ಲಿ ಪಿಎಸ್‍ಐ ಹಣ ಪಡೆದು ಇಂಥ ಜೂನು ಆಡಡಲು ಅವಕಾಶ ಕೊಟ್ಟಿರುವ ಕುರಿತು ತನಿಖೆ ನಡೆಸಲಾಗುತ್ತದೆ ಎಂದರು.

ದುರಂತದಲ್ಲಿ ಮೃತರೆಲ್ಲರೂ ಯುವಕರು, ವಿವಾಹಿತರು ಇದ್ದಾರೆ. ಮೃತರ ಕುಟುಂಬದವರೊಂದಿಗೆ ಮಾತನಾಡಿದಾಗ ವಾಸ್ತವಿಕತೆ ಅರ್ಥವಾಗಲಿದೆ. ಬಳಿಕ ಪರಿಹಾರ ನೀಡುವ ಕುರಿತು ಮಾತನಾಡುವುದಾಗಿ ಹೇಳಿದರು.

ಜೂಜು ಆಡಿಸುವಂಥ ಕೃತ್ಯಗಳಿಗೆ ಯಾರೂ ಪ್ರೋತ್ಸಾಹ, ಪ್ರೇರಣೆ ನೀಡಬಾರದು. ಮೇಲ್ನೋಟಕ್ಕೆ ಇಸ್ಪೀಟ್ ಆಡುತ್ತಿದ್ದರು ಎನ್ನುವ ಮಾತುಗಳಿದ್ದರೂ ಜನರ ನೀಡುವ ಮಾಹಿತಿಯೇ ಬೇರೆ ಇದೆ. ಹೀಗಾಗಿ ಸ್ಥಳೀಯರೊಂದಿಗೂ ಕೃತ್ಯದ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಜೂಜು ಹಾವಳಿ ಹೆಚ್ಚಾಗಿದೆ ಎಂಬ ಆರೋಪವಿದ್ದು, ಜನರು ಸಾಕ್ಷಿ ಸಹಿತ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಇಡೀ ಪ್ರಕರಣದ ಸಮಗ್ರ ತನಿಖೆಗಾಗಿ ಐಜಿಪಿ ಅವರೊಂದಿಗೆ ಮತನಾಡಿದ್ದೇನೆ. ಜೂಜು ಆಡಿಸುವವರು ಎಷ್ಟೇ ಬಲಾದ್ಯರಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.

ಬಳಿಕ ಮೃತದೇಹ ಪತ್ತೆಯಾದವರ ಮನೆಗಳಿಗೆ ಭೇಟಿ ನೀಡಿದಾಗ ಕುಟುಂಬದವರು ಜೂಜು ಅಡ್ಡೆಗಳಿಗೆ ಪಿಎಸ್‍ಐ ಸೇರಿ ಪೊಲೀಸರ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು. ಕುಟುಂಬ ಸದಸ್ಯರು ದೂರು ನೀಡಿದರೆ ಪಿಸ್‍ಐ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದರು.

ಬಳಿಕ ಮೃತದೇಹ ಪತ್ತೆಯಾಗಿರುವ ಕುಟುಂಬ ಸದಸ್ಯರಿಗೆ ಸಚಿವ ಶಿವಾನಂದ ಪಾಟೀಲ ವಯಕ್ತಿಕವಾಗಿ ತಲಾ 3 ಲಕ್ಷ ರೂ. ವಿತರಿಸಿ, ಸಾಂತ್ವನ ಹೇಳಿದರು.

ಇದನ್ನೂ ಓದಿ: Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್

ಟಾಪ್ ನ್ಯೂಸ್

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Exam

Journalism; ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ ಅಹ್ವಾನ

muniratna

Munirathna ಡಿಎನ್‌ಎ, ಜಾಮೀನು ಅರ್ಜಿ ವಿಚಾರಣೆ ಅ. 8ಕ್ಕೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

Exam

Journalism; ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ ಅಹ್ವಾನ

muniratna

Munirathna ಡಿಎನ್‌ಎ, ಜಾಮೀನು ಅರ್ಜಿ ವಿಚಾರಣೆ ಅ. 8ಕ್ಕೆ

1-aaaa

Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್‌: ಕಾಡಾನೆಗಳ ದರ್ಶನ

1-asdd

PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

mob

Social Media: ಇನ್‌ಸ್ಟಾದಂತೆ ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಲೈಕ್‌, ಮೆನ್ಷನ್‌ ಆಯ್ಕೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.