UV Fusion: ಪ್ರಯತ್ನಂ ಸರ್ವತ್ರ ಸಾಧನಂ


Team Udayavani, Jul 4, 2024, 3:05 PM IST

13-uv-fusion

ನಮ್ಮ ಇಂದಿನ ಯುವ ಪೀಳಿಗೆಯ ಬಹುಪಾಲು ಜನರು ಅವರ ಮನಸ್ಥಿತಿ ಹೇಗಿರುತ್ತದೆ ಎಂದರೆ ಕಷ್ಟಪಡದೇ ಎಲ್ಲವೂ ಸುಲಭವಾಗಿ ಅವರಿಗೆ ದೊರಕಿಬಿಡಬೇಕು. ಅಂದರೆ ಅರ್ಥ ಕಷ್ಟಪಟ್ಟು ಬೇಕಾದುದನ್ನು ಪಡೆದುಕೊಳ್ಳಲು ಯಾರೂ ತಯಾರಿಲ್ಲ ಅದಕ್ಕಾಗಿ ಅವರು ಅನ್ಯಮಾರ್ಗವನ್ನು ಬೇಕಾದರೆ  ಹಿಡಿದಾರು.

ಮನುಜರಾಗಿ ಬುದ್ಧಿ ಜೀವಿಗಳಾಗಿ ನಾವು ಹುಟ್ಟಿ ಏನನ್ನಾದರೂ ಸೃಷ್ಟಿಸುವಂತಹ ಕಲೆ ಉಳ್ಳ ನಾವುಗಳು ಏನು ಬೇಕಾದರೂ ಸಾಧಿಸು ಛಲವುಳ್ಳ ಮಾನವರಾದ ನಾವೇ ಅನ್ಯಮಾರ್ಗವನ್ನು ಅನುಸರಿಸಿದರೆ ಏನು ಪ್ರಯೋಜನ. ಮನುಷ್ಯ ಜೀವಿಯ ವಿಶೇಷತೆ ಏನೆಂದರೆ ಅವನು ಮನಸ್ಸು ಮಾಡಿದರೆ ಏನನ್ನಾದರೂ ಸೃಷ್ಟಿಸಬಲ್ಲ,ಏನನ್ನಾದರೂ ಸಾಧಿಸಬಲ್ಲವನಾಗಿದ್ದಾನೆ.

ಇಂತಹ ಅದಮ್ಯ ಅನಂತ ಶಕ್ತಿಗಳನ್ನೊಳಗೊಂಡ ಮಾನವನು ಮೋಸದ ದಾರಿಯಲ್ಲಿ ಸಾಗುವುದನ್ನು ಬಿಟ್ಟು ತನ್ನ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲೆ ಬಂದರೆ ನೋಡಲು ಎಷ್ಟು ಚಂದ ಅಲ್ಲವೇ. ಹನುಮಂತನಿಗೆ ಆತನಲ್ಲಿರುವ ಅಪಾರ ಶಕ್ತಿಯು ಸಮಯ ಬರುವವರೆಗೆ ಅವನಿಗೇ ತಿಳಿಯದ ಹಾಗೆ ಗೌಪ್ಯವಾಗಿತ್ತಂತೆ ಅದೇ ಮಾದರಿಯಲ್ಲಿಯೇ ನಿನ್ನಲ್ಲೂ ನಿನಗೇ ಗೋಚರವಾಗದ ಶಕ್ತಿಯು ಅಡಗಿದೆ ಅದನ್ನು ಗುರುತಿಸಿ ನೀನು ಅದನ್ನು ಸಾರ್ಥಕತೆ ಪಡಿಸಿಕೊಂಡಿದ್ದೇ ಆದರೆ ನಿನ್ನನ್ನು ಸೋಲಿಸುವವನು ಇನ್ನೊಬ್ಬ ಇರಲಾರನು.

ಹಣವನ್ನು ಹೆಚ್ಚು ಹೆಚ್ಚು ಕೂಡಿಟ್ಟಷ್ಟೂ ವ್ಯರ್ಥವೇ ಅದರ ಬದಲಾಗಿ ಅದನ್ನು ಸದ್ವಿನಿಯೋಗಿಸಿದರೆ ಅದರ ಲಾಭವನ್ನು ಎಲ್ಲರೂ ಅನುಭವಿಸಬಹುದು ಹಾಗೆಯೇ ನಮ್ಮಲ್ಲಿನ ಜ್ಞಾನವನ್ನು ಗೌಪ್ಯಮಾನ ಮಾಡದೆ ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಅದರ ಪ್ರತಿಫ‌ಲವನ್ನು ಇಡೀ ಸಮಾಜವೇ ಅನುಭವುಸುತ್ತದೆ ಅಲ್ಲವೇ.

ಇದೆಲ್ಲ ಆಗಬೇಕು ಅಂದರೆ ಮನುಜನ ಮನಃಪೂರ್ವಕವಾದ ಪ್ರಯತ್ನ ಬೇಕು. ನಮ್ಮ ಪ್ರಯತ್ನವಿಲ್ಲದೆ ನಮ್ಮ ಪಾಲಿಗೆ ಒಂದು ಸಾಸಿವೆ ಕಾಳಿನ ಫ‌ಲವೂ ಸಿಗದು. ಮಾತೇ ಇದೆ ಮಂತ್ರದಿಂದ ಮಾವು ಉದುರೀತೇ ಎಂದು. ಈ ಮಾತು ಎಷ್ಟು ಸತ್ಯ ಅಲ್ಲವೇ ಮಾವಿನಕಾಯಿಗೆ ಕಲ್ಲು ಬೀಸದೇ ಮಾವಿನಕಾಯೇ ದೊರೆಯದು ಎಂದಮೇಲೆ ಸುಮ್ಮನೆ ಕೂತು ನಾನು ಹಾಗಾಗುತ್ತೇನೆ, ಹೀಗಾಗುತ್ತೇ,ಅವರಿಗಿಂತ ಇವರಿಗಿಂತ ಚೆನ್ನಾಗಿರುತ್ತೇನೆ ಎಂದರೆ ಅದು ಆಗುವ ಕೆಲಸವೇ ಖಂಡಿತವಾಗಿಯೂ ಸಾಧ್ಯವಾಗಲಾರದು.

ಆದ್ದರಿಂದ ನಾವು ಅಂದುಕೊಳ್ಳುವುದು ಬಹಳ ಸುಲಭ ಆದರೆ ಅದನ್ನು ಕಾರ್ಯಗತಗೊಳಿಸಬೇಕೆಂದರೆ ನಿಷ್ಕಲ್ಮಷವಾದ ಮನಸ್ಸು ದೃಢ ನಿರ್ಧಾರ, ಮುಖ್ಯವಾಗಿ ಇರಲೇ ಬೇಕಾಗುತ್ತದೆ. ನಮ್ಮಯ ಪ್ರಯತ್ನ ಹೇಗಿರಬೇಕೆಂದರೆ ನಮ್ಮನ್ನು ಕಂಡು ಹೀಯಾಳಿಸಿ ನಕ್ಕವರೆಲ್ಲಾ ನಮ್ಮನ್ನು ಗೌರವಿಸುವ ತರದಲಿ ಇರಬೇಕು. ಜೀವನ ಎಂದಮೇಲೆ ಸಮಸ್ಯೆಗಳು ಸಹಜ, ಆದರೆ ಸಮಸ್ಯೆ ಬಂತೆಂದು ಚಿಂತಿಸುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುತ್ತದೆಯೇ ಇಲ್ಲ.

ಅದರ ಬದಲಿಗೆ ಆರೋಗ್ಯ ಹಾನಿಯಾಗುತ್ತದೆ ಮನಸ್ಸು ಒಡೆದ ಕನ್ನಡಿಯಂತಾಗುತ್ತದೆ.ಅದರಿಂದ ಮಾನಸಿಕವಾಗಿ ಹೆಚ್ಚಿನತೊಂದರೆಯೇ ಹೊರತು ಅದರಿಂದ ಲಾಭವೇನು ಕಾಣದಾಗುತ್ತದೆ. ಆದ್ದರಿಂದ ಜೀವನದಿ ಬಂದ ಸಮಸ್ಯೆಗೆ ಪರಿಹಾರ ಹುಡುಕುವ ಅದನ್ನು ಪರಿಹರಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು,ನಾವು ನಿಶ್ಚಿಂತೆಯಿಂದ ಇದ್ದರೆ ಉತ್ತಮ ಮನಸ್ಥಿತಿ ಹೊಂದಿದ್ದರೆ ಹಾಗೂ ಅಛಲವಾದ ಆತ್ಮವಿಶ್ವಾಸವನ್ನು ಹೊಂದಿದ್ದಾಗ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಹಿಡಿದು ಜೀವನದ ಹಾದಿಯನ್ನು ಸುಗಮಗೊಳಿಸಕೊಳ್ಳಬಹುದು.

ಆದ್ದರಿಂದ ಏನಾದರೂ ಆಗಲಿ ನಾವು ಮಾಡುವ ಕೆಲಸದಲ್ಲಿ ನಮ್ಮ ಪ್ರಯತ್ನವನ್ನು ಬಿಡಬಾರದು.ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬ ಮಾತಿನಂತೆ ಪ್ರತಿದಿನದ ಸಣ್ಣಸಣ್ಣ ಪ್ರಯತ್ನವೇ ಮುಂದಿನ ಉತ್ತಮ ಯಶಸ್ಸಿಗೆ ಕಾರಣವಾಗಬಲ್ಲದು.ಆದ್ದರಿಂದ ಪ್ರಯತ್ನವನ್ನು ಬಿಡಬಾರದು ಪ್ರಯತ್ನಂ ಸರ್ವತ್ರ ಸಾಧನಂ ಎಂಬ ಮಾತೇ ತಿಳಿಸುವಂತೆ ಪ್ರಯತ್ನ ಒಂದಿದ್ದರೆ ಏನಾದರೂ ಸಾಧಿಸಬಹುದು.

ಜೀವನದಲ್ಲಿ ಕಷ್ಟಗಳು ಬರುವುದು ನಮ್ಮಲ್ಲಿನ ಸಾಮರ್ಥ್ಯವನ್ನು ಹೊರಹಾಕುವುದಕ್ಕಾಗಿ ಎಂದು ಅರಿತು ನಮ್ಮ ಸಾಮರ್ಥ್ಯವನ್ನು ನಾವು ಅರಿತು ನಿರಂತರ ಪ್ರಯತ್ನದಿಂದ ಜೀವನದಿ ಮುಂದೆ ಸಾಗೋಣ. ಇಂದಿನ ಜನರ ಮನಸ್ಥಿತಿ ಹೇಗಾಗಿದೆ ಎಂದರೆ ಏನಾದರೂ ಒಂದು ಕೆಲಸವನ್ನು ಪ್ರಾರಂಭ ಮಾಡಿದರೆ (ವ್ಯಾಯಾಮವಾಗಲಿ, ಪರೀಕ್ಷೆಗೆ ಸಿದ್ಧತೆ ನಡೆಸುವುದಾಗಲಿ, ವಾಕಿಂಗ್, ಯೋಗ, ಬೇಗ ಏಳುವ ಅಭ್ಯಾಸ ಇತ್ಯಾದಿ) ಅದನ್ನು ಒಂದೆರಡು ದಿನವಷ್ಟೇ ಮಾಡಿ ನಂತರ ಮೊದಲ ಸ್ಥಿತಿಗೆ ಬಂದುಬಿಡುತ್ತಾರೆ.

ಇಲ್ಲ ಹಾಗಾಗಬಾರದು ನಮ್ಮ ಯೋಜನೆ ನಮ್ಮ ತಯಾರಿ ಎರಡು ದಿನಗಿಳಿಗಷ್ಟೇ ಮೀಸಲಾದ ತಯಾರಿಯಾಗಬಾರದು. ನಿತ್ಯ ನಿರಂತರ ಸಾಗಿ ನಾವು ಅಂದುಕೊಂಡ ಗುರಿಯನ್ನು ಸಾಧಿಸುವಂತದ್ದಾಗಬೇಕು.ಇದೆಲ್ಲ ಸಾಧ್ಯವಾಗಬೇಕು ಎಂದರೆ ನಮ್ಮ ಪ್ರಯತ್ನ ಉತ್ತಮವಾಗಿರಬೇಕು.ಉತ್ತಮ ಪ್ರಯತ್ನದೊಂದಿಗೆ ಸಾಗಿ ನಮ್ಮ ಜೀವನದ ಗುರಿಯ ಮುಟ್ಟೋಣ ಏನಂತೀರಾ…

-ಭಾಗ್ಯ ಜೆ.

ಬೋಗಾದಿ, ಮೈಸೂರು

ಟಾಪ್ ನ್ಯೂಸ್

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

Vinesh Phogat forgot my father’s help: Babita Phogat

Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್‌ ಮರೆತಿದ್ದಾರೆ: ಬಬಿತಾ ಫೋಗಾಟ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.