Lok Sabha; ಪ್ರಧಾನಿ ಮೋದಿ ಸುಳ್ಳು ಮಾಹಿತಿ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
Team Udayavani, Jul 5, 2024, 6:20 AM IST
ಹೊಸದಿಲ್ಲಿ: ಸದನಕ್ಕೆ ಪ್ರಧಾನಿ ಮೋದಿ ಮತ್ತು ಸಂಸದ ಅನುರಾಗ್ ಠಾಕೂರ್ ತಪ್ಪು ಮಾಹಿತಿ ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಸಂಸದ ಮಾಣಿಕಮ್ ಠಾಗೋರ್ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಷಣದ ಅಂಶಗಳನ್ನು ತೆಗೆದು ಹಾಕಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಹಿಳೆಯರಿಗೆ ತಿಂಗಳಿಗೆ 8,500 ರೂ. ನೀಡಲಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳಿತ್ತು ಮೋದಿ ಹೇಳಿದ್ದರು. ಇದು ಕಾಂಗ್ರೆಸ್ ಚುನಾವಣ ಭರವಸೆಯಾಗಿದ್ದು, ಸರಕಾರ ರಚನೆಯಾದರೆ ಈಡೇರಿಸುವಂಥದ್ದು. 16 ರಾಜ್ಯಗಳಲ್ಲಿ ಕಾಂಗ್ರೆಸ್ ಮತ ಪ್ರಮಾಣ ಕುಸಿದಿದೆ ಎಂದು ಸುಳ್ಳು ಹೇಳಿದ್ದಾರೆ. ವಾಸ್ತವದಲ್ಲಿ ಹರಿಯಾಣ, ಉತ್ತರಾಖಂಡ, ಕರ್ನಾಟಕ, ತೆಲಂಗಾಣದಲ್ಲಿ ಮತ ಪ್ರಮಾಣ ಹೆಚ್ಚಳವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಸೈನಿಕರಿಗೆ ಬುಲೆಟ್‌ಪ್ರೂಫ್ ಜಾಕೆಟ್ ನೀಡುವ ಸಂಬಂಧವೂ ಸುಳ್ಳು ಹೇಳಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಹೊರ ತರಲಾಗಿದೆ. ಪ್ರಧಾನಿ ಒಂದೂ ದಿನ ರಜೆ ತೆಗೆದುಕೊಂಡಿಲ್ಲ ಎಂದು ಠಾಕೂರ್ ಸುಳ್ಳು ಹೇಳಿದ್ದಾರೆ. ಈ ಇಬ್ಬರ ಭಾಷಣದ ಅಂಶಗಳನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.