ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಮರು ಡಾಮರೀಕರಣ ಕಾರ್ಯಕ್ಕೆ ಹೊಸ ಕಂಪೆನಿ ಮುಂದಾಗಿತ್ತು.

Team Udayavani, Jul 5, 2024, 4:47 PM IST

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ಅಲ್ಲಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿದ್ದು ಮಳೆ ಬರುವಾಗ ಈ ಗುಂಡಿಯಲ್ಲಿ ನೀರು ತುಂಬಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಮತ್ತಷ್ಟು ಸಮಸ್ಯೆ ಎದುರಾಗುತ್ತಿದೆ. ಹೆದ್ದಾರಿ ಮರು ಡಾಂಬರೀಕರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ಚತುಷ್ಪಥ ಹೆದ್ದಾರಿಯ ಟೋಲ್‌ ವಸೂಲಾತಿ ಹಾಗೂ ನಿರ್ವಹಣೆಯ ಹೊಣೆಯನ್ನು ನವಯುಗ ಕಂಪೆನಿಯಿಂದ ಹೈವೇ ಕನ್ಸ್‌ಟ್ರಕ್ಷನ್‌ ಕಂಪೆನಿ ಕೆಲವು ತಿಂಗಳ ಹಿಂದೆ ಪಡೆದಿತ್ತು ಹಾಗೂ ಹೆದ್ದಾರಿಯ ಮರು ಡಾಮರೀಕರಣ ಕಾರ್ಯಕ್ಕೆ ಹೊಸ ಕಂಪೆನಿ ಮುಂದಾಗಿತ್ತು.

ಉಡುಪಿಯಿಂದ ಸಾಸ್ತಾನದ ತನಕ ಡಾಂಬರೀಕರಣ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯಿತು. ಅದೇ ರೀತಿ ಕುಂದಾಪುರ ತನಕ
ಕಾಮಗಾರಿ ನಡೆದಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್‌ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಮಳೆಗಾಲ ಆರಂಭವಾದ್ದರಿಂದ ಕೆಲಸ ಮುಂದುವರಿಯಲಿಲ್ಲ. ಈಗ ಮಳೆಯ ಜತೆಗೆ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಸಂಕಷ್ಟ: ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆ ಇದ್ದು ಮಳೆ ಬರುವಾಗ
ಗುಂಡಿಯಲ್ಲಿ ನೀರು ತುಂಬಿ ಹೊಂಡವನ್ನು ಗಮನಿಸದೆ ಬೆ„ಕ್‌ ಸ್ಕಿಡ್‌ ಆಗಿ ಬಿದ್ದು ಜೀವ ಹಾನಿ ಸಂಭವಿಸುವ ಸಾದ್ಯತೆ ಕೂಡ
ಇದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಚ್ಚು ಅಪಾಯವಿದೆ.

ರಸ್ತೆಯಿಂದ ರಸ್ತೆಗೆ ಚಿಮ್ಮುವ ನೀರು: ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಹೇರಳ ಪ್ರಮಾಣದಲ್ಲಿ ರಸ್ತೆಯಲ್ಲೇ ನೀರು ನಿಂತಿರುತ್ತದೆ. ವಾಹನಗಳು ವೇಗವಾಗಿ ಸಾಗುವಾಗ ನೀರಿನ ಮೇಲೆ ಸಾಗಿ ವಾಹನ ಪಲ್ಟಿಯಾಗುವ ಸಂಭವವಿದೆ ಹಾಗೂ ಕಾರು ಮುಂತಾದ ಘನ ವಾಹನಗಳಿಂದ ಚಿಮ್ಮಿದ ನೀರು ಎದುರುಗಡೆ ಇನ್ನೊಂದು ರಸ್ತೆಯಲ್ಲಿ ಬರುವ ವಾಹನದ ಗ್ಲಾಸಿಗೆ ಚಿಮ್ಮಿ ಎದುರಿನ ವಾಹನಗಳು ಕಕ್ಕಾಬಿಕ್ಕಿಯಾಗಿ ಅಪಘಾತ ಸಂಭವಿಸಿದ ಉದಾಹರಣೆ ಕೂಡ ಇದೆ. ಕಳೆದ ತಿಂಗಳು ಬ್ರಹ್ಮಾವರದಲ್ಲಿ ಇದೇ ರೀತಿ ಅಪಘಾತವೊಂದು ಸಂಭವಿಸಿತ್ತು.

ಪರಿಹಾರ ಅಗತ್ಯ: ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಮರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವುದು ವಾಹನ ಸಂಚಾರಿಗಳ ಬೇಡಿಕೆಯಾಗಿದೆ.

ಸಾರ್ವಜನಿಕರಿಗೆ ಸಂಪರ್ಕಕ್ಕಾಗಿ
ಸಾಸ್ತಾನ ಟೋಲ್‌ಗೆ ಸಂಬಂಧಿಸಿ ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು.

ತಾತ್ಕಾಲಿಕ ದುರಸ್ತಿ
ತಾಂತ್ರಿಕ ಕಾರಣದಿಂದ ಡಾಮರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಂಡಗಳನ್ನು ಗುರುತಿಸಿ ವೆಟ್‌ ಮಿಕ್ಸ್‌ ಹಾಕಿ ಮುಚ್ಚಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ದೂರುಗಳಿದ್ದರೆ ಸ್ಥಳೀಯ ಟೋಲ್‌ನವರ ಗಮನಕ್ಕೆ ತಂದಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು.
*ತಿಮ್ಮಯ್ಯ, ಮೂರು ಟೋಲ್‌ಗ‌ಳ ಪ್ರಬಂಧಕರು

ಗಮನಹರಿಸಿ
ರಸ್ತೆ ಹೊಂಡಗಳಿಂದ ಹಾಗೂ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಅಪಾಯ ಖಂಡಿತ. ಹೀಗಾಗಿ ಅಪಘಾತ, ದುರಂತಗಳು ನಡೆಯುವ ಮುನ್ನ ಸಂಬಂಧಪಟ್ಟ ಕಂಪೆನಿ ಈ ಬಗ್ಗೆ ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
*ನವೀನ್‌ ಶೆಟ್ಟಿ, ವಾಹನ ಸಂಚಾರಿ

*ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.