Snake: ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ… ಹಾವು ಸತ್ತಿತು, ವ್ಯಕ್ತಿ ಬದುಕಿದ
Team Udayavani, Jul 5, 2024, 4:58 PM IST
ಬಿಹಾರ: ಹಾವೊಂದು ತನಗೆ ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿ ಹಾವನ್ನೇ ಹಿಡಿದು ಅದಕ್ಕೆ ಎರಡು ಭಾರಿ ಕಚ್ಚಿದ ವಿಚಿತ್ರ ಘಟನೆಯೊಂದು ಬಿಹಾರದ ನವಾಡ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ರೈಲ್ವೆ ಉದ್ಯೋಗಿಯಾಗಿರುವ ಸಂತೋಷ್ ಲೋಹರ್ ಎಂಬ ವ್ಯಕ್ತಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕುಳಿದ ವ್ಯಕ್ತಿ.
ಸಂತೋಷ್ ಲೋಹಾರ್ ನವಾಡ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲೇ ರಾತ್ರಿ ಇತರ ಕಾರ್ಮಿಕರ ಜೊತೆ ಉಳಿದುಕೊಂಡಿದ್ದ ಕಳೆದ ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ ಸಂತೋಷ್ ಗೆ ಹಾವೊಂದು ಕಚ್ಚಿದೆ ಇದರಿಂದ ಗಾಬರಿಗೊಂಡ ಸಂತೋಷ್ ಗೆ ಆತನ ಗೆಳೆಯರು ಕಚ್ಚಿದ ಹಾವನ್ನು ತಿರುಗಿ ಕಚ್ಚಿದರೆ ಮೈಯಲ್ಲಿದ್ದ ವಿಷ ವಾಪಸ್ಸು ಹಾವಿಗೆ ಹೋಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ ಅದರಂತೆ ಸಂತೋಷ್ ತನಗೆ ಕಚ್ಚಿದ ಹಾವನ್ನು ಹಿಡಿದು ಅದಕ್ಕೆ ಎರಡು ಭಾರಿ ಕಚ್ಚಿದ್ದಾನೆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಸಂತೋಷ್ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ವಾಪಸ್ಸಾಗಿದ್ದಾನೆ ಆದರೆ ಪಾಪ ಕಚ್ಚಿದ ಹಾವು ಮಾತ್ರ ಸಂತೋಷ್ ಕಚ್ಚಿದ ಪೆಟ್ಟಿಗೆ ಪ್ರಾಣವನ್ನೇ ಕಳೆದುಕೊಂಡಿದೆ.
ದಯವಿಟ್ಟು ಇಂತ ಹುಚ್ಚು ಸಾಹಸಕ್ಕೆ ಕೈ ಹಾಕಲು ಹೋಗಬೇಡಿ ಆತ ಬದುಕುಳಿದಿದ್ದು ವೈದ್ಯಕೀಯ ಚಿಕಿತ್ಸೆಯಿಂದ…
ಇದನ್ನೂ ಓದಿ: ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
31 Naxal ಎನ್ಕೌಂಟರ್ಗೆ 1,500 ಮಂದಿ 25 ಕಿ.ಮೀ. ಟ್ರೆಕ್!
Maharashtra; ಅಹ್ಮದ್ನಗರ ಇನ್ನು ಮುಂದೆ ‘ಅಹಿಲ್ಯಾನಗರ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.