Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!
Team Udayavani, Jul 6, 2024, 1:56 AM IST
ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವ ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿ ಸಲು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಿವಿಕ್ ಬೈಲಾವನ್ನು ಜಾರಿಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುವುದು ಒಂದೇ ಪರಿಹಾರ ಎಂಬ ತೀರ್ಮಾನಕ್ಕೆ ರಾಜ್ಯ ಸರಕಾರ ಬಂದಿದೆ.
ಪ್ರಸ್ತುತ ಎಷ್ಟು ನಗರ ಪಾಲಿಕೆಗಳು ಸಿವಿಕ್ ಬೈಲಾ ಅನುಷ್ಠಾನಗೊಳಿಸಿ, ಕಟ್ಟು ನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಸ್ತುತ ಬೆಂಗಳೂರು ಹಾಗೂ ಮಂಗಳೂರು ಮಾತ್ರ ನಿಂತ ನೀರನ್ನು ತೆರವು ಗೊಳಿಸಲು ಭೂಮಾಲಕರನ್ನು ಹೊಣೆ ಗಾರರನ್ನಾಗಿ ಮಾಡುವ ಕಾನೂನು ಜಾರಿಗೊಳಿಸಿದೆ.
ಬಿಬಿಎಂಪಿಯಲ್ಲಿ ಪ್ರಸ್ತುತ ಮೊದಲ ದಿನ ಎಚ್ಚರಿಕೆ ಹಾಗೂ 50 ರೂ., ತದನಂತರ ದಿನವೊಂದಕ್ಕೆ 15 ರೂ. ನಂತೆ ದಂಡ ವಿಧಿಸಲಾಗುತ್ತಿದೆ. ಈ ದಂಡದ ಮೊತ್ತವನ್ನು ಬಿಬಿಎಂಪಿ 500 ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ. ಈ ರೀತಿ ನಗರಾಡಳಿತದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದರೆ ಡೆಂಗ್ಯೂ ನಿಯಂತ್ರಿಸಬಹುದಾಗಿದೆ.
ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು 2017ರಲ್ಲಿ ಎಲ್ಲ ನಗರ ಪಾಲಿಕೆಯಲ್ಲಿ ಸಿವಿಕ್ ಬೈಲಾ ಆಳವಡಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಇದರಲ್ಲಿ ಖಾಸಗಿ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾದರೆ ಅದನ್ನು ನಾಶಗೊಳಿಸುವ ಜವಾಬ್ದಾರಿ ಜಾಗದ ಮಾಲಕರದ್ದಾಗಿದೆ. ರಾಜ್ಯ ಸರಕಾರವೂ ಸಹ ನಗರ ಸ್ಥಳೀ ಯಾಡಳಿತದಲ್ಲಿ ಬೈಲಾ ಅಳವಡಿಸಿ ಕೊಳ್ಳಲು ಸೂಚನೆ ನೀಡಿದೆ.
ಸಿವಿಕ್ ಬೈಲಾ ಜಾರಿ ಏಕೆ?
ಪ್ರತಿಯೊಂದು ಸ್ಥಳೀಯಾಡ ಳಿತದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸಿವಿಕ್ ಬೈಲಾ ಅಳವಡಿಸಿದರೆ ಡೆಂಗ್ಯೂ, ಮಲೇರಿಯಾ, ಕಾಲರಾ, ಚಿಕನ್‌ಗುನ್ಯ ಸೇರಿದಂತೆ ಇತರ ಸಾಂಕ್ರಾ ಮಿಕ ರೋಗಗಳನ್ನು ನಿಯಂತ್ರಣ ಮಾಡ ಬಹುದು. ರಾಜ್ಯದ ಬೃಹತ್ ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾ ಯತ್‌ನ ಮನೆ, ವಾಣಿಜ್ಯ ಕಟ್ಟಡ ಆವರಣ, ಕಟ್ಟಡಗಳು ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣ ವಾಗುವ ಅಂಶಗಳು ಕಂಡು ಬಂದರೆ ಆ ಜಾಗದ ಮಾಲಕರಿಗೆ ಎಚ್ಚ ರಿಕೆಯ ಜತೆಗೆ ಸ್ಥಳದಲ್ಲಿಯೇ ಭಾರೀ ದಂಡ ವಿಧಿಸಬಹುದಾಗಿದೆ. ಇದ ರಿಂದ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸ ಬಹುದಾಗಿದೆ ಎಂದು ಆರೋಗ್ಯ ಇಲಾಖೆ ಕಣ್ಗಾವಲು ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೆಂಗ್ಯೂ: ಹಾಸನದ 8ರ ಬಾಲಕಿ ಸಾವು
ಹಾಸನ: ಡೆಂಗ್ಯೂ ಕಾಯಿಲೆಯಿಂದ ಹಾಸನ ಜಿಲ್ಲೆಯಲ್ಲಿ 8 ವರ್ಷ ವಯಸ್ಸಿನ ಬಾಲಕಿ ಮೃತಪಟ್ಟಿದ್ದು, ಈ ಮೂಲಕ ಡೆಂಗ್ಯೂನಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ 6ಕ್ಕೆ ಏರಿದೆ. ಹೊಳೆನರಸೀಪುರ ತಾಲೂಕು ದೊಡ್ಡಳ್ಳಿ ಗ್ರಾಮದ ಸಮೃದ್ಧಿ ಮೃತ ಬಾಲಕಿ.
155 ಮಂದಿಯಲ್ಲಿ ದೃಢ
ರಾಜ್ಯದಲ್ಲಿ ಕಳೆದ 24 ಗಂಟೆ ಯಲ್ಲಿ 155 ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು 142 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ರಾಜ್ಯದಲ್ಲಿ ಶುಕ್ರವಾರ 899 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದ ರಲ್ಲಿ 155 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಒಟ್ಟಾರೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ 6,831ಕ್ಕೆ ಏರಿಕೆ ಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.