ಇನ್ನು ಮೂರೂವರೆ ನಿಮಿಷಕ್ಕೊಂದು ಮೆಟ್ರೋ: ರೈಲುಗಳ ಸಂಖ್ಯೆ 9ರಿಂದ 15ಕ್ಕೆ ಏರಿಕೆ
Team Udayavani, Jul 6, 2024, 11:31 AM IST
ಉದಯವಾಣಿ ಸಮಾಚಾರ
ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್ನಿಂದ ಕಾರ್ಯಾಚರಣೆ ಮಾಡುವ ಮೆಟ್ರೋ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್), ನೇರಳೆ ಮಾರ್ಗದಲ್ಲಿ ದಟ್ಟಣೆ ಅವಧಿಯಲ್ಲಿ (ಪೀಕ್ ಅವರ್) ಪ್ರತಿ 5 ನಿಮಿಷದ ಬದಲಿಗೆ ಪ್ರತಿ 3.30 ನಿಮಿಷಕ್ಕೊಂದು ರೈಲು ಸೇವೆ ಒದಗಿಸಲು ನಿರ್ಧರಿಸಿದೆ. ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ.
ಇದನ್ನೂ ಓದಿ:Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ಪ್ರಸ್ತುತ 9 ರೈಲುಗಳನ್ನು ಶಾರ್ಟ್ ಲೂಪ್ ಆಗಿ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಈ ರೈಲುಗಳ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಲಾಗಿದೆ. ಈ 15 ರೈಲುಗಳ ಪೈಕಿ ಮೆಜೆಸ್ಟಿಕ್ನಿಂದ ಪಟ್ಟಂದೂರು ಅಗ್ರಹಾರ (ಐಟಿಪಿಎಲ್)ವರೆಗೆ 10 ರೈಲುಗಳು, ವೈಟ್ಫೀಲ್ಡ್ವರೆಗೆ 4 ಹಾಗೂ
ಬೈಯಪ್ಪನಹಳ್ಳಿ ನಿಲ್ದಾಣದವರೆಗೆ 1 ರೈಲು ಕಾರ್ಯಾಚರಣೆ ಮಾಡಲಿವೆ.
ಅದರಂತೆ, ಬೆಳಿಗ್ಗೆ ಮೆಜೆಸ್ಟಿಕ್ನಿಂದ 8.48, 8.58, 9.08, 9.18, 9.29, 9.39, 10, 10.11, 10.21, 10.39, 10.50, 11 ಮತ್ತು 11.22ಕ್ಕೆ ಪೂರ್ವ ಮಾರ್ಗದಲ್ಲಿ ಅಂದರೆ ವೈಟ್ಫೀಲ್ಡ್ ಕಡೆಗೆ ಈ ಹೆಚ್ಚುವರಿ ರೈಲುಗಳು ಕಾರ್ಯಾಚರಣೆ ಮಾಡಲಿವೆ.
ಇದರ ಜತೆಗೆ ನಿಯಮಿತವಾಗಿ (ರೆಗ್ಯುಲರ್ ರೈಲು) ಸಂಚರಿಸುವ ಮೆಟ್ರೋ ರೈಲುಗಳು “ಪೀಕ್ ಅವರ್’ನಲ್ಲಿ 3.3 ನಿಮಿಷಗಳ ಅಂತರದಲ್ಲಿ ಸೇವೆ ನೀಡಲಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಇದಲ್ಲದೆ, ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಪ್ರಸ್ತುತ ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುತ್ತಿರುವ 14 ರೈಲುಗಳ ಪೈಕಿ 6 ರೈಲುಗಳನ್ನು ಐಟಿಪಿಎಲ್/ ವೈಟ್ಫೀಲ್ಡ್ವರೆಗೆ ವಿಸ್ತರಿಸಲಾಗಿದೆ. ಇನ್ನು ಗರುಡಾಚಾರ್ಪಾಳ್ಯ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಐಟಿಪಿಎಲ್ ಕಡೆಗೆ ಪ್ರಯಾಣಿಸಲು 3.5 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಲಭ್ಯವಿರಲಿದೆ.
ಜತೆಗೆ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಸಂಜೆ 4.40ರ ಬದಲಿಗೆ 4.20ಕ್ಕೆ ರೈಲುಗಳು ಕಾರ್ಯಾಚರಣೆ ಮಾಡಲಿದ್ದು ಪ್ರತಿ ಐದು ನಿಮಿಷಗಳ ಅಂತರದಲ್ಲಿ ಈ ಸೇವೆ ಇರಲಿದೆ. ಹಸಿರು ಮಾರ್ಗದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಿಗಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.