Punjalkatte: ಲಾರಿ-ಸ್ಕೂಟರ್ ಢಿಕ್ಕಿ; ಸಹಸವಾರ ಸಾವು
Team Udayavani, Jul 6, 2024, 9:05 PM IST
ಪುಂಜಾಲಕಟ್ಟೆ: ಗೂಡ್ಸ್ ಮಿನಿ ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸಹ ಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಶನಿವಾರ ಸಂಭವಿಸಿದೆ.
ಸ್ಕೂಟರ್ ಸಹ ಸವಾರ ಕಾಸರಗೋಡು ಬೇಕಲ ನಿವಾಸಿ ನಿಖಿಲ್ (24) ಅವರು ಮೃತಪಟ್ಟವರು. ಸ್ಕೂಟರ್ ಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ಗೆ ಎದುರಿನಿಂದ ಬರುತ್ತಿದ್ದ ಮಿನಿ ಲಾರಿ ಢಿಕ್ಕಿಯಾಗಿದೆ. ಪಿಕಪ್ ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಮಿನಿ ಲಾರಿ ಸ್ಕೂಟರ್ಗೆ ಢಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ನಿಖಿಲ್ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿನ್ನಪ್ಪಿದ್ದಾರೆ. ತತ್ಕ್ಷಣ ಸ್ಥಳೀಯರು ಆಗಮಿಸಿ ಗಾಯಾಳು ಗುರುಪ್ರೀತ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಟ್ರಾಫಿಕ್ ಎಸ್ಐ ಸುತೇಶ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ
Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.