Superbet Chess: ಪ್ರಶಸ್ತಿ ಉಳಿಸಿಕೊಂಡ ಕರುವಾನ
Team Udayavani, Jul 6, 2024, 9:31 PM IST
ಬುಕಾರೆಸ್ಟ್ (ರೊಮೇನಿಯಾ): ಸೂಪರ್ಬೆಟ್ ಕ್ಲಾಸಿಕ್ ಚೆಸ್ ಪಂದ್ಯವಳಿಯಲ್ಲಿ ಭಾರತದ ಆರ್. ಪ್ರಜ್ಞಾನಂದ ಮತ್ತು ಡಿ. ಗುಕೇಶ್ ಟೈ ಬ್ರೇಕರ್ನಲ್ಲಿ ಸೋತು ಪ್ರಶಸ್ತಿ ಕೈಚೆಲ್ಲಿದ್ದಾರೆ. ಪ್ರಜ್ಞಾನಂದ, ಗುಕೇಶ್ ಮತ್ತು ಫ್ರಾನ್ಸ್ನ ಫಿರೋಜ ಅಲಿರೆಜ ವಿರುದ್ಧ ಟೈ ಬ್ರೇಕರ್ನಲ್ಲಿ ಗೆದ್ದ ಅಮೆರಿಕದ ಫ್ಯಾಬಿಯಾನೊ ಕರುವಾನ, ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಚೆಸ್ ವಿಶ್ವ ಪ್ರವಾಸದ ಭಾಗವಾಗಿ ನಡೆದ ಈ ಪಂದ್ಯಾವಳಿಯ 9ನೇ ಮತ್ತು ಕೊನೆಯ ಸುತ್ತಿನ ಪಂದ್ಯದ ಬಳಿಕ ಕರುವಾನ, ಪ್ರಜ್ಞಾನಂದ, ಗುಕೇಶ್ ಮತ್ತು ಅಲಿರೆಜ ತಲಾ 5 ಅಂಕ ಗಳಿಸಿದ್ದರು. ಹೀಗಾಗಿ ವಿಜೇತರನ್ನು ರ್ನಿಧರಿಸಲು ಟೈ ಬ್ರೇಕರ್ ನಡೆಸಲಾಯಿತು.
8ನೇ ಸುತ್ತಿನ ವರೆಗೆ 5 ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದ ಕರುವಾನ, 9ನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಅನೀಶ್ ಗಿರಿ ವಿರುದ್ಧ ಸೋತರು. ಇತ್ತ 4.5 ಅಂಕ ಗಳಿಸಿದ್ದ ಪ್ರಜ್ಞಾನಂದ-ಅಲಿರೆಜ ಪಂದ್ಯ ಡ್ರಾ ಮಾಡಿಕೊಂಡರೆ, ಗುಕೇಶ್ ಕೂಡ ಅಮೆರಿಕದ ವೆಸ್ಲಿ ಸೊ ವಿರುದ್ಧ ಡ್ರಾ ಸಾಧಿಸಿ ಅಂಕವನ್ನು 5ಕ್ಕೆ ಏರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.