Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ
Team Udayavani, Jul 7, 2024, 6:15 AM IST
ಸ್ವರಾನಂದ್ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಮಳೆಗಾಲದ ರಾಗಗಳ ಮೇಲಿನ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನ ಸಭಾ ಭವನದಲ್ಲಿ ನಡೆಯಿತು. ರಾತ್ರಿ 8.30ಕ್ಕೆ ಆರಂಭವಾದ ಈ ಕಾರ್ಯಕ್ರಮವು ಗಾಯಕರಾದ ಬನಾರಸ್‌ನ ಪಂಡಿತ್ ರಿತೇಶ್ ಮಿಶ್ರಾ ಹಾಗೂ ಪಂಡಿತ್ ರಜನೀಶ್ ಮಿಶ್ರಾ ಸಹೋದರರು ವರ್ಷ ಋತುವಿನ ಮೇಘ… ಮಲ್ಹಾರ್ ಹಾಗೂ ಮಿಯಾ ಮಲ್ಹಾರ್ ರಾಗಗಳನ್ನು ಪ್ರಸ್ತುತಪಡಿಸಿ ಕೊನೆಯಲ್ಲಿ ರಾಗ್ ಜೈಜವಂತಿಯಲ್ಲಿ ಮಧ್ಯ ಲಯ್ ತೀನ್ ತಾಳದ ಒಂದು ಬಂದಿಶ್ ಹಾಗೂ ಧೃತ್ ಏಕ್ ತಾಳದಲ್ಲಿ ಒಂದು ಸುಂದರ ತರಾನ ಹಾಡಿ ಸಂಗೀತ ರಸಿಕರನ್ನು ರಂಜಿಸಿದರು.
ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್ ಹಾಗೂ ಸಂವಾದಿನಿಯಲ್ಲಿ ಪ್ರಸಾದ್ ಕಾಮತ್ ಉಡುಪಿ ಅಲ್ಲದೆ ತಾನ್ಪುರಾದಲ್ಲಿ ದಯಾಕರ್ ಭಟ್ ಹಾಗೂ ನಾಗೇಂದ್ರ ನಾಯಕ್ ಸಹಕರಿಸಿದರು. ತೇಜಸ್ವಿ ಜೂನಿಯರ್ ಶಂಕರ್ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.
ಕಳೆದ ಆರು ತಿಂಗಳ ಹಿಂದೆ ಹುಟ್ಟಿಕೊಂಡ ಈ ಸ್ವರಾನಂದ ಪ್ರತಿಷ್ಠಾನವು ಅಹೋರಾತ್ರಿ ಕಛೇರಿ ಸರಣಿಯೊಂದಿಗೆ ಪ್ರಾರಂಭಿಸಿ ಈಗಾಗಲೇ ಹದಿಮೂರು ಸಂಗೀತ ಗೋಷ್ಠಿಗಳನ್ನು ಆಯೋಜಿಸಿದೆ. ಪ್ರಸಿದ್ಧ ಕಲಾವಿದರುಗಳನ್ನು ಆಮಂತ್ರಿಸಿ ಕಛೇರಿಗಳನ್ನು ಆಯೋಜಿಸುವುದರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಬೈಠಕ್ ಮಾದರಿಯಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮಗಳಲ್ಲಿ ಕಲಾವಿದ ಹಾಗೂ ಪ್ರೇಕ್ಷಕರ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೆ ಉತ್ತಮ ರಸಾನುಭವವನ್ನು ನೀಡುತ್ತಿದೆ.
- ಲಕ್ಷ್ಮೀ ಶಂಕರ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.