Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ
Team Udayavani, Jul 8, 2024, 12:21 AM IST
ಉಡುಪಿ: ಈಶಾವಾಸ್ಯ ಉಪನಿಷತ್ತಿನ 18 ಶ್ಲೋಕಗಳಲ್ಲಿ ಭಗವಂತನ ಕತೃತ್ವಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇಂಥ ಮಹಿಮೆಗಳ ಕುರಿತಾಗಿ ಜ್ಞಾನ ಪಡೆದು ನಿವ್ಯಾìಜ ಭಕ್ತಿಯಿಂದ ದೇವರಿಗೆ ಶರಣಾದಾಗ ನಿಶ್ಚಯವಾಗಿಯೂ ಶ್ರೇಯ ಪ್ರಾಪ್ತಿಯಾಗುತ್ತದೆ ಎಂದು ಮಧ್ವಾಚಾರ್ಯರೇ ಮೊದಲಾದ ಮಹಾಮಹಿಮರು ತಿಳಿಸಿಕೊಟ್ಟಿದ್ದಾರೆ ಎಂದು ಶ್ರೀ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥ ಶ್ರೀಪಾದರು ಹೇಳಿದರು.
ಸುರತ್ಕಲ್ ಸಮೀಪದ ಚಿತ್ರಾಪುರ ಮಠದಲ್ಲಿ ಎರಡು ತಿಂಗಳುಗಳಿಂದ ಎಂಟು ಜನ ಶಿಷ್ಯರಿಗೆ ತಾವು ನಡೆಸಿದ ಈಶಾವಾಸ್ಯ ಉಪನಿಷತ್ತಿನ ಪಾಠದ ಮಂಗಲೋತ್ಸವ ರವಿವಾರ ನಡೆಸಿ ಅನುಗ್ರಹ ಸಂದೇಶ ನೀಡಿದರು. ಇದೇ ರೀತಿಯಾಗಿ ಹತ್ತು ಉಪನಿಷತ್ತುಗಳ ಪಾಠವನ್ನು ಯಥಾಮತಿ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಶ್ರೀ ಮಠದಲ್ಲಿ ಈಗಾಗಲೇ ಎಲ್ಲ ವಯೋಮಾನಗಳ ಆಸಕ್ತ ವಿಪ್ರರಿಗೆ ನಿತ್ಯೋಪಯೋಗಿ ಸಾಂಪ್ರದಾಯಿಕ ವಿಧಿ ವಿಧಾನಗಳು, ವೇದ ಹಾಗೂ ಮಹಾಭಾರತ ತಾತ್ಪರ್ಯ ನಿರ್ಣಯವೇ ಮೊದಲಾದ ಗ್ರಂಥಗಳ ಕುರಿತಾಗಿ ಪಾಠಗಳನ್ನು ನಡೆಸಲಾಗುತ್ತಿದೆ. ಐಟಿಬಿಟಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಡೆಸುತ್ತಿರುವ ಅನೇಕ ವಿಪ್ರ ಯುವಕರೂ ಇದರಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಸದ್ಯದಲ್ಲೇ ಶ್ರೀ ಮಠವನ್ನು ನವೀಕರಿಸಿ ಮಠದ ಆದ್ಯ ಪ್ರವರ್ತಕರಾದ ಶ್ರೀ ವಿಜಯಧ್ವಜ ತೀರ್ಥ ಶ್ರೀ ಪಾದರ ಹೆಸರಿನಲ್ಲಿ ವಿದ್ಯಾಪೀಠವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ತಿಳಿಸಿದರು.
ಇದೇ ಸಂದರ್ಭ ಸಂಸ್ಥಾನದ ಪಟ್ಟದ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.