Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

ರಸ್ತೆಯಲ್ಲೂ ಅಲ್ಲಲ್ಲಿ ಬಿರುಕು

Team Udayavani, Jul 8, 2024, 12:33 AM IST

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವು ಕಡೆ ರಸ್ತೆ ಬದಿ ಕಟ್ಟಿರುವ ತಡೆಗೋಡೆ ಸಹಿತ ಮಣ್ಣು ತುಂಬಿಸಿ ಅಗಲಗೊಳಿಸಿದ ಸ್ಥಳಗಳಲ್ಲಿ ಬಿರುಕು ಬಿಟ್ಟಿದ್ದು, ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ.

ಕಳೆದ ಬೇಸಗೆ ಕಾಲದಲ್ಲಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಟ್ಟುತ್ತಿದ್ದ ತಡೆ ಗೋಡೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ತಡೆಗೋಡೆ ಕಟ್ಟಿರುವ 6ರಿಂದ 7 ಸ್ಥಳಗಳಲ್ಲಿ ಗೋಡೆಯ ಬದಿ ಹಾಕಿರುವ ಮಣ್ಣು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಗೋಡೆ ವಾಲುವ ಹಂತದಲ್ಲಿದೆ. ಜತೆಗೆ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿ ಘಾಟಿ ಪ್ರದೇಶ ದಲ್ಲಿ ಹಲವು ವರ್ಷಗಳಿಂದ ನಡೆಯು ತ್ತಿದ್ದು, ಮಳೆಗಾಲ ಆರಂಭವಾದಾಗಲೇ ಘಾಟಿಯ ಪರಿಸ್ಥಿತಿ ಆತಂಕ ಮೂಡಿಸು ವಂತಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಿದಾಗ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ.

ತಡೆಗೋಡೆ ಪ್ರದೇಶದಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ತಡೆಗೋಡೆಗಳ ಸಮೀಪದಿಂದಲೇ ಕಣಿವೆ ಭಾಗಕ್ಕೆ ಇಳಿಯುತ್ತಿದೆ. ಹಿಂಬದಿಯಲ್ಲಿ ಕಟ್ಟಿರುವ ಗೋಡೆ ಮೂಲಕ ಕಣಿವೆ ಪ್ರದೇಶಕ್ಕೆ ಹರಿದು ಗೋಡೆಯ ಮಣ್ಣು ಕರಗುತ್ತಿದೆ. ಇಲ್ಲಿ ಕೆಲವೆಡೆ ಮರಳಿನ ಚೀಲ ಹಾಗೂಟಾರ್ಪಾಲು ಹೊದಿಸಿದ್ದರೂ ಅದು ಹೆಚ್ಚಿನ ರಕ್ಷಣೆ ನೀಡಲು ವಿಫ‌ಲವಾಗಿದೆ.

ರಾತ್ರಿ ಅಪಾಯ ಹೆಚ್ಚು
ಘಾಟಿಯಲ್ಲಿ ಸದ್ಯ ಮಳೆ ಮತ್ತು ಮಂಜು ಮುಸುಕಿದ ವಾತಾವರಣ ವಿದ್ದು, ರಾತ್ರಿ ಸಂಚರಿಸುವಾಗ ಹೆಚ್ಚಿನ ಎಚ್ಚರ ಅಗತ್ಯ. ಬಿರುಕು ಬಿಟ್ಟಿರುವ ತಡೆ ಗೋಡೆ ಹಾಗೂ ರಸ್ತೆ ಒಡೆದಿರುವುದು ರಾತ್ರಿ ಬೇಗನೆ ಗಮನಕ್ಕೆ ಬರಲು ಸಾಧ್ಯ ವಿಲ್ಲ. ಜಲಪಾತ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಘಾಟಿಯ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದೆ. ನೀರಿನ ರಭಸಕ್ಕೆ ಮಣ್ಣು ಇನ್ನಷ್ಟು ಕರಗುವ ಸಾಧ್ಯತೆ ಇದೆ. ಆದ್ದರಿಂದ ಘಾಟಿ ಪ್ರದೇಶದಲ್ಲಿ ಸಂಚರಿಸುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಟಾಪ್ ನ್ಯೂಸ್

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

1-ahmad

Maharashtra; ಅಹ್ಮದ್‌ನಗರ ಇನ್ನು ಮುಂದೆ ‘ಅಹಿಲ್ಯಾನಗರ’

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime

Sulya: ವಾರಂಟ್‌ ಆರೋಪಿ ಪರಾರಿ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

6-kadaba

Kadaba: ಕಾರು – ಬೈಕ್‌ ಅಪಘಾತ; ಸವಾರ ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.