![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 8, 2024, 3:13 PM IST
ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ (Actor Prabhas) ಸದ್ಯ ʼಕಲ್ಕಿ2898 ಎಡಿʼ ಚಿತ್ರದ ಮೂಲಕ ವರ್ಲ್ಡ್ ವೈಡ್ ಸುದ್ದಿಯಲ್ಲಿದ್ದಾರೆ. ʼಸಲಾರ್ʼ ಪ್ರಭಾಸ್ ಅವರಿಗೆ ಈ ಸಿನಿಮಾ ಮತ್ತೊಮ್ಮೆ ಪ್ಯಾನ್ ಇಂಡಿಯಾದಲ್ಲಿ ಶೈನ್ ಆಗುವಂತೆ ಮಾಡಿದೆ.
ನಾಗ್ ಅಶ್ವಿನ್ ಅವರ ʼಕಲ್ಕಿʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 900ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ಮೂಲಕ ಹತ್ತಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಬ್ರೇಕ್ ಮಾಡಿದೆ. ʼಕಲ್ಕಿʼಯ ಚರ್ಚೆ ಜೋರಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಪ್ರಭಾಸ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಟಾಲಿವುಡ್ ನ ಗಲ್ಲಿಗಳಲ್ಲಿ ಹವಾ ಶುರುವಾಗಿದೆ.
ಹಾರಾರ್ ಕಥೆವುಳ್ಳ ಮಾರುತಿ ನಿರ್ದೇಶನದ ʼದಿ ರಾಜಾಸಾಬ್ʼ ಹಾಗೂ ಪ್ರಶಾಂತ್ ನೀಲ್ ಅವರ ʼಸಲಾರ್-2ʼ ಸಿನಿಮಾದಲ್ಲಿ ಪ್ರಭಾಸ್ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಚಿತ್ರಗಳೂ ಪ್ಯಾನ್ ಇಂಡಿಯಾದಲ್ಲಿ ಮೋಡಿ ಮಾಡುವ ಸಾಧ್ಯತೆಯಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿದೆ.
ಈ ಎರಡು ಚಿತ್ರಗಳನ್ನು ಹೊರತುಪಡಿಸಿದರೆ ಪ್ರಭಾಸ್ ಅವರ ವೃತ್ತಿ ಬದುಕಿನ ಮತ್ತೊಂದು ಬಿಗ್ ಸಿನಿಮಾವೆಂದೇ ಹೇಳಲಾಗುತ್ತಿರುವ ʼಸ್ಪಿರಿಟ್ʼ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ʼಅರ್ಜುನ್ ರೆಡ್ಡಿʼ, ʼಅನಿಮಲ್ʼ ಮೂಲಕ ದೊಡ್ಡ ಯಶಸ್ಸು ಸಾಧಿಸಿರುವ ಸಂದೀಪ್ ವಂಗಾ ರೆಡ್ಡಿ (Sandeep Reddy Vanga) ಪ್ರಭಾಸ್ ಅವರೊಂದಿಗೆ ʼಸ್ಪಿರಿಟ್ʼ(Spirit Movie) ಚಿತ್ರವನ್ನು ಮಾಡಲಿದ್ದಾರೆ.
ಕಳೆದ ವರ್ಷ ಸಿನಿಮಾ ಅನೌನ್ಸ್ ಆದ ದಿನದಿಂದಲೇ ʼಸ್ಪಿರಿಟ್ʼ ಸುದ್ದಿಯಲ್ಲಿದೆ. ಇದೀಗ ಈ ಸಿನಿಮಾದ ಬಗ್ಗೆ ಅಪ್ಡೇಟ್ ವೊಂದು ಹೊರಬಿದ್ದಿದೆ.
ಭಾರತ ಸೇರಿದಂತೆ ಪ್ಯಾನ್ ಏಷ್ಯಾದಲ್ಲಿ ರಿಲೀಸ್ ಆಗಲಿರುವ ʼಸ್ಪಿರಿಟ್ʼ ನಲ್ಲಿ ಖ್ಯಾತ ಕೊರಿಯನ್ ನಟ ಮಾ ಡಾಂಗ್ ಸಿಯೋಕ್ (Korean actor Ma Dong- Seok) ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ʼ ಗ್ಲಿಟ್ಜ್ʼ ವರದಿ ಮಾಡಿದೆ.
ಕೊರಿಯಾ ಚಿತ್ರರಂಗದಲ್ಲಿ ಮಾ ಡಾಂಗ್ ಅವರದು ಬಹಳ ದೊಡ್ಡ ಹೆಸರು, ʼ ಟ್ರೈನ್ ಟು ಬುಸಾನ್ʼ , ʼದಿ ಕಾಪ್ʼ, ʼದಿ ಡೆವಿಲ್ʼ ಸೇರಿದಂತೆ ಹತ್ತಾರು ಕೊರಿಯಾನ್ ಸಿನಿಮಾಗಳಲ್ಲಿ ನಟಿಸಿರುವ ಮಾ ಡಾಂಗ್ ʼಸ್ಪಿರಿಟ್ʼ ಮೂಲಕ ಭಾರತ ಚಿತ್ರರಂಗಕ್ಕೆ ಬರಲಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತೀಯ ಹಾಗೂ ಚೈನೀಸ್ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದ್ದು, ಟಾಲಿವುಡ್ ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಇದಾಗಿರಲಿದೆ.
ಮೊದಲ ಬಾರಿಗೆ ಪ್ರಭಾಸ್ – ಸಂದೀಪ್ ಜೊತೆಯಾಗಿ ಕೆಲಸ ಮಾಡುತ್ತಿದ್ದು, ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಸಿನಿಮಾದಲ್ಲಿರಲಿದ್ದಾರೆ ಎನ್ನಲಾಗಿದ್ದು ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.