ಹಾವೇರಿ: ವಾಸ್ತವಿಕ ಸ್ಥಿತಿಗತಿ ಪರಿಚಯಿಸುತ್ತದೆ “ಮನವಾಣಿಗಳು’ ಕೃತಿ


Team Udayavani, Jul 8, 2024, 4:00 PM IST

ಹಾವೇರಿ: ವಾಸ್ತವಿಕ ಸ್ಥಿತಿಗತಿ ಪರಿಚಯಿಸುತ್ತದೆ “ಮನವಾಣಿಗಳು’ ಕೃತಿ

ಉದಯವಾಣಿ ಸಮಾಚಾರ
ಹಾವೇರಿ: ಪ್ರಸ್ತುತ ವಿಕೃತ ಮನಸ್ಸುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ತ ಚಂಚಲ  ತಡೆಯಲು ಧಾರ್ಮಿಕ, ಅಧ್ಯಾತ್ಮ, ಶೈಕ್ಷಣಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರತಿನಿಧಿಸಿರುವ “ಮನವಾಣಿಗಳು ಕೃತಿ’ ಪ್ರತಿ ಮನುಷ್ಯನ ಜೀವವಾಣಿಯಾಗಿವೆ ಎಂದು ಬಸವಕಲ್ಯಾಣದ ಗುಣತೀರ್ಥ ವಾಡಿಯ ಮಹಾಮನೆ ಮಹಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ರವಿವಾರ ಚಿನ್ಮಯ ಪ್ರಕಾಶನ ಉಳೇನೂರು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಮನವಾಣಿಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕವಿ ಸೋಮನಾಥ ಡಿ. ಅವರು ತಮ್ಮ ಸಿದ್ಧಾಂತ, ಅನುಭವ ಮತ್ತು ಕೃತಜ್ಞತಾಪೂರ್ವಕ ಬಗೆಗಿನ ಭಾವನೆಗಳಿಗೆ ಕೃತಿ ರೂಪದಲ್ಲಿ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಮನಸ್ಸಿನಲ್ಲಿನ ಭಾವನೆಗಳಿಗೆ ಜ್ಞಾನದ ಒಡಲಿನ ರೂಪ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತಿ ಪ್ರತಿಯೊಬ್ಬರ ಮನಸ್ಸು ಏರಿಳಿತಗಳಿಗೆ ಜಾರಿ ಹೋಗುವುದನ್ನು ತಡೆಯುವಲ್ಲಿ ಯಶಸ್ವಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.

ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಬುದ್ಧ, ಬಸವ ಹಾಗೂ ಡಾ| ಅಂಬೇಡ್ಕರ್‌ ಅವರ ಚಿಂತನೆಗಳನ್ನು ಬದುಕಿನ
ಮಾರ್ಗದರ್ಶಿಯಾಗಿಸುವ ಮನವಾಣಿಗಳು ಕೃತಿ ವಾಸ್ತವಿಕ ಸ್ಥಿತಿಗತಿಗಳನ್ನು ಪರಿಚಯಿಸುತ್ತದೆ. ತಮ್ಮ ಮನಸ್ಸಿನ ಭಾವನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ಆಶಯಗಳು ಸಮಕಾಲೀನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು.

ಪ್ರಾಚಾರ್ಯ ಡಾ| ಅಶೋಕಕುಮಾರ ಮಿಟ್ಟಿ ಮಾತನಾಡಿ, ಮನುಷ್ಯನ ಹುಚ್ಚು ಆಶಯಗಳಿಗೆ ಮನಸ್ಸು ಕಾರಣ. ಸದ್ವಿಚಾರ ಮತ್ತು ಸುವಿಚಾರ ಮೂಲಕ ಬದುಕು ರೂಪಿಸಿಕೊಳ್ಳಲು ಮೌಲಿಕ ವಿಚಾರಗಳ ಹೊತ್ತಿಗೆ ಆಗಿರುವ ಮನವಾಣಿಗಳು ಸಹಕಾರಿ ಎಂದರು.

ಶಿಕ್ಷಕಿ ಜಯಲಕ್ಷ್ಮೀ ಆರ್‌. ಕೃತಿ ಪರಿಚಯ ಮಾಡಿದರು. ಕವಿ ಎ.ಎನ್‌. ರಮೇಶ ಗುಬ್ಬಿ, ಸಾಹಿತಿ ಡಾ| ಸವಿತಾ ಸಿರಗೋಜಿ, ತಹಶೀಲ್ದಾರ್‌ ಮಹೇಶ ಗಸ್ತೆ, ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿದರು. ಸಾಹಿತಿ ಕಲಾವಿದರ ಬಳಗದ ವಿ.ಪಿ. ದ್ಯಾಮಣ್ಣವರ, ಶೇಖಣ್ಣ ಕಳ್ಳಿಮನಿ, ಲೀಲಾವತಿ ಪಾಟೀಲ, ಸವಿತಾ ಹಿರೇಮಠ, ಮಧುಮತಿ ಚಿಕ್ಕೇಗೌಡ್ರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ, ಭಾಗ್ಯ ಎಂ.ಕೆ., ನೇತ್ರಾವತಿ ಅಂಗಡಿ, ಹನುಮಂತಸಿಂಗ್‌ ರಜಪೂತ್‌, ರಾಜಾಭಕ್ಷು ಹಾಗೂ ಚಿನ್ಮಯ ಪ್ರಕಾಶನದ ಯಮನಪ್ಪ , ಅಂಜನಪ್ಪ ಉಳೇನೂರು, ವಚನಶ್ರೀ ಉಳೇನೂರು, ಕಾಮ್ರೇಡ್‌ ರಾಮಾಂಜನೆಪ್ಪ ಇದ್ದರು. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಎಂ. ಬಡಿಗೇರ ಹಾಗೂ ಪೃಥ್ವಿರಾಜ್‌ ಬೆಟಗೇರಿ ನಿರೂಪಿಸಿದರು. ನಾಗರಾಜ ಹುಡೇದ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು.

ಸಾಹಿತ್ಯಕ ವಲಯದಲ್ಲಿ ಗಮನ ಸೆಳೆದಿರುವ ಮನವಾಣಿಗಳು ಕೃತಿ ಜನವಾಣಿಗಳಾಗಿವೆ. ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿರುವ ಕವಿ ಸೋಮನಾಥ ಡಿ ತಮ್ಮ ಸಾಹಿತ್ಯ ಪ್ರೇಮ ಮುಂದುವರಿಸಲಿ. ಹಾವೇರಿ ನೆಲದಲ್ಲಿ ಚೊಚ್ಚಲ ಕೃತಿ ಬಿಡುಗಡೆ ಆಗುತ್ತಿರುವುದು ಖುಷಿ ವಿಚಾರ.

*ಸತೀಶ ಕುಲಕರ್ಣಿ, ಸಾಹಿತಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.