Toofaan; ಭರವಸೆ ಮೂಡಿಸಿದ ತೂಫಾನ್‌ ನೋಟ


Team Udayavani, Jul 8, 2024, 5:40 PM IST

TOOFAAN

ಸಂಪೂರ್ಣ ಹೊಸಬರ ತಂಡ ಸೇರಿ ಮಾಡಿರುವ “ತೂಫಾನ್‌’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಾರ್‌ ಸಿನಿಮಾಗಳ ಮೇಕಿಂಗ್‌ ರೀತಿಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದ ಜೊತೆಗೆ ಪರಭಾಷೆಯಿಂದಲೂ ಟೀಸರ್‌ ಗೆ ಜೈ ಎಂದಿದ್ದಾರೆ. ಶರೀಫ‌ ಬೇಗಂ ನದಾಫ್, ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಆರ್‌.ಚಂದ್ರ ಕಾಂತ್‌ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ಅನುಷಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆರ್‌. ಚಂದ್ರಕಾಂತ್‌, “ಈ ಸಿನಿಮಾ ನಾಯಕ ರೋಶನ್‌ ಅವರ ಕನಸು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಎಳೆಯನ್ನು ಹೊಂದಿದೆ. ಶೇ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಮೊದಲ ನೋಟ ತೋರಿಸಲಾಗಿದೆ. ಇದು ಟೀಸರ್‌, ಟ್ರೇಲರ್‌ ಅಲ್ಲ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ಧಪಡಿಸಲಾಗಿದೆ. ಹಿಂದೆ “ಭೈರ್ಯ-07′ ಹೆಸರು ಇತ್ತು. ಭೈರ್ಯ ನಾಯಕನ ಹೆಸರು ಆಗಿದ್ದು, ಬೇರೆ ತಿರುವು ಇರಲಿ ಅಂತ ತೂಫಾನ್‌ ಟೈಟಲ್‌ ಇಡಲಾಗಿದೆ. ಮುಖ್ಯ ಖಳನಾಯಕನಾಗಿ ಭೀಷ್ಮರಾಮಯ್ಯ ಉಳಿದಂತೆ ರಂಗಾಯಣ ರಘು, ಅಶ್ವಿ‌ನ್‌ ಹಾಸನ್‌, ಸೂರ್ಯ ಪ್ರವೀಣ್‌, ಅಯ್ಯಪ್ಪ ಶರ್ಮಾ, ಬಿ.ಸುರೇಶ್‌, ಉಗ್ರಂ ರವಿ ನಟಿಸಿದ್ದಾರೆ’ ಎಂದರು.

ನಾಯಕ ರೋಶನ್‌ ಮಾತನಾಡಿ, “ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು. ನಾನು ಯಶ್‌ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತೇನೆ. ಒನ್‌ಲೈನ್‌ ನನ್ನದು. ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇ ಶಕರು. ವಿದ್ಯಾವಂತರ ಮಕ್ಕಳು ಮುಂದು ಬರುವಂತೆ, ಒಬ್ಬ ಆಟೋ ಚಾಲಕನ ಮಗನಾಗಿ ಚಿಕ್ಕ ಕನಸು ಕಂಡಿಲ್ಲ. ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ತರುವ ಛಲ ಬಂದಿದೆ. ಎರಡು ವರ್ಷದ ಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ’ ಎಂದರು.

ನಾಯಕಿ ಅನುಷಾ ರೈ ಅವರಿಗೂ ಈ ಸಿನಿಮಾ ಮೇಲೆ ವಿಶ್ವಾಸವಿದೆ. “ಮುಗ್ಧ ಹುಡುಗಿ, ಯಾರಿಗೂ ಹೆದರದ ಹಾಗೂ ಮಹಾರಾಜರ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು’ ನಾಯಕಿ ಅನುಷಾ ರೈ ಪಾತ್ರದ ಪರಿಚಯ ಮಾಡಿ ಕೊಂಡರು.

ಚಿತ್ರಕ್ಕೆ ಸಚಿನ್‌ ಬಸ್ರೂರು ಸಂಗೀತ, ಗಂಗು ಛಾಯಾಗ್ರಹಣ, ನರಸಿಂಹ ಸಾಹಸವಿದೆ.

ಟಾಪ್ ನ್ಯೂಸ್

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nidradevi next door Kannada Movie

Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ನತ್ತ..

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Varun tej starrer matka movie releasing on Nov 14

Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.