Wimbledon-2024; ರಿಬಾಕಿನಾ, ಸ್ವಿಟೋಲಿನಾ ಕ್ವಾರ್ಟರ್ ಫೈನಲ್ ಯಾನ
Team Udayavani, Jul 8, 2024, 11:11 PM IST
ಲಂಡನ್: ಕಜಾಕ್ಸ್ಥಾನದ ಎಲೆನಾ ರಿಬಾಕಿನಾ ಮತ್ತು ಉಕ್ರೇನ್ನ ಎಲಿನಾ ಸ್ವಿಟೋಲಿನಾ ವಿಂಬಲ್ಡನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಗೆಏರಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ಎಂಟರ ಸುತ್ತಿಗೆ ಮುನ್ನಡೆದಿದ್ದಾರೆ.
ಸೋಮವಾರದ ಪಂದ್ಯದಲ್ಲಿ ಎಲೆನಾ ರಿಬಾಕಿನಾ ಸುಲಭದಲ್ಲಿ ಮುನ್ನಡೆ ಸಾಧಿಸಿದರು. ಪಂದ್ಯದ ವೇಳೆ ಇವರ ಎದುರಾಳಿ ರಷ್ಯಾದ ಅನ್ನಾ ಕಲಿನ್ಸ್ಕಾಯಾ ಗಾಯಾಳಾಗಿ ಹಿಂದೆ ಸರಿದರು. ಆಗ ರಿಬಾಕಿನಾ 6-3, 3-0 ಮುನ್ನಡೆಯಲ್ಲಿದ್ದರು. ಇನ್ನೊಂದು ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ 6-2, 6-1ರಿಂದ ಚೀನದ ಕ್ಸಿನ್ಯು ವಾಂಗ್ ಅವರಿಗೆ ಸೋಲುಣಿಸಿದರು.
ಟಾಮಿ ಪೌಲ್, ಸಿನ್ನರ್ ಜಯ
ಪುರುಷರ ಸಿಂಗಲ್ಸ್ನಲ್ಲಿ ಅಮೆರಿಕದ ಟಾಮಿ ಪೌಲ್, ಇಟಲಿಯ ಜಾನಿಕ್ ಸಿನ್ನರ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 12ನೇ ಶ್ರೇಯಾಂಕದ ಟಾಮಿ ಪೌಲ್ ಸ್ಪೇನ್ನ ಹಿರಿಯ ಆಟಗಾರ ರಾಬರ್ಟೊ ಬೌಟಿಸ್ಟ ಅಗುಟ್ ಅವರನ್ನು 6-2, 7-6 (3) ಅಂತರದಿಂದ ಪರಾಭವಗೊಳಿಸಿದರು. ಇವರಿನ್ನು ಕಾರ್ಲೋಸ್ ಅಲ್ಕರಾಜ್ ಸವಾಲಿಗೆ ಅಣಿಯಾಗಬೇಕಿದೆ.
ವಿಶ್ವದ ನಂ.1 ಖ್ಯಾತಿಯ ಜಾನಿಕ್ ಸಿನ್ನರ್ 14ನೇ ಶ್ರೇಯಾಂಕದ ಬೆನ್ ಶೆಲ್ಟನ್ ಆಟಕ್ಕೆ 6-2, 6-4, 7-6 (9)ರಿಂದ ಶಟರ್ ಎಳೆದರು. ಇವರ ಕ್ವಾರ್ಟರ್ ಫೈನಲ್ ಎದುರಾಳಿ ಡ್ಯಾನಿಲ್ ಮೆಡ್ವೆಡೇವ್. ಬಲ್ಗೇರಿಯಾದ ಗ್ರೆಗರ್ ಡಿಮಿಟ್ರೋವ್ ಗಾಯಾಳಾದ ಕಾರಣ ಮೆಡ್ವೆಡೇವ್ಗೆ ಮುನ್ನಡೆ ಲಭಿಸಿತು.
ಲುಲು ಸುನ್ ಗೆಲುವಿನ ಅಚ್ಚರಿ
ನ್ಯೂಜಿಲ್ಯಾಂಡ್ನ ಲುಲು ಸುನ್ ಅಚ್ಚರಿಯ ಗೆಲುವಿನೊಂದಿಗೆ ಮೊದಲ ಸಲ ಗ್ರ್ಯಾನ್ಸ್ಲಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 123ನೇ ರ್ಯಾಂಕ್ನ ಲುಲು ಸುನ್ ಆತಿಥೇಯ ಬ್ರಿಟನ್ನ ಕೊನೆಯ ಆಟಗಾರ್ತಿ ಎಮ್ಮಾ ರಾಡುಕಾನು ವಿರುದ್ಧ 3 ಸೆಟ್ಗಳ ಹೋರಾಟ ನಡೆಸಿ 6-2, 5-7, 6-2 ಅಂತರದ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು ಎದುರಿಸಲಿದ್ದಾರೆ. ವೆಕಿಕ್ ಸ್ಪೇನ್ನ ಪೌಲಾ ಬಡೋಸಾ ವಿರುದ್ಧ 6-2, 1-6, 6-4 ಅಂತರದಿಂದ ಗೆದ್ದು ಬಂದರು.
ದ್ವಿತೀಯ ಶ್ರೇಯಾಂಕದ ಕೊಕೊ ಗಾಫ್ ಅವರ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಕನಸು ಎಮ್ಮಾ ನವಾರೊ ಕೈಯಲ್ಲಿ ಭಗ್ನಗೊಂಡಿದೆ. ಈ “ಆಲ್ ಅಮೆರಿಕನ್’ ಕದನದಲ್ಲಿ ನವಾರೊ 6-4, 6-3 ನೇರ ಸೆಟ್ಗಳ ಜಯ ಸಾಧಿಸಿದರು. ನವಾರೊ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಇಟಲಿಯ ಜಾಸ್ಮಿನ್ ಪೌಲಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.