Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ
ಮಾಧವ ಉಳ್ಳಾಲ ಅವರಿಗೆ ಮಂಗಳೂರು ಪಾಲಿಕೆಯಿಂದಸಾಲು ಮರದ ತಿಮ್ಮಕ್ಕ ಪ್ರಶಸ್ತಿ' ಪ್ರದಾನ
Team Udayavani, Jul 8, 2024, 11:49 PM IST
ಮಂಗಳೂರು: ಹವಾಮಾನ ಬದಲಾವಣೆ ಹಾಗೂ ಸಮುದ್ರ ಮಟ್ಟ ಏರಿಕೆ ಆಗುತ್ತಿರುವ ಸಂದ ರ್ಭದಲ್ಲಿ ಗಿಡ ಮರಗಳ ಸಂರಕ್ಷಣೆ ಮೂಲಕ ಪರಿಸರ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿ ಸಬೇಕು ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
“ಸಾಲುಮರದ ತಿಮ್ಮಕ್ಕ’ ಅವರ ಜನ್ಮದಿನದ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆ ನೇತೃತ್ವದಲ್ಲಿ 60 ವಾರ್ಡ್‌ಗಳಲ್ಲಿ “ಉದಯವಾಣಿ’ ಸಹಭಾಗಿತ್ವದಡಿ 10 ಸಾವಿರ ಗಿಡಗಳನ್ನು ನೆಡುವ “ಹಸಿರೇ ಉಸಿರು’ ಕಾರ್ಯಕ್ರಮಕ್ಕೆ ಪುರಭವನದಲ್ಲಿ ಸೋಮವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಿಡಗಳನ್ನು ನೆಟ್ಟಂತೆ ಅವುಗಳ ಹಾರೈಕೆಯೂ ಮುಖ್ಯ. ಇದಕ್ಕೆ ಸಮುದಾಯ, ನಾಗರಿಕರೂ ಸಹಯೋಗ ನೀಡಬೇಕು ಎಂದು ಹೇಳಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ವೇದವ್ಯಾಸ ಕಾಮತ್, ‘ಮಂಗಳೂರಿನ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಹಸಿರು ಹೆಚ್ಚಿಸಲೇಬೇಕಾದ ಕಾಲ ಬಂದಿದೆ. ಇದಕ್ಕೆ ಸ್ಥಳೀಯ ಸಂಸ್ಥೆಯಾಗಿ ಪಾಲಿಕೆ ಮುಂದಾಗಿದ್ದು, ಸಾರ್ವಜನಿಕರೂ ಸಹಭಾಗಿಗಳಾಗಬೇಕು. ಮಂಗಳೂ ರನ್ನು ಹಸಿರಾಗಿಸಬೇಕೆಂಬ ಉದಯವಾಣಿಯ ಅಭಿಯಾನ ಅನನ್ಯ ಎಂದರು.
ಇಂದು ನೆಟ್ಟ ಸಸಿಗಳು ನಾಳೆಗೆ ಏನಾದವು ಎಂಬು ದನ್ನೂ ಗಮನಿಸಬೇಕು. ಈ ಗಿಡಗಳೇ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ನಮ್ಮ ಮಕ್ಕಳಿಗೆ ಒಳ್ಳೆಯ ಆರೋಗ್ಯವನ್ನು ನೀಡುವ ಸಲುವಾಗಿ ಈ ಕಾರ್ಯಕ್ರಮ. ಈ ಯೋಜನೆಯ ಮೂಲಕ ನಗರದಲ್ಲಿ ಆಭಿವೃದ್ಧಿಯ ಜತೆಗೆ ಪರಿಸರ ಸಮತೋಲನ ರಕ್ಷಣೆಯೂ ನಮ್ಮ ಆದ್ಯತೆ ಎಂದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರಿಗೆ “ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ’ ನೀಡಿ ಮಂಗಳೂರು ಪಾಲಿಕೆ ಗೌರವಿಸಿತು. ಉಪಮೇಯರ್ ಸುನೀತಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದಶೆಟ್ಟಿ, ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ದಿವಾಕರ ಪಾಂಡೇ ಶ್ವರ, ಸ್ಥಾಯೀ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಉದಯವಾಣಿ ಸಂಪಾದಕ ಅರವಿಂದ ನಾವಡ, ಮಂಗಳೂರು ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್.ಮರಿಯಪ್ಪ, ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಮನ ಪಾ ಆಯುಕ್ತ ಆನಂದ ಸಿ.ಎಲ್. ಮುಂತಾ ದವರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.