Heat wave;53.3 ಡಿ.ಸೆ. ತಾಪಮಾನಕ್ಕೆ ಕ್ಯಾಲಿಫೋರ್ನಿಯಾ ತತ್ತರ: 3.6 ಕೋಟಿ ಮಂದಿಗೆ ಸಂಕಷ್ಟ
ಡೆತ್ ವ್ಯಾಲಿ ನೋಡಲು ಹೋದವನು ಸಾವು!
Team Udayavani, Jul 9, 2024, 6:55 AM IST
ಲಾಸ್ಏಂಜಲೀಸ್: ಕ್ಯಾಲಿಫೋರ್ನಿ ಯಾದಲ್ಲಿ ಬಿಸಿಲಿನ ತಾಪ ಮಿತಿ ಮೀರಿ ದ್ದು, ಸೋಮವಾರ ತಾಪಮಾನ 53.3 ಡಿಗ್ರಿ ಸೆ. (128 ಡಿಗ್ರಿ ಫ್ಯಾರನ್ಹೀಟ್)ಗೆ ಏರಿಕೆಯಾಗಿದೆ. ಮಿತಿ ಮೀರಿದ ತಾಪ ದಿಂದಾಗಿ ಡೆತ್ ವ್ಯಾಲಿ ನೋಡಲು ತೆರಳಿದ್ದ ಪ್ರವಾಸಿಗನೊಬ್ಬ ಮೃತ ಪಟ್ಟಿದ್ದಾನೆ.
6 ಮಂದಿ ಡೆತ್ ವ್ಯಾಲಿ ನೋಡಲು ಬೈಕಿನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಅತಿಯಾದ ತಾಪಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದಾನೆ. ಉಳಿದವರಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
3.6 ಕೋಟಿ ಮಂದಿಗೆ ಸಂಕಷ್ಟ: ಧೀರ್ಘಾವಧಿಯಿಂದ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಇದ ರಿಂದಾಗಿ ಸುಮಾರು 3.6 ಕೋಟಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಲಿ ಫೋರ್ನಿಯಾದಲ್ಲಿ ಉಷ್ಣಾಂಶ 43.3 ಡಿ.ಸೆ. ದಾಖಲಾಗಿದೆ. ಡೆತ್ ವ್ಯಾಲಿಯಲ್ಲಿ ಗರಿಷ್ಠ 53.3 ಡಿಗ್ರಿ ದಾಖಲಾಗಿದೆ.
ಹೆಚ್ಚುತ್ತಿರುವ ತಾಪಮಾನವು ಕಾಡ್ಗಿಚ್ಚಿನ ಭೀತಿಯನ್ನೂ ಹೆಚ್ಚಿಸಿದೆ. ಬೇಸಗೆ ಆರಂಭವಾದಾಗಿನಿಂದ ಈವರೆಗೆ ಕ್ಯಾಲಿಫೋರ್ನಿಯಾದಲ್ಲಿ 50ಕ್ಕೂ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.