Congress Guranteeಗಳ ಸಮೀಕ್ಷೆ ವೇಗ ಪಡೆಯಲಿ: ಸಿಎಂ ಸಿದ್ದರಾಮಯ್ಯ ಸೂಚನೆ
ಸದ್ಯದ ಮಾಹಿತಿ ಪ್ರಕಾರ ಹಣ್ಣು, ತರಕಾರಿ ಖರೀದಿಗೆ ಗೃಹಲಕ್ಷ್ಮಿ ಬಳಸಿದ ಶೇ. 43 ಜನ, ಶೇ. 98 ಮಂದಿಗೆ ಸಿಕ್ಕಿದೆ ಉಚಿತ ಪ್ರಯಾಣ ಲಾಭ
Team Udayavani, Jul 9, 2024, 7:20 AM IST
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾ.1 ರಿಂದ ಮಾ.15ರ ವರೆಗೆ ಸಮೀಕ್ಷೆ ನಡೆದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಶೇ.100ರಷ್ಟು ಸಮೀಕ್ಷೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯ ಚುರುಕುಗೊಳಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 84.52 ಲಕ್ಷ ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ. ಸಮೀಕ್ಷೆಗೆ 72,435 ಅಂಗನವಾಡಿ ಕಾರ್ಯಕರ್ತೆಯರು, 42,417 ಆಶಾ ಕಾರ್ಯಕರ್ತೆಯರು, 2,233 ಬಿಬಿಎಂಪಿ ಸಮೀಕ್ಷಕರು, 581 ನಗರಾಭಿವೃದ್ಧಿ, ಹಾಗೂ ಆರ್‌ಡಿಪಿಆರ್ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದೆ.
ಸದ್ಯದ ಸಮೀಕ್ಷಾ ಫಲಿತಾಂಶ
ಗೃಹಜ್ಯೋತಿ
– ಶೇ. 98 ಜನರು ಉಚಿತ ವಿದ್ಯುತ್ ತಮ್ಮ ಜೀವನಮಟ್ಟ ಸುಧಾರಿಸಿದೆ ಎಂದಿದ್ದಾರೆ.
– ಶೇ. 29ರಷ್ಟು ಜನರು ಉಳಿಕೆ ಹಣ ಅಧ್ಯಯನಕ್ಕೆ ಬಳಸಿದ್ದಾರೆ.
– ಶೇ. 33ರಷ್ಟು ಜನರು ಹಣವನ್ನು ಉಳಿತಾಯಕ್ಕೆ ಬಳಸಿದ್ದಾರೆ.
ಗೃಹಲಕ್ಷ್ಮಿ
– ಶೇ. 43ರಷ್ಟು ಜನರು ಹಣ್ಣು ಮತ್ತು ತರಕಾರಿ ಖರೀದಿಗೆ ಬಳಸಿದ್ದಾರೆ.
-ಶೇ. 13ರಷ್ಟು ಜನರು ಮಕ್ಕಳ ಶಿಕ್ಷಣಕ್ಕೆ ಬಳಸಿದ್ದಾರೆ.
-ಶೇ. 15ರಷ್ಟು ವೈದ್ಯಕೀಯ ವೆಚ್ಚಕ್ಕೆ ಬಳಕೆ.
-ಶೇ. 23ರಷ್ಟು ಜನರು ಗೃಹ ಕೃತ್ಯಕ್ಕೆ ಬಳಕೆ.
ಶಕ್ತಿ
– ಶೇ. 98ರಷ್ಟು ಜನರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ.
– ಶೇ. 94ರಷ್ಟು ಜನರು ಉಚಿತ ಪ್ರಯಾಣ ಪಡೆಯುವುದು ಸುಲಭ ಎಂದಿದ್ದಾರೆ.
ಅನ್ನಭಾಗ್ಯ
– ಶೇ. 90ರಷ್ಟು ಜನರು ಅಕ್ಕಿಯ ಜತೆಗೆ ಇತರೆ ಧಾನ್ಯ ಬೇಕೆಂದು ಕೇಳಿದ್ದಾರೆ.
ಯುವನಿಧಿ
– ಶೇ. 73ರಷ್ಟು ಯುವಕರು ಆರ್ಥಿಕ ಒತ್ತಡ ಕಡಿಮೆಯಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.