Valmiki ನಿಗಮ ಅಕ್ರಮಕ್ಕೆ ಮೇಲಿನಿಂದ ಒತ್ತಡ ಕಾರಣ?
ಇಬ್ಬರು ಅಧಿಕಾರಿಗಳದ್ದು ಎನ್ನಲಾದ ಆಡಿಯೋ ವೈರಲ್
Team Udayavani, Jul 10, 2024, 6:50 AM IST
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮಕ್ಕೆ “ಮೇಲಿನಿಂದ’ ಒತ್ತಡ ಕಾರಣವೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಹಗರಣಕ್ಕೆ ಸಂಬಂಧಿಸಿ ಎಸ್‌ಐಟಿ ಬಲೆಗೆ ಬಿದ್ದಿರುವ ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಡುವೆ ನಡೆದಿರುವುದು ಎನ್ನಲಾದ ಮಾತುಕತೆಯ ಆಡಿಯೋ.
ನಿಗಮದ ಅಧಿಕಾರಿ, ಶಿವಮೊಗ್ಗದ ಚಂದ್ರಶೇಖರ್ ಸಾವಿಗೂ 2 ದಿನ ಮುಂಚೆ ಪದ್ಮನಾಭ್ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಲೆಕ್ಕ ಪರಿಶೋಧಕ ಪರಶುರಾಮ್ ಅವರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಈ ಮಾತುಕತೆಯ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ, “ಮಿನಿಸ್ಟರ್ ಆಫೀಸಿನಿಂದ ಹೇಳಿದ್ರು’, “ನಾಗರಾಜ್ (ನೆಕ್ಕುಂಟಿ ನಾಗರಾಜ…) ಕಡೆಯಿಂದ ಪ್ರಶರ್ ಬಂತು’ ಎಂಬೆಲ್ಲ ಮಾತುಗಳು ಇದ್ದು, ಅನುಮಾನಕ್ಕೀಡು ಮಾಡಿವೆ.
ವೈರಲ್ ಆದ ಆಡಿಯೋದಲ್ಲಿ ಏನಿದೆ?
ಪದ್ಮನಾಭ್: ಕ್ಯಾಶ್ ಬುಕ್ ನೋಡಬೇಕೆಂದು ಯಾರು ಕರೆ ಮಾಡಿದ್ದು, ಏನಂತೆ?
ಪರಶುರಾಮ್: ಸುನಿಲ್. 2 ಕೋಟಿ ಬಂದಿದೆ ಎಂದರು ಸರ್ ಮೇಡಂ. ನಕ್ಕುಂಟಿ ನಾಗರಾಜ್ ಕಡೆಯವರನ್ನು ನಮ್ಮ ಮುಂದೆ ಮಾಡುತ್ತಾರೆ ಎಂದು ಏನು ಗ್ಯಾರಂಟಿ? ನಿಮ್ಮ ಸಂಪರ್ಕದಲ್ಲಿ ಯಾರಿದ್ದಾರೆ ಸರ್?
ಪದ್ಮನಾಭ್: ಅದೇ ನಾಗರಾಜ್ ಬಾಮೈದ.
ಪರಶುರಾಮ್: ನಾನ್ ಅವತ್ತೆ ಹೇಳಿದ್ದೆ ಸರ್ ಬೇಡ ಅಂತಾ.
ಪದ್ಮನಾಭ್: ನಾವು ಅದನ್ನ ಹೇಳಲೇಬಾರದು, ಮಿನಿಸ್ಟರ್ ಆಫೀಸಿನಿಂದ ಹೇಳಿದ್ರು, ನಾಗರಾಜ್ (ನೆಕ್ಕುಂಟಿ ನಾಗರಾಜ…) ಕಡೆ
ಯಿಂದ ಪ್ರಶರ್ ಬಂತು. ನಾವು ಇದ್ದ ಅಕೌಂಟ್ ಟ್ರಾನ್ಸ್‌ಫರ್ ಮಾಡಿ ಕೊಟ್ಟಿದ್ದೇವೆ. ಎಲ್ಲ ಫೇಕ್ ಸಿಗ್ನೇಚರ್ ಎಂಬುದು ನಿಜಾನಾ? ದುಡ್ಡು ಬಂದ ಮೇಲೆ ಆ್ಯಕ್ಷನ್ ತೆಗೆದುಕೊಳ್ಳೋಣ.
ಪರಶುರಾಮ್: ಪ್ರಾಬ್ಲಿಂ ಆಗತ್ತೆ ಸರ್, ಬ್ಯಾಂಕಿನವರು ಕೇಸ್ ಮಾಡಿದ್ರೆ, ನಮ್ಮ ದುಡ್ಡು ನಮಗೆ ಕೊಡುತ್ತಾರಾ ಅವರು ಅಂತಾ?
ಪದ್ಮನಾಭ್: ಈಗ ಅಧ್ಯಕ್ಷರಿಗೆ ಹೇಳ್ಳೋದಾ ಬೇಡ್ವಾ? ಅಧ್ಯಕ್ಷರಿಗೆ ಹೇಳಿದರೆ ದೊಡ್ಡ ರಾದ್ಧಾಂತ ಮಾಡುತ್ತಾರೆ. ಸೋಮವಾರ ಮಂಗಳವಾರ, ಬುಧವಾರ 3 ದಿನ ಬಿಡೋಣ. ಇವತ್ತು ಒಂದು ದಿನ ಮ್ಯಾನೇಜ್ ಮಾಡಿ ಕಳಿಸಿ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಕೌಂಟು ತೋರಿ ಸದೇ ಮ್ಯಾನೇಜ್ ಮಾಡೋಕಾಗಲ್ವಾ?
ಪರಶುರಾಮ್: ಈಗ ಎಲ್ಲವೂ ಗೊತ್ತಾಗುತ್ತಲ್ವ ಸರ್. ಮಾಡಬಹುದು ಸರ್.
ಪದ್ಮನಾಭ್: ಗೊತ್ತಾಗದಂತೆ, ಈಗಿರುವ ಅಮೌಂಟ್‌ಗೆ ಲೆಟರ್ ಕೊಟ್ಟು ಬೇರೆ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವುದು.
ಪದ್ಮನಾಭ: ಚಂದ್ರಶೇಖರನ್ ಎಲ್ಲವನ್ನೂ ಸ್ಟೇಟ್ಮೆಂಟ್ ತರಿಸುವವನು ಮಾ. 31ಕ್ಕೆ ಇದನ್ನ ಯಾಕೆ ತರಿಸಿಲ್ಲ? ಚೆಕ್‌ಬುಕ್ ಬಂದಿಲ್ಲ ಎಂದು ಏಕೆ ಕೇಳಿಲ್ಲ.
ಪರಶುರಾಮ್: ಅವನದ್ದೂ ತಪ್ಪಿದೆ ಸರ್, ಅವನು ಭಾಗಿಯಾಗಿದ್ದಾನೋ, ನೆಗ್ಲಿಜಿನ್ಸಿನೋ ಗೊತ್ತಿಲ್ಲ.
ಪದ್ಮನಾಭ:ಮಾಹಿತಿ ಕೊಟ್ಟಿರುತ್ತಾನೆ. ನಮ್ಮದೆಲ್ಲ ಹಿಂದೆ ಇರುತ್ತೆ ಅಂತಾ ಕೊಟ್ಟವರು ಯಾರು?
ಪರಶುರಾಮ್: ಎಲ್ಲ ಖಾತೆ ಕ್ಲೋಜ್ ಮಾಡಿ ಖಜಾನೆಗೆ ಹಾಕಬಹುದು ಸರ್.
ಸಚಿವರ ಹೆಸರು ತಳುಕು ?
ಪರಶುರಾಮ್: ನಕ್ಕುಂಟೆ ನಾಗರಾಜ್ ಅಕೌಂಟ್ ಓಪನ್ ಮಾಡಿರುವುದು ಮಿನಿಸ್ಟರ್ ಗಮನಕ್ಕಿಲ್ವ ಸರ್?
ಪದ್ಮನಾಭ್: ಅದು ಗೊತ್ತು ಅವರಿಗೆ. ಅವರೇ ಅಲ್ವ ಕರೆಸಿ ಮಾತನಾಡಿಸಿದ್ದು. ನಿನ್ನೆಯೂ ಅಕೌಂಟ್ ಟ್ರಾನ್ಸ್‌ಫರ್‌ಗೆ ಕರೆ ಮಾಡಿದ್ದರಲ್ಲ.
ಪರಶುರಾಮ್: 5 ಕೋಟಿ ಹಾಕಿದ್ದರು ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.