Russia- Austria Visit: ಯುದ್ಧ ನಿಲ್ಲಿಸಿ: ಪುಟಿನ್‌ಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು
ಅಣು ಶಕ್ತಿ, ವ್ಯಾಪಾರ,ಹೂಡಿಕೆ ಸೇರಿ 9 ಒಪ್ಪಂದ
Team Udayavani, Jul 10, 2024, 10:54 AM IST
ಮಾಸ್ಕೋ: ಬಾಂಬ್‌ಗಳು, ಗನ್ ಮತ್ತು ಬುಲೆಟ್‌ಗಳ ಮಧ್ಯೆ ಶಾಂತಿ ಮಾತುಕತೆಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ರಣರಂಗದಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ದೊರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕಿವಿಮಾತು ಹೇಳಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಮೋದಿ ಮಾತುಗಳು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಉಕ್ರೇನ್ ಜತೆಗಿನ ರಷ್ಯಾ ಸಂಘರ್ಷ ಕೊನೆಗಾಣಿಸಲು ಕಾಣಿಕೆ ನೀಡಲು ಭಾರತ ಸಿದ್ಧ ಎಂಬ ಸಂದೇಶವನ್ನು ಮೋದಿ ಅಂತಾರಾಷ್ಟ್ರೀಯ ಸಮುದಾಯ ಹಾಗೂ ಪುಟಿನ್‌ಗೆ ರವಾನಿಸಿದರು. ಪುಟಿನ್ ಜತೆಗಿನ ಶೃಂಗಸಭೆಯ ಬಳಿಕ ಮಾತನಾಡಿದ ಮೋದಿ, ಯುದ್ಧ, ಉಗ್ರ ದಾಳಿಗಳಲ್ಲಿ ಜೀವಹಾನಿಯಾದಾಗ, ಮಾನವತೆಯ ಮೇಲೆ ನಂಬಿಕೆ ಇಟ್ಟವವರಿಗೆ ತೀವ್ರ ಆಘಾತವಾಗುತ್ತದೆ.
ಮುಗ್ಧ ಮಕ್ಕಳು ಸಾಯುತ್ತಿರುವುದನ್ನು ನೋಡುವಾಗ, ಅದು ಕೊಡುವ ನೋವು ಭಯಂಕರ ಎಂದರು. ಉಕ್ರೇನ್‌ನ ಕೀವ್‌ನ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಉಲ್ಲೇಖಿಸಿ ಮೋದಿ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.
ಪುಟಿನ್ ಜತೆ ಸೋಮವಾರ ನಡೆದ ಮಾತುಕತೆ ವೇಳೆ ನಾವು, ಉಕ್ರೇನ್‌ಗೆ ಸಂಬಂಧಿಸಿದಂತೆ ಪರಸ್ಪರ ವಿಚಾರಗಳನ್ನು ಆಲಿಸಿದೆವು. ಶಾಂತಿ ಮತ್ತು ಸ್ಥಿರತೆಯ ಪರವಾಗಿ ಜಾಗತಿಕ ದಕ್ಷಿಣ ರಾಷ್ಟ್ರಗಳಿವೆ ಎಂಬುದನ್ನು ನಿಮ್ಮ ಮುಂದೆ ಹೇಳಲಿಚ್ಛಿಸುತ್ತೇನೆ ಎಂದು ಮೋದಿ ಹೇಳಿದರು.
ಭಾರತದ ಇಂಧನ ವಲಯಕ್ಕೆ ರಷ್ಯಾ ನೀಡಿರುವ ಕೊಡುಗೆಯನ್ನು ಮೋದಿ ಶ್ಲಾಘಿಸಿದರು. ಇಡೀ ಜಗತ್ತೇ ಆಹಾರ, ಇಂಧನ, ರಸಗೊಬ್ಬರ ಕೊರತೆ ಎದುರಿಸುತ್ತಿರುವಾಗ, ನಮ್ಮ ರೈತರು ಯಾವುದೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಮತ್ತು ಭಾರತದ ಸ್ನೇಹವು ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು. ಉಕ್ರೇನ್ ಬಿಕ್ಕಟ್ಟಿಗೆ ಶಾಂತಿ ಯುತ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದ ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳವಾರದ ಭೇಟಿಯೂ ಸೇರಿದರೆ ಕಳೆದ 10 ವರ್ಷಗಳಲ್ಲಿ ಮೋದಿ ಮತ್ತು ಪುಟಿನ್ ಅವರು ಒಟ್ಟು 16 ಬಾರಿ ಮುಖಾ-ಮುಖಿಯಾಗಿದ್ದಾರೆ.
ಅಣು ಶಕ್ತಿ, ವ್ಯಾಪಾರ,ಹೂಡಿಕೆ ಸೇರಿ 9 ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ ಭಾರತ ಮತ್ತು ರಷ್ಯಾ ಪ್ರಮುಖ 9 ಒಪ್ಪಂದಗಳಿಗೆ ಸಹಿ ಹಾಕಿವೆ. ಅಣುಶಕ್ತಿ ಘಟಕ ನಿರ್ಮಾಣ ಮಾತ್ರವಲ್ಲದೇ, ವ್ಯಾಪಾರ, ಹವಾಮಾನ ಬದಲಾವಣೆ, ಸಂಶೋಧನೆ, ಬಂಡವಾಳ ಹೂಡಿಕೆ ಮತ್ತು ಬಿಸಿನೆಸ್ ರಷ್ಯಾ ಸೇರಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 9 ಒಪ್ಪಂದ ಹಾಗೂ ತಿಳಿವಳಿಕಾ ಪತ್ರಗಳಿಗೆ ಸಹಿ ಹಾಕಲಾಗಿದೆ. ಭಾರತ ಹಾಗೂ ರಷ್ಯಾದ ವಿವಿಧ ಸಂಸ್ಥೆಗಳ ನಡುವೆ ಈ ಒಪ್ಪಂದಗಳು ಏರ್ಪಟ್ಟಿವೆ. ಇದರೊಂದಿಗೆ ಮೋದಿ ಅವರ ರಷ್ಯಾ ಪ್ರವಾಸ ಫಲಪ್ರದವಾಗಿದೆ.
ರಕ್ತಸಿಕ್ತ ಕ್ರಿಮಿನಲ್‌ಗೆ ಅಪ್ಪುಗೆ: ಉಕ್ರೇನ್ ಪ್ರಧಾನಿ ಮೋದಿ-ಪುಟಿನ್ ಭೇಟಿ ಬಗ್ಗೆ ಉಕ್ರೇನ್ ಆಕ್ರೋಶ ವ್ಯಕ್ತಪಡಿಸಿದೆ. “ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯು (ಮೋದಿ) ರಕ್ತ ಸಿಕ್ತ ಕ್ರಿಮಿನಲ್ (ಪುಟಿನ್) ಅನ್ನು ಆಲಿಂ ಗಿಸಿಕೊಂಡಿರುವುದು ನಿಜಕ್ಕೂ ಭಾರೀ ನಿರಾಸೆ ಉಂಟು ಮಾಡಿದೆ. ಶಾಂತಿ ಸ್ಥಾಪನೆಯ ಯತ್ನಕ್ಕೆ ಇದು ಭಾರೀ ಹೊಡೆತ ಕೊಟ್ಟಿದೆ’ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.
ಆಸ್ಟ್ರಿಯಾಗೆ ಬಂದಿಳಿದ ಮೋದಿ
ರಷ್ಯಾ ಪ್ರವಾಸ ಮುಗಿಸಿಕೊಂಡು ಮೋದಿ ಮಂಗಳವಾರ ಆಸ್ಟ್ರಿಯಾಗೆ ಬಂದಿಳಿದರು. ವಿಯೆನ್ನಾದಲ್ಲಿ ಮೋದಿಯನ್ನು ಆಸ್ಟ್ರಿಯಾ ವಿದೇಶಾಂಗ ಸಚಿವರು ಬರಮಾಡಿಕೊಂಡರು. ಆಸ್ಟ್ರಿಯಾಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ಮೋದಿ ಹೇಳಿದ್ದಾರೆ. ಆಸ್ಟ್ರಿಯಾ ಚಾನ್ಸಲರ್ ಜತೆ ಮೋದಿ ಮಾತುಕತೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.