ರಸ್ತೆಯನ್ನೇ ನುಂಗಿ ಹಾಕಿದ ರಬ್ಬರ್ ತೋಟದ ಕಳೆನಾಶಕ ಬಳ್ಳಿ
Team Udayavani, Jul 10, 2024, 2:16 PM IST
ಪುಂಜಾಲಕಟ್ಟೆ: ರಸ್ತೆ ಬದಿ ಹಚ್ಚ ಹಸಿರಾದ ಬಳ್ಳಿ ಹಬ್ಬಿದ ದೃಶ್ಯಗಳು ಮನಸ್ಸಿಗೆ ಖುಷಿಕೊಟ್ಟರೂ ಈ ಹಸುರು ಬಳ್ಳಿ ಸಿಕ್ಕಾಪಟ್ಟೆ ಬೆಳೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ.
ಬಂಟ್ವಾಳ-ಮೂಡುಬಿದಿರೆ ರಾಜ್ಯ ರಸ್ತೆಯ ಬಂಡಸಾಲೆ-ಸೊರ್ನಾಡು ನಡುವೆ ಎರಡು ರಸ್ತೆ ತಿರುವುಗಳಿದ್ದು ಅವುಗಳ ಆರಂಭದಲ್ಲಿ ಎರಡೂ ಕಡೆಯಿಂದ ರಸ್ತೆ ತಿರುವಿನ ಎಚ್ಚರಿಕೆ ಚಿಹ್ನೆಯ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿರುವ ರಬ್ಬರ್ ತೋಟದ ಮಾಲಕರು ಕಳೆ ಬೆಳೆ ತಡೆಯಲು ಬೆಳೆಸಿರುವ ಈ ಬಳ್ಳಿ ರಸ್ತೆ ಬದಿಯುದ್ದಕ್ಕೂ ಹರಡಿ ಸೂಚನ
ಫಲಕದ ಕಂಬದ ಮೇಲೇರಿ ಸೂಚನ ಫಲಕವನ್ನು ಮರೆ ಮಾಡಿದೆ.
ರಸ್ತೆ ಸಂಚಾರದ ವೇಳೆ ಸುರಕ್ಷತೆಗಾಗಿ ರಸ್ತೆ ತಿರುವುಗಳು, ಉಬ್ಬು-ತಗ್ಗುಗಳು,ರಸ್ತೆ ವಿಭಾಜಕಗಳು ಮೊದಲಾದವುಗಳನ್ನು ವಾಹನ ಚಾಲಕರು ಗಮನಿಸಲು ಇಂತಹ ಸೂಚನ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಅಳವಡಿಸುತ್ತಾರೆ. ಇಲ್ಲಿ ಇಂತಹ ಸೂಚನ ಫಲಕವನ್ನು ಅಳವಡಿಸಿದ್ದರೂ ಅವುಗಳು ಮಾತ್ರ ವಾಹನ ಚಾಲಕರ ಕಣ್ಣಿಗೆ ಬೀಳುವಂತಿಲ್ಲ !, ಕಾರಣ
ಇಷ್ಟೇ ರಬ್ಬರ್ ತೋಟದಲ್ಲಿ ಬೆಳೆಸಿದ ಕಳೆ ನಾಶಕ ಬಳ್ಳಿಗಳು ಎಲ್ಲೆಡೆಯೂ ಹಬ್ಬಿ ಈ ಫಲಕಗಳನ್ನು ಆವರಿಸಿದೆ. ಜತೆಗೆ ಬಳ್ಳಿಗಳು
ರಸ್ತೆ ಬದಿಯಲ್ಲಿ ಆವರಿಸಿ ಪಾದಚಾರಿಗಳಿಗೆ ನಡೆದಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸವುದರಿಂದ ವಾಹನಗಳು ಸರಾಗವಾಗಿ ಸಾಗಲು ಅನನುಕೂಲವಾಗುತ್ತಿದೆ.
ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆ ಬದಿ ರಬ್ಬರ್ ತೋಟ ಇರುವ ಕಡೆ ಸಂಚರಿಸುವಾಗ ಕಂಡುಬರುವ ಈ ಬಳ್ಳಿ ಸಸ್ಯ ಜೀವ ವೈವಿಧ್ಯಗಳಿಗೂ ಅಪಾಯಕಾರಿಯಾಗಿದೆ. ರಬ್ಬರ್ ಬೆಳೆಯುವಾಗ ಮೊದಲ ಮೂರು ನಾಲ್ಕು ವರ್ಷ ಮಣ್ಣು ಸವಕಳಿ ತಡೆಗೆ ಅಗತ್ಯವೆಂದು ಬೆಳೆಸಿದ ಈ ಬಳ್ಳಿ ಮರ ಬೆಳೆದ ಅನಂತರ ತೋಟದಿಂದ ಹೊರಬಂದು ಇಡೀ ಸಸ್ಯವರ್ಗಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಬಳ್ಳಿ ಇರುವಲ್ಲಿ ಅದರದ್ದೇ ಸರ್ವಾಧಿಕಾರ.
ಇದು ಬೇರೆ ಯಾವ ಸಸ್ಯವನ್ನೂ ಬೆಳೆಯಲು ಬಿಡದ ಸಾರ್ವಭೌಮ ಎಂದೇ ಹೇಳಬಹುದು. ಮಳೆಗಾಲದಲ್ಲಂತೂ ಅದು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಿ ಅಲ್ಲಿನ ಸಸ್ಯಗಳು, ಮರಗಳ ಮೇಲೆ ಏರಿ ಅದರ ಬೆಳವಣಿಗೆಯನ್ನು ಹತ್ತಿಕ್ಕುವ ಮೂಲಕ ಜೀವವೈವಿಧ್ಯಕ್ಕೆ ಕುತ್ತು ತರುತ್ತದೆ. ಸರಕಾರ, ಅರಣ್ಯ ಇಲಾಖೆ, ಪರಿಸರ ಕಳಕಳಿ ಉಳ್ಳವರು ಇದನ್ನು ಗಂಭೀರ ವಿಷಯವಾಗಿ
ಪರಿಗಣಿಸಬೇಕಾಗಿದೆ.
ರಸ್ತೆ ಬದಿ ಇರುವ ಪೊದೆ, ಗಿಡಗಂಟಿಗಳು, ಮರದ ಗೆಲ್ಲುಗಳನ್ನು ಯಾವಾಗಲಾದರೂ ಒಮ್ಮೆ ಕಡಿದು ಸ್ವಚ್ಛಗೊಳಿಸಲಾಗುತ್ತದೆ.
ಆದರೆ ಈ ಬಳ್ಳಿಗಳನ್ನು ಕಡಿದು ವಾಹನ ಸಂಚಾರವನ್ನು ಸುಗಮಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದುದರಿಂದ ತಿರುವುಗಳಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣದೆ ಅಪಘಾತವಾಗುವ ಸಂಭವನೀಯತೆ ಇದೆ. ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸಂಬಂಧಿಸಿದ ಇಲಾಖೆ
ಗಮನಕೊಡಬೇಕಾಗಿದೆ.
ಹಾವು ಬದುಕುವುದೇ ಇಲ್ಲ ಎಂದರೆ…
ರಬ್ಬರ್ ತೋಟ ಮಾಡಿದವರಲ್ಲಿ ಈ ಜಾತಿಯ ಬಳ್ಳಿ ಇರುವಾಗ ಅದರಲ್ಲಿ ಟ್ಯಾಪಿಂಗ್ ಗಾಗಿ ನಸುಕಿನಲ್ಲಿ ಓಡಾಡುವಾಗ ಹಾವು ಸಿಗಲಾರದೇ ಎಂದರೆ ಇಲ್ಲಿ ಹಾವು ಬದುಕುವುದೇ ಇಲ್ಲ ಎನ್ನುತ್ತಾರೆ!. ಸಸ್ಯ, ಹಾವು, ಪ್ರಾಣಿ,ಪಕ್ಷಿ ಮುಂತಾದ ಜೀವ
ವೈವಿಧ್ಯಗಳ ಬದುಕಿಗೆ ಸಂಚಕಾರವಾದ ಜತೆಗೆ ನೈರ್ಮಲ್ಯಕ್ಕೂ ತೊಂದರೆಯಾದ ಈ ಬಳ್ಳಿಯನ್ನು ಸಾರ್ವಜನಿಕ ಭೂಮಿಯಲ್ಲಿ ಬೆಳೆಯಲು ಬಿಡುವುದು ತಪ್ಪು ಎಂದೂ ಹಲವರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.