Uttarkhand: ಧಾರಾಕಾರ ಮಳೆ, ಭೂ ಕುಸಿತ-ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್
Team Udayavani, Jul 10, 2024, 3:34 PM IST
ಉತ್ತರಾಖಂಡ್(ಚಮೋಲಿ): ಉತ್ತರಾಖಂಡದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಚಮೋಲಿಯ ಪಾತಾಳ್ ಗಂಗಾ ಲಾಂಗ್ಸಿ ಸುರಂಗದ ಬಳಿ ಬುಧವಾರ (ಜುಲೈ10) ಭಾರೀ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು, ಇದರ ಪರಿಣಾಮ ಜೋಶಿಮಠ-ಬದರಿನಾಥ್ ಸಂಪರ್ಕಿಸುವ ನ್ಯಾಷನಲ್ ಹೈವೇ 7 ಬಂದ್ ಅಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಎದುರು ವಂದೇ ಮಾತರಮ್ ಹಾಡಿದ ಆಸ್ಟ್ರಿಯ ಗಾಯಕರು
ಚಮೋಲಿ ಪೊಲೀಸರು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ಗುಡ್ಡದ ಮೇಲಿಂದ ಭಾರೀ ಗಾತ್ರದ ಕಲ್ಲು ಕುಸಿದು ಬೀಳುತ್ತಿರುವ ದೃಶ್ಯವಿದ್ದು, ಇದು ರಸ್ತೆ ಮೇಲೆ ಬಿದ್ದಿದ್ದರಿಂದ ಈ ಮಾರ್ಗ ಬಂದ್ ಆಗಿರುವುದಾಗಿ ವರದಿ ವಿವರಿಸಿದೆ.
ಮಂಗಳವಾರ ಕೂಡಾ ಇಂತಹ ಘಟನೆ ನಡೆದಿದ್ದು, ಜೋಶಿಮಠ ಸಮೀಪದ ಚುಂಡು ಧಾರ್ ನಲ್ಲಿ ಗುಡ್ಡ ಕುಸಿದು ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದರಿಂದ ಚಾರ್ ಧಾಮ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ದೇಶದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು, ಮುಂಬೈ, ಕರ್ನಾಟಕದ ಕೆಲವೆಡೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿರುವುದಾಗಿ ತಿಳಿಸಿದೆ.
𝐑𝐨𝐚𝐝 𝐔𝐩𝐝𝐚𝐭𝐞 𝐓𝐢𝐦𝐞 𝟏𝟐:𝟏𝟓 𝐏𝐌
बद्रीनाथ राष्ट्रीय राजमार्ग पर पातालगंगा लंगसी टनल के पास पहाडी से भूस्खलन होने के कारण सड़क मार्ग अवरुद्ध हो गया है। pic.twitter.com/mymN544uYe
— Chamoli Police Uttarakhand (@chamolipolice) July 10, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.