ದೀಪಿಕಾ – ರಣ್ಬೀರ್‌: ಮದುವೆ ಬಳಿಕವೂ ಬಿಂದಾಸ್‌ ಆಗಿ ಹಾಟ್ ಸೀನ್‌ಗಳಲ್ಲಿ ನಟಿಸಿದ ಸ್ಟಾರ್‌ಗಳು


Team Udayavani, Jul 10, 2024, 5:51 PM IST

ದೀಪಿಕಾ – ರಣ್ಬೀರ್‌: ಮದುವೆ ಬಳಿಕವೂ ಬಿಂದಾಸ್‌ ಆಗಿ ಹಾಟ್ ಸೀನ್‌ಗಳಲ್ಲಿ ನಟಿಸಿದ ಸ್ಟಾರ್‌ಗಳು

ಮುಂಬಯಿ: ಸಿನಿಮಾಗಳಲ್ಲಿ ಕಲಾವಿದರು ನಾನಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಾರೆ. ಸ್ಕ್ರಿಪ್ಟ್‌ಗೆ ಅಗತ್ಯವಾಗಿದ್ದರೆ ಕಲಾವಿದರು ಯಾವುದೇ ಸೀನ್‌ನಲ್ಲಿ ನಟಿಸಲು ಹಿಂದೇಟು ಹಾಕುವುದಿಲ್ಲ

ಕೆಲ ನಟ – ನಟಿಯರು ಯಾವುದೇ ಮುಲಾಜಿಲ್ಲದೆ ಚಿತ್ರಕ್ಕೆ ಅಗತ್ಯವೆನ್ನಿಸಿದ್ದಲ್ಲಿ ಬೋಲ್ಡ್‌ ಹಾಗೂ ಬಿಂದಾಸ್‌ ಆಗಿ ಸ್ಕ್ರೀನ್‌ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಬೋಲ್ಡ್‌ ದೃಶ್ಯಗಳ (Bold scene) ವಿಚಾರಕ್ಕೆ ಬಂದರೆ ಬಾಲಿವುಡ್‌ (Bollywood) ಒಂದು ಹೆಜ್ಜೆ ಮುಂದಿದೆ. ಬಾಲಿವುಡ್‌ ನಲ್ಲಿ ಇತ್ತೀಚೆಗೆ ಬಂದಿರುವ ಕೆಲ ಸಿನಿಮಾಗಳಲ್ಲಿ ಬೋಲ್ಡ್‌ ದೃಶ್ಯಗಳೇ ಹೆಚ್ಚಿರುವುದನ್ನು ಕಾಣಬಹುದು.

ಆದರೆ ಎಲ್ಲಾ ಬೋಲ್ಡ್‌ ದೃಶ್ಯಗಳನ್ನು ಸ್ಕ್ರೀನ್‌ ಮೇಲೆ ತೋರಿಸಲು ಆಗುವುದಿಲ್ಲ. ಇದರಲ್ಲಿ ಕೆಲ ದೃಶ್ಯಗಳಿಗೆ ಸೆನ್ಸಾರ್‌ ಬೋರ್ಡ್‌(Censor Board) ಕತ್ತರಿ ಹಾಕುತ್ತದೆ.

ಸಾಮಾನ್ಯವಾಗಿ ಮದುವೆ ಬಳಿಕ ಕೆಲ ಕಲಾವಿದರು ಬೋಲ್ಡ್‌ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಬಾಲಿವುಡ್‌ ನಲ್ಲಿ ಹೀಗೆ ಆಗಿರುವುದು ಕಡಿಮೆ. ಮದುವೆಯ ಬಳಿಕವೂ ಬಾಲಿವುಡ್‌ ನ ಕೆಲ ಖ್ಯಾತ ಕಲಾವಿದರು ಬಿಗ್‌ ಸ್ಕ್ರೀನ್‌ ನಲ್ಲಿ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ – ಸಿದ್ಧಾಂತ್ ಚತುರ್ವೇದಿ: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮದುವೆಗಿಂತ ಮೊದಲ ಅನೇಕ ಸಿನಿಮಾಗಳಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಪತಿ ರಣವೀರ್‌ ಸಿಂಗ್‌ (Ranveer Singh) ಅವರೊಂದಿಗೆ ಆನ್‌ ಸ್ಕ್ರೀನ್‌ ನಲ್ಲಿ ಅವರು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.  ಆದರೆ 2022ರಲ್ಲಿ ಓಟಿಟಿಯಲ್ಲಿ ರಿಲೀಸ್‌ ಆದ ʼಗೆಹ್ರೈಯಾನ್ʼ ಚಿತ್ರದಲ್ಲಿ ಯುವನಟ ಸಿದ್ಧಾಂತ್‌ (Siddhant Chaturvedi) ಅವರೊಂದಿಗೆ ಹಾಟ್‌ ಸೀನ್‌ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದ್ದರು.

ವಿಕ್ಕಿ ಕೌಶಲ್ ಮತ್ತು ತೃಪ್ತಿ ದಿಮ್ರಿ:

ಸದ್ಯ ಇಂಟರ್‌ ನೆಟ್‌ ನಲ್ಲಿ ವಿಕ್ಕಿ ಕೌಶಲ್‌(Vicky Kaushal) ಹಾಗೂ ತೃಪ್ತಿ ದಿಮ್ರಿ (Tripti Dimri) ಕಿಚ್ಚು ಹಚ್ಚಿದ್ದಾರೆ. ಅವರಿಬ್ಬರ ಮುಂದಿನ ಸಿನಿಮಾವಾದ ʼಬ್ಯಾಡ್‌ ನ್ಯೂಸ್‌ʼ ಚಿತ್ರದ ʼಜಾನಮ್ʼ ಎನ್ನುವ ಹಾಡಿನಲ್ಲಿ ಕತ್ರಿನಾ ಕೈಫ್‌ ಪತಿ ವಿಕ್ಕಿ ಕೌಶಲ್‌ ಜೊತೆ ಹಾಟ್‌ & ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಡುಡುಗೆ ತೊಟ್ಟು  ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ವಿಕ್ಕಿ ಕೌಶಲ್‌ ಹಾಗೂ ತೃಪ್ತಿ ರೊಮ್ಯಾನ್ಸ್‌ ಮಾಡಿರುವುದು ಇಂಟರ್‌ ನೆಟ್‌ ನಲ್ಲಿ ವೈರಲ್‌ ಆಗಿದೆ.

ಚಿತ್ರವನ್ನು ಆನಂದ್ ತಿವಾರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನೇಹಾ ಧೂಪಿಯಾ, ಅನನ್ಯ ಪಾಂಡೆ ಮತ್ತು ಆಮಿ ವಿರ್ಕ್ ಮುಂತಾದವರು ನಟಿಸಿದ್ದಾರೆ. ಜು.19ರಂದು ಚಿತ್ರ ರಿಲೀಸ್‌ ಆಗಲಿದೆ.

ರಣ್ಬೀರ್‌ ಕಪೂರ್‌ – ತೃಪ್ತಿ ದಿಮ್ರಿ: 2023ರಲ್ಲಿ ಬಂದ ರಣ್ಬೀರ್‌ ಕಪೂರ್‌ (Ranbir Kapoor) ಅವರ ʼಅನಿಮಲ್‌ʼ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಯಶಸ್ಸು ಗಳಿಸಿತು. ಸಿನಿಮಾ ಗಳಿಕೆಯ ವಿಚಾರದೊಂದಿಗೆ ವಿವಾದದಿಂದಲೂ ಸದ್ದು ಮಾಡಿತ್ತು. ರಣ್ಬೀರ್‌ ಕಪೂರ್‌ ಸೀನ್‌ವೊಂದರಲ್ಲಿ ಬೆತ್ತಲಾಗಿ ನಟಿಸಿದ್ದರು ಎನ್ನುವ ಮಾತು ಎಲ್ಲೆಡೆ ಕೇಳಿಬಂದಿತ್ತು.

ತೃಪ್ತಿ ದಿಮ್ರಿ ಅವರೊಂದಿಗೆ ಕೆಮಿಸ್ಟ್ರಿ ಹಾಗೂ ಬೋಲ್ಡ್‌ ದೃಶ್ಯಗಳ ತುಣುಕು ಇಂಟರ್‌ ನೆಟ್‌ ನಲ್ಲಿ ಭಾರೀ ಚರ್ಚೆಯಾಗಿತ್ತು.

ರಣ್ವೀರ್‌ ಸಿಂಗ್‌ – ಆಲಿಯಾ ಭಟ್:‌ ಕಳೆದ ವರ್ಷ ತೆರೆಕಂಡ ರಣ್ವೀರ್‌ ಸಿಂಗ್‌ – ಆಲಿಯಾ ಭಟ್‌ (Alia Bhatt) ಅವರ ʼರಾಕಿ ಔರ್‌ ರಾಣಿ ಕೀ ಪ್ರೇಮ್‌ ಕಹಾನಿʼ ಚಿತ್ರ ಬಾಲಿವುಡ್‌ ನಲ್ಲಿ ಯಶಸ್ಸು ಗಳಿಸಿತು. ಚಿತ್ರದಲ್ಲಿ ಶಬಾನ ಅಜ್ಮಿ ಹಾಗೂ ಧರ್ಮೇಂದ್ರ ಅವರ ಕೆಲ ಸೀನ್‌ ಗಳ ಬಗ್ಗೆಯೂ ಚರ್ಚೆ ಆಗಿತ್ತು.

ರಣ್ವೀರ್‌ – ಆಲಿಯಾ ಹೋಟೆಲ್ ಕಾರಿಡಾರ್ ಮತ್ತು ಮೆಟ್ಟಿಲುಗಳ ಮೇಲೆ ರೊಮ್ಯಾನ್ಸ್‌ ಮಾಡುವ ದೃಶ್ಯ ಚಿತ್ರದಲ್ಲಿತ್ತು. ಆದರೆ ಅತಿಯಾದ ಬೋಲ್ಡ್‌ ದೃಶ್ಯವಾದ ಕಾರಣ ಇದನ್ನು ಸೆನ್ಸಾರ್‌ ನಲ್ಲಿ ತೆಗೆದು ಹಾಕಲಾಗಿತ್ತು. ಆ ಬಳಿಕ ಇಂಟರ್‌ ನೆಟ್‌ ನಲ್ಲಿ ಈ ದೃಶ್ಯಗಳು ಹರಿದಾಡಿತ್ತು. ರಣಬೀರ್ ಕಪೂರ್ ಜೊತೆ ಮದುವೆಯಾದ ನಂತರ ಆಲಿಯಾ ಭಟ್ ನಟಿಸಿದ ಎರಡನೇ ಚಿತ್ರ ಇದಾಗಿತ್ತು.

ಶಾಹಿದ್ ಕಪೂರ್ ಮತ್ತು ಕೃತಿ ಸನೋನ್: ಶಾಹಿದ್‌ ಕಪೂರ್(Shahid Kapoor) ಹಾಗೂ ಕೃತಿ‌ ಸನೋನ್ (Kriti Sanon) ಅಭಿನಯದ ʼ ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾʼ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಇಬ್ಬರು ಬೋಲ್ಡ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ದೃಶ್ಯಗಳನ್ನು ಸೆನ್ಸಾರ್‌ ನಿಂದ ತೆಗೆದು ಹಾಕಲಾಗಿತ್ತು.

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

1-sssk

Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್‌!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.