UV Fusion-Cinema: ಕಜಕಿಸ್ತಾನ ಸಿನಿಮಾ-ಓಲ್ಡ್ ಮ್ಯಾನ್
Team Udayavani, Jul 10, 2024, 5:15 PM IST
ಇದು ಕಜಕ್ತಿಸ್ತಾನದ ಸಿನಿಮಾ.
ಕಜಕಿಸ್ತಾನದ ಭಾಷೆ ಹಾಗೂ ರಷ್ಯನ್ ಭಾಷೆಯಲ್ಲೂ 2012 ರಲ್ಲಿ ರೂಪಿತವಾದ ಸಿನಿಮಾ. ಅರ್ಮೆಕ್ ತಸ್ರುನೊವ ಇದರ ನಿರ್ದೇಶಕ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಅರ್ನೆಸ್ಟ್ ಹೆಮ್ಮಿಂಗ್ವೆ ನ ದಿ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ ಕಾದಂಬರಿಯಿಂದ ಪ್ರಭಾವಿತವಾಗಿರುವಂಥದ್ದು. ಅದರಲ್ಲಿನ ಪಾತ್ರಗಳಿಗೂ ಈ ಸಿನಿಮಾದ ಪಾತ್ರಗಳಿಗೂ ಸಾಕಷ್ಟು ಸಾಮ್ಯತೆಗಳಿವೆ.
ಒಬ್ಬ ಇಳಿ ವಯಸ್ಸಿನವ ಕಾಸಿನ್ (ಎರ್ಬುಲಟ್ ತೊಗೊಜೊಕೊವ), ತನ್ನ ಮಗಳು ಹಾಗೂ ಮೊಮ್ಮಗನೊಂದಿಗೆ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾನೆ. ಆದರೆ ಈತ ಮೀನುಗಾರನಲ್ಲ, ಸಮುದ್ರವೂ ಇಲ್ಲ. ಬದಲಾಗಿ ಒಬ್ಬ ಕುರಿಗಾಹಿ. ಕುದುರೆಯೊಂದಿಗೆ ಬದುಕುತ್ತಿರುತ್ತಾನೆ. ಫುಟ್ ಬಾಲ್ ಪ್ರೇಮಿ.
ಅಜ್ಜ ಮತ್ತು ಮೊಮ್ಮಗನೊಂದಿಗಿನ ಆತ್ಮೀಯತೆ ದಿನೇದಿನೆ ಗಟ್ಟಿಯಾಗುತ್ತಾ ಹೋಗುತ್ತದೆ. ಒಮ್ಮೆ ಸಂದರ್ಭಗಳೆಂಬ ಸಂಕಷ್ಟಗಳು ಬಿರುಗಾಳಿಯಂತೆ ತೋಳದ ರೂಪದಲ್ಲಿ ಅವನ ಮೇಲೆ ಎರಗಿದಾಗ ಅದನ್ನು ಎದುರಿಸುವ ಕಾಸಿನ್ ಗೆ ಬದುಕು ದೊಡ್ಡದಾಗಿ ಕಾಣುತ್ತದೆ. ಹಾಗೆಯೇ ತನ್ನ ಮೂಲ ಸಂಸ್ಕೃತಿ-ಸಂಗತಿಗಳನ್ನು ತನ್ನ ಮುಂದಿನ ತಲೆಮಾರಿಗೆ ವರ್ಗಾಯಿಸುವ ಕಾರ್ಯವನ್ನೂ ಯಶಸ್ವಿಯಾಗಿ ಮಾಡುತ್ತಾನೆ. ಇದೊಂದು ಸಾಹಸಮಯ ಹಾಗೂ ಜೀವನ ಪ್ರೀತಿಯನ್ನು ಹೆಚ್ಚಿಸುವಂಥ ಸಿನಿಮಾ.
ಇದೂ ಸಹ ಆಸ್ಕರ್ ಗೆ ವಿದೇಶಿ ಭಾಷೆಯ ಚಲನಚಿತ್ರಗಳ ವಿಭಾಗದಲ್ಲಿ ಕಜಕಿಸ್ತಾನದಿಂದ ನಾಮ ನಿರ್ದೇಶನಗೊಂಡಿತ್ತು. ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಲಿಲ್ಲ. ಆದರೆ ಇದರ ನಿರ್ದೇಶಕ ಆರ್ಮೆಕ್ ಬಹಳ ಸುದ್ದಿ ಮಾಡಿದ್ದರು. ವಿವಿಧ ಪ್ರಶಸ್ತಿಗಳನ್ನು ಪಡೆಯಿತಲ್ಲದೇ ಸಿನಿಮಾ ಪ್ರಿಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಜಕಿಸ್ತಾನದ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಇದೂ ಸಹ ಸ್ಥಾನ ಪಡೆದಿದೆ.
-ಅಪ್ರಮೇಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.