ಗಿರಿನಗರ ಭಂಡಾರ ಕೇರಿ ಮಠ:ಜು.10ರಿಂದ ಮೂರು ದಿನ ಶ್ರೀ ವಿದ್ಯೇಶ ಸಪ್ತತಿ ವಿನೋದೋತ್ಸವ


Team Udayavani, Jul 10, 2024, 4:48 PM IST

ಗಿರಿನಗರ ಭಂಡಾರ ಕೇರಿ ಮಠ:ಜು.10ರಿಂದ ಮೂರು ದಿನ ಶ್ರೀ ವಿದ್ಯೇಶ ಸಪ್ತತಿ ವಿನೋದೋತ್ಸವ

ಬೆಂಗಳೂರು : ರಾಜಧಾನಿಯ ಗಿರಿನಗರದಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ಭಾಗವತಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿಕಾಸ ಪ್ರತಿಷ್ಠಾನಗಳ ಸಂಯುಕ್ತ ಆಶಯದಲ್ಲಿ ಶ್ರೀ ಭಂಡಾರ ಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ 70 ಜನ ವಿದ್ವಾಂಸರಿಂದ ವೈವಿಧ್ಯಭರಿತ ಚೇತೋಹಾರಿ ಉಪನ್ಯಾಸ ಸರಣಿ ಆಯೋಜನೆ ಮಾಡಲಾಗಿದೆ.

ಮೂರು ದಿನಗಳ ಈ ಕಾರ್ಯಕ್ರಮಕ್ಕೆ ಬುಧವಾರ ಸಂಜೆ 5 ಕ್ಕೆ ಚಾಲನೆ ದೊರಕಲಿದೆ . ಪರಮಪೂಜ್ಯ ಶ್ರೀ ವಿದೇಶ ತೀರ್ಥ ಸ್ವಾಮೀಜಿ ವಿನೋದೋತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ಜುಲೈ 10 , 11 ಮತ್ತು 12ರಂದು ಮೂರು ದಿನಗಳ ಕಾಲ ನಾಡಿನ ಪ್ರಖ್ಯಾತ ವಿದ್ವಾಂಸರು ಪ್ರವಚನಗಳನ್ನು ನೀಡಲಿರುವುದು ವಿಶೇಷ.

ಬುಧವಾರ ಸಂಜೆ ನಡೆಯುವ ಪ್ರಥಮ ಗೋಷ್ಠಿ ಯಲ್ಲಿ ಹಿರಿಯ ವಿದ್ವಾಂಸರಾದ ಶ್ರೀಕರಾಚಾರ್ಯ ತಾಮ್ರಪರಣಿ, ವಿಜಯನಂದನ ಆಚಾರ್ಯ, ಶ್ರೀ ವರಾಹ ಆಚಾರ್ಯ ತಾಮ್ರಪರಣಿ, ಮಾಳಗಿ ರಾಮಾಚಾರ್ಯ , ಗುರುಪ್ರಸಾದ ಆಚಾರ್ಯ ವಿಕ್ರಮ ಸಿಂಹಾಚಾರ್ಯ ಸತ್ತಿಗೇರಿ ವಾಸುದೇವಾಚಾರ್ಯ, ಅನಂತಶಯನ ಆಚಾರ್ಯ, ಸೋಶೀಲೆಂದ್ರ ಆಚಾರ್ಯ ಗೋಗಿ , ರಂಗನಾಥಾಚಾರ್ಯ ಗಣಾಚಾರಿ, ರಘುಪತಿ ಉಪಾಧ್ಯಾಯ, ಮಾದನೂರು ಪವಮಾನ ಆಚಾರ್ಯ ಸಂಜೀವ ಆಚಾರ್ಯ ದೇಶಪಾಂಡೆ , ಮಾಧವ ಆಚಾರ್ಯ ಮೈಸೂರು ಮತ್ತು ಜೀವೇಶ ಆಚಾರ್ಯ ಇವರುಗಳು ವಿವಿಧ ವೈದಿಕ, ಧಾರ್ಮಿಕ, ರಾಮಾಯಣ, ಮಹಾಭಾರತ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಜುಲೈ 11ರ ಬೆಳಗ್ಗೆ 9ಕ್ಕೆ ಎರಡನೇ ಗೋಷ್ಠಿ ಆಯೋಜನೆಗೊಂಡಿದ್ದು ಇದರಲ್ಲಿ ವಿದ್ವಾಂಸರಾದ ಹನುಮಂತಾಚಾರ್ಯ, ಭೀಮಸೇನಾಚಾರ್ಯ, ರಾಘವೇಂದ್ರ ಆಚಾರ್ಯ, ಕಿರಣ ಆಚಾರ್ಯ, ಸಂದೇಶ ಆಚಾರ್ಯ ಮತ್ತಿತರರು ವಿಷ್ಣುವಿನ ಮೋಕ್ಷಪ್ರದಾ, ಶರಣಾಗತಿ, ಶ್ರೀರಾಮನ ಜೀವನ ಮೌಲ್ಯಗಳು, ಲಿಂಗ ದೇಹದ ಸ್ವರೂಪ, ಸತ್ಯ ಧರ್ಮಗಳ ಉದಾತ್ತ ಮುಖ ಇತ್ಯಾದಿ ವಿಚಾರಗಳನ್ನು ಮಂಡನೆ ಮಾಡಲಿದ್ದಾರೆ.

ಮೂರನೇ ಗೋಷ್ಠಿ:
ಜುಲೈ 11 ರಂದು ಸಂಜೆ 4:30ಕ್ಕೆ ನಡೆಯುವ ಮೂರನೇ ಗೋಷ್ಠಿಯಲ್ಲಿ ವಿದ್ವಾಂಸರಾದ ಪವಮಾನಾಚಾರ್ಯ, ಪಾಂಡುರಂಗ ಆಚಾರ್ಯ, ಪಾಂಡುರಂಗಿ ಗೋಟೆ, ನರಸಿಂಹಾಚಾರ್ಯ, ಯದುನಂದನ ಆಚಾರ್ಯ ಮತ್ತಿತರರು ಮಾತನಾಡಲಿದ್ದಾರೆ

ವಿಚಾರ ಲಹರಿ:
ಜುಲೈ 12ರ ಬೆಳಗ್ಗೆ 9ಕ್ಕೆ 4ನೇ ಗೋಷ್ಠಿಯಲ್ಲಿ ಹಿರಿಯ ಪಂಡಿತರಾದ ಜಯತೀರ್ಥಾಚಾರ್ಯ, ವೆಂಕಟೇಶ ಆಚಾರ್ಯ, ಪಡುಬಿದ್ರಿ ಪ್ರವೀಣ ಆಚಾರ್ಯ ತಂತ್ರಿ, ಚತುರ್ವೇದಿ ವೇದವ್ಯಾಸಾಚಾರ್ಯ, ಗುರುರಾಜ ಆಚಾರ್ಯ ಮತ್ತಿತರರು ಧರ್ಮಾಚರಣೆ, ಅಷ್ಟಮಂಗಳ ಶಕುನಗಳು, ಮಹಾಭಾರತ, ಪದ್ಮಪುರಾಣ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಲಹರಿಯನ್ನು ಹರಿಸಲಿದ್ದಾರೆ.

ಸಮಾರೋಪದಲ್ಲಿ ಶಿಖರೋಪನ್ಯಾಸ:
ಶುಕ್ರವಾರ ಸಂಜೆ 4:50ಕ್ಕೆ ವಿನೋದೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯ ನಿಧಿ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ವಿಷಯ ತಜ್ಞರಾದ ಸಮೀರ ಕಾಗಲ್ಕರ್ ಅವರು ಮಾಧ ಸಮಾಜದ ಕುಂದು ಕೊರತೆಗಳು ಹಾಗೂ ಪರಿಹಾರ ಉಪಾಯಗಳು  ವಿಷಯ ಕುರಿತು ಮಾತನಾಡಲಿದಿದ್ದಾರೆ . ಪತ್ರಕರ್ತ ಮತ್ತು ಲೇಖಕ ಎ. ಆರ್. ರಘುರಾಮ ಅವರು ಮಾಧ್ಯಮವು ಉದ್ಯಮ ಪ್ರಭಾವದಿಂದ ಸಮಾಜವನ್ನು ಅರಳಿಸುವುದರಲ್ಲಿ ಎಡವಿದೆಯೇ ಎಂಬ ವಿಷಯ ಕುರಿತು ಶಿಖಾರೋಪನ್ಯಾಸ ಮಾಡಲಿದ್ದಾರೆ .

ಡಾ. ಶ್ರೀನಿಧಿ ವಾಸಿಷ್ಠ ಅಭಿನಂದನಾ ಭಾಷಣವನ್ನು ಮಾಡದಿದ್ದಾರೆ ಇದೇ ಸಂದರ್ಭ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರ ವರ್ಧಂತಿಯ ಅಂಗವಾಗಿ ಶ್ರೀ ಧನ್ವಂತರಿ ಹೋಮದ ಪೂರ್ಣಹುತಿ ಮತ್ತು 70 ಜನ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ .

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

7

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

5

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.