![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 11, 2024, 6:52 AM IST
ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸೆರೆ ಸಿಕ್ಕಿದ್ದರೂ, ಚಡ್ಡಿ ಗ್ಯಾಂಗ್‌ನ ಇನ್ನೂ ಹಲವು ಸದಸ್ಯರು ಅಥವಾ ತಂಡಗಳು ಇವೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ರವಿವಾರ ಮುಂಜಾನೆ ಕೋಡಿಕಲ್ ವಿವೇಕಾನಂದ ನಗರದ ಮನೆಯಲ್ಲಿ ನಡೆದ ಕಳ್ಳ ತನದ ದೃಶ್ಯಗಳು ಸಿಸಿ ಕೆಮರಾದಲ್ಲಿ ದಾಖಲಾಗಿದ್ದವು ಅದರಂತೆ ಚಡ್ಡಿ-ಬನಿಯನ್ ಧರಿಸಿದ ಐವರ ಚಹರೆ ಕಂಡು ಬಂದಿತ್ತು. ಆದರೆ ಕೋಟೆಕಣಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಹಾಗಾದರೆ ಇನ್ನೊಬ್ಬ ಎಲ್ಲಿ ನಾಪತ್ತೆಯಾದ ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ಈ ಎರಡೂ ಕೃತ್ಯಗಳು ಚಡ್ಡಿ ಗ್ಯಾಂಗ್ ಮಾಡಿದ್ದೇ ಎಂಬುದು ಇನ್ನೂ ಪತ್ತೆಯಾಗಬೇಕಿದೆ.
ಸೂಕ್ತ ಮನೆಗಾಗಿ ಹುಡುಕಾಟ!
ಚಡ್ಡಿಗ್ಯಾಂಗ್ ಮೊದಲು ದರೋಡೆಗೆ ಸಂಚು ರೂಪಿಸಿದ ಇಡೀ ಪ್ರದೇಶವನ್ನು ಸುತ್ತುತ್ತದೆ. ಬಸ್ ನಿಲ್ದಾಣಗಳಲ್ಲೂ ತಂಗುತ್ತದೆ. ನಗರದಲ್ಲಿ ಕೆಲವೆಡೆ ಇದೇ ತಂಡದವರು ಬಲೂನ್‌ಗಳನ್ನು ಮಾರುತ್ತಿದ್ದು ಎನ್ನಲಾಗಿದೆ. ಕೆಲವು ಸದಸ್ಯರು ಕೃತ್ಯಕ್ಕೆ ಸೂಕ್ತ ಮನೆಗಳನ್ನು ಹುಡುಕುತ್ತದೆ. ಚಡ್ಡಿ, ಬನಿಯಾನ್ ಮತ್ತು ತಲೆ ಮೇಲೆ ಬಟ್ಟೆ ಸುತ್ತಿ ಕೊಂಡಿರುವ ಕಾರಣ ಚಡ್ಡಿ ಗ್ಯಾಂಗ್ ಎನ್ನಲಾಗುತ್ತದೆ.
ಬೇರೊಂದು ಚಡ್ಡಿಗ್ಯಾಂಗ್‌ನ ದೃಶ್ಯ ವೈರಲ್
ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್‌ನ ಕೃತ್ಯಗಳು ನಡೆದ ಬೆನ್ನಿಗೇ ಚಡ್ಡಿಗ್ಯಾಂಗ್ ಬೇರೆಡೆ ನಡೆಸಿದ ಕೃತ್ಯದ ಸಿಸಿ ಕೆಮರಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲೂ ನಾಲ್ಕೈದು ಜನರಿದ್ದು, ಓರ್ವ ದೊಡ್ಡ ಹೊಟ್ಟೆಯವನಿದ್ದಾನೆ. ಕೆಲವರು ಚಡ್ಡಿ ಜತೆ ಜಾಕೆಟ್, ಮಂಕಿ ಕ್ಯಾಪ್ ಧರಿಸಿ ದ್ದಾರೆ. ಕೈಯಲ್ಲಿ ವಯರ್‌ನಂತಹ ವಸ್ತು ಇದೆ. ಈ ದೃಶ್ಯ ಎಲ್ಲಿಯದ್ದು ಎಂಬುದು ಸ್ಪಷ್ಟವಾಗಿಲ್ಲ. ಮಳೆಗಾಲದಲ್ಲೇ ಕುಕೃತ್ಯ ನಡೆಸುವ ಈ ತಂಡ ಕೊಡೆಯೊಂದಿಗೆ ಹೆಚ್ಚಾಗಿ ಬಸ್‌ಗಳಲ್ಲೇ ಸಂಚರಿಸುತ್ತದೆ. ಕೋಟೆಕಣಿಯಲ್ಲೂ ದರೋಡೆ ಕೋರರು ಕೊಡೆಯನ್ನು ಬಿಟ್ಟು ಹೋಗಿದ್ದರು.
ಸ್ಥಳೀಯ ನೆಟ್‌ವರ್ಕ್?
ಮನೆಯಲ್ಲಿರುವವರು, ಅವರ ಆರ್ಥಿಕ ಸ್ಥಿತಿಗತಿ, ಚಲನವಲಗಳ ಪಕ್ಕಾ ಮಾಹಿತಿ ಪಡೆಯುವ ಈ ಗ್ಯಾಂಗ್‌ಗೆ ಸ್ಥಳೀಯವಾಗಿ ಓಡಾಡಿಕೊಂಡಿರುವವರ ಸಹಕಾರ ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕಾಏಕಿ ಬಂದು ಮುಖ್ಯವಾಗಿ ಹಿರಿಯ ನಾಗರಿಕರು ಇರುವ ಮನೆಯನ್ನೇ ಗುರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಕಳ್ಳರಿಗೆ ನಂಟು!
ಮಂಗಳೂರಿನಲ್ಲಿ ಮಧ್ಯಪ್ರದೇಶ ಮೂಲದ ಕಳ್ಳರು, ದರೋಡೆಕೋರರು ಕೃತ್ಯ ನಡೆಸಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಉರ್ವ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ದಲ್ಲಿ ಮಧ್ಯಪ್ರದೇಶ ಮೂಲದವರ ಕೈವಾಡ ಇತ್ತು. ಮಂಗ ಳೂರು ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿದ್ದರೂ ಪೂರಕ ಮಾಹಿತಿ ಸಿಕ್ಕಿರಲಿಲ್ಲ.
You seem to have an Ad Blocker on.
To continue reading, please turn it off or whitelist Udayavani.