Valmiki Nigama Scam: ಇಡಿ ಅಧಿಕಾರಿಗಳಿಂದ 12 ತಾಸು ಸುದೀರ್ಘ ತಪಾಸಣೆ
ಶಾಸಕ ಬಿ. ನಾಗೇಂದ್ರ, ದದ್ದಲ್ ನಿವಾಸಗಳ ಮೇಲೆ ಇಡಿ ದಾಳಿ, ಪಿಎ, ಮಾಧ್ಯಮ ಸಲಹೆಗಾರರ ಮನೆಯಲ್ಲೂ ಪರಿಶೀಲನೆ
Team Udayavani, Jul 11, 2024, 7:42 AM IST
ಬಳ್ಳಾರಿ/ರಾಯಚೂರು/ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಶಾಸಕರ ಆಪ್ತ ಸಹಾಯಕರು, ಮಾಧ್ಯಮ ಸಲಹೆಗಾರರ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಬಳ್ಳಾರಿ, ರಾಯಚೂರಿನ ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುದೀರ್ಘ 12 ಗಂಟೆ ಕಾಲ ತಪಾಸಣೆ ನಡೆಸಿದೆ. ಅನಂತರ ಶಾಸಕರ ಆಪ್ತರನ್ನೂ ವಿಚಾರಣೆ ಮಾಡಿ ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ನಗರದ ನೆಹರೂ ಕಾಲೋನಿಯ ಶಾಸಕ ನಾಗೇಂದ್ರ ಮನೆಗೆ ಬೆಂಗಳೂರಿನ 8 ಮಂದಿ ಇಡಿ ಅಧಿಕಾರಿಗಳ ತಂಡ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ, ಮನೆಯಲ್ಲಿರುವ ಸಿಬಂದಿ ಮೂಲಕ ಮಾಹಿತಿ ಪಡೆದಿದ್ದಾರೆ.
ಅನಂತರ ಶಾಸಕ ನಾಗೇಂದ್ರರ ಆಪ್ತ ಸಹಾಯಕ (ಸರಕಾರಿ ನೌಕರ) ಚೇತನ್‌ರನ್ನು ಕರೆಯಿಸಿ ಮಾಹಿತಿ ಪಡೆದಿದ್ದಾರೆ. ನಾಗೇಂದ್ರ ಅವರ ಹಲವು ಆಪ್ತರು ಈಗಾಗಲೇ ಬೆಂಗಳೂರು ತಲುಪಿದ್ದಾರೆ ಎನ್ನಲಾಗುತ್ತಿದ್ದು, ಇರುವ ಆಪ್ತ ಸಹಾಯಕರನ್ನು ಕರೆದು ವಿಚಾರಣೆ ನಡೆಸಿ ಅವರಿಂದಲೇ ಮಾಹಿತಿ ಕಲೆ ಹಾಕಿದ್ದಾರೆ. ಶಾಸಕ ನಾಗೇಂದ್ರರ ಆಪ್ತ ಸಹಾಯಕ ಚೇತನ್ ಬಳಿಯಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಇವು ಹಲವರ ಸಹಿಗಳಿರುವ ದಾಖಲೆ ಪತ್ರಗಳು ಎನ್ನಲಾಗುತ್ತಿದೆ.
ಆಪ್ತರಲ್ಲಿ ಹೆಚ್ಚಿದ ಆತಂಕ
ಶಾಸಕ ನಾಗೇಂದ್ರ ಆಪ್ತ ಸಹಾಯಕ ಚೇತನ್ ವಿಚಾರಣೆ ಬೆನ್ನಲ್ಲೇ ನಾಗೇಂದ್ರ ಆಪ್ತರಲ್ಲಿ ಆತಂಕ ಹೆಚ್ಚಾಗಿದೆ. ಈ ಪೈಕಿ ಕೆಲ ಆಪ್ತರಿಗೆ ಇಡಿ ಅಧಿಕಾರಿಗಳು ಕರೆ ಮಾಡಿದಾಗ ಅವರು ಬಳ್ಳಾರಿಯಲ್ಲಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನೀವು ಇಲ್ಲಿಗೆ ಬರದಿದ್ದಲ್ಲಿ ನೋಟಿಸ್ ನೀಡಿ ಬೆಂಗಳೂರಿಗೆ ಕರೆಸುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ನಾಗೇಂದ್ರ ಅವರ ಮಾಧ್ಯಮ ಸಲಹೆಗಾರ ಎಸ್. ನಾಗರಾಜ್ ಎನ್ನುವವರನ್ನು ನಿವಾಸಕ್ಕೆ ಕರೆಸಿದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಮಾಜಿ ಸಚಿವರನ್ನು ಬ್ಯಾಂಕ್‌ಗೆ ಕರೆದೊಯ್ದ ಇಡಿ
ಬೆಂಗಳೂರಿನ ಡಾಲರ್ಸ್ ಕಾಲನಿಯ ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾಜಿ ಸಚಿವರು ಬಳಸುತ್ತಿದ್ದ ಮೊಬೈಲ್, ಕೆಲವು ಕಾಗದ ಪತ್ರ, ಅವರ ಬ್ಯಾಂಕ್ ಖಾತೆಗಳ ದಾಖಲೆ ಪಡೆದು ಪರಿಶೀಲಿಸಲಾಗಿದೆ. ಅವರಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿದ ಇಡಿ ಅಧಿಕಾರಿಗಳು, ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್‌ಗೆ ಅವರನ್ನು ಕರೆದೊಯ್ದು ಬ್ಯಾಂಕ್ ವ್ಯವಹಾರದ ಕುರಿತು ಹೇಳಿಕೆ ಪಡೆದಿದ್ದಾರೆ. ಇನ್ನು ಮಹರ್ಷಿ ವಾಲಿ¾ಕಿ ಅಭಿವೃದ್ದಿ ನಿಗಮದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.