Fraud Case ಪಾರ್ಟ್ಟೈಮ್ ಕೆಲಸ ಹೆಸರಲ್ಲಿ ವಂಚನೆ
Team Udayavani, Jul 10, 2024, 11:32 PM IST
ಸುಳ್ಯ: ಪಾರ್ಟ್ಟೈಮ್ ಕೆಲಸ ಹೆಸರಿನಲ್ಲಿ ಸುಳ್ಯದ ವ್ಯಕ್ತಿಗೆ ಎರಡು ಲಕ್ಷಕ್ಕೂ ಅಧಿಕ ರೂ. ವಂಚಿಸಿರುವ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದ ನಿವಾಸಿಯ ವಾಟ್ಸ್ ಆ್ಯಪ್ಗೆ ಜೂ. 12ರಂದು ಪಾರ್ಟ್ಟೈಮ್ ಕೆಲಸ ನೀಡುವುದಾಗಿ ಹಾಗೂ ಅದಕ್ಕಾಗಿ ಗೂಗಲ್ ಮ್ಯಾಪ್ನಲ್ಲಿ ಅವರು ಹೇಳುವ ರೆಸ್ಟೋರೆಂಟ್ ಕ್ಲಿಕ್ ಮಾಡಿ ಅದಕ್ಕೆ 5 ಸ್ಟಾರ್ ನೀಡಿ ರಿವ್ಯೂ ಬರೆಯಬೇಕಾಗಿ ತಿಳಿಸಿದಂತೆ, ಸುಳ್ಯದ ವ್ಯಕ್ತಿ ಒಪ್ಪಿದ್ದು, ನಂತರ ಅವರಿಂದ ಬಂದ ಸೂಚನೆಗಳ ಪ್ರಕಾರ, 3 ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಂಡರು. ಅನಂತರ ದಿನಗಳಲ್ಲಿ ಟಾಸ್ಕ್ ಗಾಗಿ ಹಣ ಹಾಕಲು ತಿಳಿಸಿದ್ದಂತೆ ಸುಳ್ಯದ ವ್ಯಕ್ತಿ ಅವರ ಹಾಗೂ ಅವರ ಗೆಳೆಯನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2,18,000/-ಹಣ ವರ್ಗಾಯಿಸಿದ್ದಾರೆ.
ಆದರೆ ಅಪರಿಚಿತ ಆರೋಪಿಗಳು ಮೊತ್ತವನ್ನು ಹಿಂದಿರುಗಿಸದೇ ವಂಚನೆ ಮಾಡಿರುವುದಾಗಿ ಅವರು ಬುಧವಾರ ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.