Supreme court: ಸಿಬಿಐ ವಿರುದ್ಧ ಬಂಗಾಳ ಅರ್ಜಿ ವಿಚಾರಣೆ ಯೋಗ್ಯ: ಸುಪ್ರೀಂಕೋರ್ಟ್
Team Udayavani, Jul 11, 2024, 11:26 AM IST
ನವದೆಹಲಿ: ಒಪ್ಪಿಗೆ ಇಲ್ಲದ ಹೊರತಾಗಿಯೂ ರಾಜ್ಯದಲ್ಲಿ ಕೇಂದ್ರ ತನಿಖಾ ದಳ(ಸಿಬಿಐ) ತನಿ ಖೆಯನ್ನು ನಡೆಸುತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಿ ರುವ ಪಶ್ಚಿಮ ಬಂಗಾಳದ ಅರ್ಜಿ ವಿಚಾರಣೆ ಯೋಗ್ಯವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, “ಕಾನೂನು ಪ್ರಕಾರ ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸು ತ್ತದೆ” ಎಂದು ಹೇಳಿದೆ.
ಅಲ್ಲದೇ, ಪಶ್ಚಿಮ ಬಂಗಾಳ ಅರ್ಜಿಗೆ ಕೇಂದ್ರ ಅಡ್ಡಿಯನ್ನು ತಳ್ಳಿ ಹಾಕಿದೆ. ಮುಂದಿನ ವಿಚಾರಣೆಯನ್ನು ಆ. 13ಕ್ಕೆ ನಡೆಸುವುದಾಗಿ ಹೇಳಿದೆ.
ಇದನ್ನೂ ಓದಿ:Sandalwood: ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ- ಶಿವಣ್ಣ
ಪ್ರಕರಣಗಳ ತನಿಖೆ ಅಥವಾ ದಾಳಿಗಳನ್ನು ನಡೆಸಲು ಸಿಬಿಐಗಿರುವ ಅನುಮತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು 2018 ನವೆಂಬರ್ 16ರಂದೇ ತೆಗೆದು ಹಾಕಿದೆ. ದಿಲ್ಲಿ ಸ್ಪೆಷಲ್ ಪೊಲೀಸ್ ಎಷ್ಟಾಬ್ಲಿಷ್ ಮೆಂಟ್ ಕಾಯ್ದೆ ಅನುಸಾರ ಸಿಬಿಐ ಆರಂಭವಾಗಿದೆ. ನಮ್ಮ ದೃಷ್ಟಿಯಲ್ಲಿ ಸಿಬಿಐ ಭಾರತ ಸರ್ಕಾರದ ಅಂಗ ಸಂಸ್ಥೆ ಅಥವಾ ವಿಭಾಗವಾಗಿದೆ ಎಂದು ನ್ಯಾ.ಬಿ. ಆ ರ್. ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠವು ಹೇಳಿದೆ.
ರಾಜ್ಯಪಾಲ ಆರ್.ಎನ್.ರವಿ ವಿಧೇಯಕಗಳಿಗೆ ಅಂಗೀಕಾರ ನೀಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್ಗೆ ಮೊರೆ ಹೋಗಿತ್ತು. ಜತೆಗೆ ಅವರನ್ನು ವಾಪಸ್ ಕರೆಸಲು ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಒತಾಯಿಸಿತ್ತು. ಕೇರಳ ಕೂಡ ಕೇಂದ್ರದಿಂದ ಸೂಕ್ತ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.