Movies: ವರ್ಷದ ಮೊದಲಾರ್ಧ ಸೋತು ಸುಣ್ಣವಾದ ಕಾಲಿವುಡ್; ದ್ವಿತೀಯಾರ್ಧಕ್ಕೆ ಈ ಚಿತ್ರಗಳೇ ಆಸರೆ
Team Udayavani, Jul 11, 2024, 3:37 PM IST
ಚೆನ್ನೈ: 2024ರ ಮೊದಲಾರ್ಧದಲ್ಲಿ ಚಿತ್ರರಂಗದಲ್ಲಿ ಮಲಯಾಳಂ ಚಿತ್ರರಂಗ ಹಿಂದೆಂದೂ ಮಾಡದ ಸಾಧನೆಯನ್ನು ಮಾಡಿದೆ. ಇತ್ತ ತೆಲುಗು ಮತ್ತು ಹಿಂದಿ ಚಿತ್ರರಂಗ ಕೂಡ ಒಂದಷ್ಟು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಚಿತ್ರಗಳನ್ನು ಕೊಟ್ಟಿದೆ.
ಆದರೆ ಕಾಲಿವುಡ್(Kollywood) ವಿಚಾರಕ್ಕೆ ಬಂದರೆ ವರ್ಷದ ಮೊದಲಾರ್ಧದಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳು ಬರೀ ಎರಡಷ್ಟೇ.!
ಟಾಲಿವುಡ್ ನಲ್ಲಿ ಚಿತ್ರರಂಗದಲ್ಲಿ ಬಂದ “ಹನುಮಾನ್”, “ಟಿಲ್ಲು ಸ್ಕ್ವೇರ್, “ಕಲ್ಕಿ 2898 ಎಡಿ” ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ.
ಮಾಲಿವುಡ್ ನಲ್ಲಿ ಪ್ರೇಮಲು”, “ಮಂಜುಮ್ಮೆಲ್ ಬಾಯ್ಸ್”, “ಆಡು ಜೀವಿತಂ”.. ನಂತಹ ಚಿತ್ರಗಳು ಹೆಚ್ಚು ಗಳಿಕೆ ಹಾಗೂ ಹೆಚ್ಚು ದಿನ ಥಿಯೇಟರ್ ನಲ್ಲಿ ಓಡಿದೆ. ಬಾಲಿವುಡ್ ನಲ್ಲಿ ʼಫೈಟರ್ʼ, ʼಸೈತಾನ್ʼ, ʼಕ್ರ್ಯೂʼ ನಂತಹ ಚಿತ್ರಗಳು ಒಂದಷ್ಟರ ಮಟ್ಟಿಗೆ ಸದ್ದು ಮಾಡಿದೆ.
ಕಾಲಿವುಡ್ ನಲ್ಲಿ ವರ್ಷದ ಆರಂಭದಲ್ಲಿ ʼ ಅಯಾಲನ್ʼ ಹಾಗೂ ʼಕ್ಯಾಪ್ಟನ್ ಮಿಲ್ಲರ್ʼ ಚಿತ್ರಗಳು ರಿಲೀಸ್ ಆಗಿತ್ತು. ಒಂದಷ್ಟು ದಿನ ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನ ಆಗಿ ಮಾಯಾವಾಯಿತು. ಆದರೆ ಇದಾದ ಬಳಿಕ ಕಾಲಿವುಡ್‌ಹಿಟ್ ಚಿತ್ರ ಬರ ಎದುರಾಯಿತು.
ರಿಲೀಸ್ ಆದ ಚಿತ್ರಗಳೆಲ್ಲ ಒಂದು ವಾರವೂ ಥಿಯೇಟರ್ ನಿಲ್ಲದೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿತ್ತು.
ಇತ್ತೀಚೆಗೆ ಬಂದ ʼಅರನ್ಮನೈ-4ʼ ಹಾಗೂ ವಿಜಯ್ ಸೇತುಪತಿ ಅವರ ʼಮಹಾರಾಜʼ ಕಾಲಿವುಡ್‌ಗೆ ಜೀವಕಳೆ ತಂದುಕೊಟ್ಟಿತು.
ಸೆಕೆಂಡ್ ಹಾಫ್ ನಲ್ಲಿದೆ ಭಾರೀ ನಿರೀಕ್ಷೆ: ದ್ವಿತೀಯಾರ್ಧದಲ್ಲಿ ಕಾಲಿವುಡ್ ನಲ್ಲಿ ಹತ್ತಾರು ಸಿನಿಮಾಗಳು ರಿಲೀಸ್ ಆಗಲಿವೆ. ರಿಲೀಸ್ ಆಗಲಿರುವ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಆದರೆ ಖಂಡಿತವಾಗಿ ಕಾಲಿವುಡ್ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡುವುದು ಪಕ್ಕಾ ಆಗುತ್ತದೆ.
ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ:
ಕಮಲ್ ಹಾಸನ್ – ʼಇಂಡಿಯನ್ -2ʼ (ರಿಲೀಸ್ ಡೇಟ್ – ಜು.12)
ರಜಿನಿಕಾಂತ್ – ‘ವೆಟ್ಟಯ್ಯನ್ʼ (ರಿಲೀಸ್ ಡೇಟ್ – ಅ.10)
ದಳಪತಿ ವಿಜಯ್ – ʼದಿ ಗೋಟ್ʼ (ರಿಲೀಸ್ ಡೇಟ್ – ಸೆ.5)
ಅಜಿತ್ ಕುಮಾರ್ – ʼವಿದಾ ಮುಯರ್ಚಿʼ (ರಿಲೀಸ್ ಡೇಟ್ – ಅ.31)
ವಿಕ್ರಮ್ – ʼತಂಗಲಾನ್ʼ (ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ)
ಧನುಷ್ – ʼರಾಯನ್ʼ (ರಿಲೀಸ್ ಡೇಟ್ – ಜು.26)
ಸೂರ್ಯ – ʼಕಂಗುವʼ (ರಿಲೀಸ್ ಡೇಟ್ – ಅ.10)
ಶಿವ ಕಾರ್ತಿಕೇಯನ್ – ʼಅಮರನ್ʼ (ರಿಲೀಸ್ ಡೇಟ್ – ಸೆ.27)
ಕಾರ್ತಿ – ʼವಾ ವಾತಿಯಾರ್ʼ (ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.