Love Jihad; ಮಗಳನ್ನು ನಟೋರಿಯಸ್ ನಿಂದ ರಕ್ಷಿಸಿ: ಕಣ್ಣೀರು ಹಾಕಿದ ತಂದೆ
ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು...
Team Udayavani, Jul 11, 2024, 6:11 PM IST
ಮಂಗಳೂರು: ಲವ್ ಜಿಹಾದ್ ಗೆ ಬಲಿಯಾದ ಹಿಂದೂ ಹುಡುಗಿಯ ತಂದೆ ವಿನೋದ್ ತನ್ನ ಮಗಳನ್ನು ನಟೋರಿಯಸ್ ಕ್ರಿಮಿನಲ್ ಮುಹಮ್ಮದ್ ಅಶ್ಫಾಕ್ ನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಗುರುವಾರ ಕಣ್ಣೀರು ಹಾಕಿದ್ದಾರೆ.
ಮುಹಮ್ಮದ್ ಅಶ್ಫಾಕ್ ನಿಂದ ಯುವತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿ, ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.
ಜೂ.6 ರಂದು ಅವಳು ಅಶ್ಫಾಕ್ ಜತೆ ಆಕೆಗೆ ಪ್ರೇಮ ಇರುವುದು ಗೊತ್ತಾಯಿತು. ಅದಕ್ಕಾಗಿ ಬುದ್ದಿ ಹೇಳಿ ಉಳ್ಳಾಲದ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಅದರೆ ಅತ ಅಲ್ಲಿಗೂ ಬಂದು ಜೂ.30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಮಗಳು ಬಿಸಿಎ ಓದುತ್ತಿದ್ದಳು. ಆದರೆ ದ್ವಿತೀಯ ವರ್ಷದ ಡಿಗ್ರಿಗೆ ಶುಲ್ಕ ಕಟ್ಟುವುದಕ್ಕೆ ಹಣ ಇರಲಿಲ್ಲ. ಹಾಗಾಗಿ ಅವಳು ಶಿಕ್ಷಣ ಮೊಟಕುಗೊಳಿಸಿದ್ದಳು. ಬಳಿಕ ಎರಡು ತಿಂಗಳು ಕಾಸರಗೋಡಿ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಹಮ್ಮದ್ ಅಶ್ಫಾಕ್ ನ ಪರಿಚಯ ಆಗಿರಬೇಕು ಎಂದು ಅವರು ತಿಳಿಸಿದರು.
ಆಶ್ಪಾಕ್ ನನ್ನ ಮಗನಿಗೆ ಕರೆ ಮಾಡಿ ಮಗಳನ್ನು ಕರೆದು ಕೊಂಡು ಓಡಿ ಹೋಗಿರುವುದಾಗಿ ಹೇಳಿದ್ದಾನೆ. ಊರವರು ಹೇಳುವ ಪ್ರಕಾರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಆತನ ಮೇಲೆ ಹದಿನಾರಕ್ಕೂ ಹೆಚ್ಚು ಕೇಸ್ ಗಳಿವೆ. ಪೊಲೀಸರು ಆತನನ್ನು ಬಂಧಿಸಿ, ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರಷ್ಟೇ ಸಾಧನೆ ಸಾಧ್ಯ ಎಂಬುದು ಭ್ರಮೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.