Stock Market: ಬಾಂಬೆ ಷೇರುಪೇಟೆ ಸೂಚ್ಯಂಕ 600 ಅಂಕ ಏರಿಕೆ, ವಹಿವಾಟು ಅಂತ್ಯ
Team Udayavani, Jul 12, 2024, 5:31 PM IST
ಮುಂಬೈ: ಬಾಂಬೆ ಷೇರುಪೇಟೆ(Stock Market) ಸಂವೇದಿ ಸೂಚ್ಯಂಕ ಗುರುವಾರ (ಜುಲೈ 12) 600ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 622 ಅಂಕಗಳಷ್ಟು ಜಿಗಿತದೊಂದಿಗೆ 80,519.34 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 186.20 ಅಂಕಗಳ ಏರಿಕೆಯೊಂದಿಗೆ 24,502.20 ಅಂಕಗಳ ಮಟ್ಟದಲ್ಲಿ ವಹಿವಾಟು ಕೊನೆಗೊಂಡಿದೆ.
ಬಿಎಸ್ ಇ ಸೆನ್ಸೆಕ್ಸ್ ಏರಿಕೆಯಿಂದ ಟಿಸಿಎಸ್, ಇನ್ಫೋಸಿಸ್, ಎಚ್ ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಜೆಎಸ್ ಡಬ್ಲ್ಯು ಸ್ಟೀಲ್, ರಿಲಯನ್ಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ನೆಸ್ಲೆ ಇಂಡಿಯಾ, ಟಾಟಾ ಸ್ಟೀಲ್, ಸನ್ ಪಾರ್ಮಾ ಸ್ಯೂಟಿಕಲ್, ಟಾಟಾ ಮೋಟಾರ್ಸ್, ಭಾರ್ತಿ ಏರ್ ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ತ್ರೈಮಾಸಿಕ ಆದಾಯದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಲಾಗಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಘೋಷಣೆ ಮಾಡಿದ ನಂತರ ಷೇರುಪೇಟೆ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.
ಇದನ್ನೂ ಓದಿ:Anant Ambani Wedding: ಅನಂತ್ ಅಂಬಾನಿ ವಿವಾಹಕ್ಕೆ ಗಣ್ಯಾತೀಗಣ್ಯರ ಆಗಮನ, 40 ದಿನ ಅನ್ನದಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.