Tirumala ;ದೇಗುಲದ ಸಂಕೀರ್ಣದೊಳಗೆ ಮಹಿಳೆಯ ತಲೆಯ ಮೇಲೆ ಬಿದ್ದ ಬೃಹತ್ ಮರದ ಕೊಂಬೆ: Video
Team Udayavani, Jul 12, 2024, 6:44 PM IST
ತಿರುಮಲ: ಆಂಧ್ರಪ್ರದೇಶದ ತಿರುಮಲ ದೇಗುಲದ ಸಂಕೀರ್ಣದೊಳಗೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಮಹಿಳಾ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಘಟನೆಯ ವಿಡಿಯೋ ಸೆರೆಯಾಗಿದೆ.
ಈ ಘಟನೆಯು ಪವಿತ್ರ ಜಲಮೂಲವಾದ ಜಪಾಲಿ ತೀರ್ಥಂನಲ್ಲಿ ಸಂಭವಿಸಿದೆ. ಭಕ್ತೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಮೀಪದ ಮರದ ಕೊಂಬೆಯೊಂದು ಏಕಾಏಕಿ ಮುರಿದು ಆಕೆಯ ಮೇಲೆ ಬಿದ್ದಿವೆ.
ದೇವಸ್ಥಾನದ ಸಿಬಂದಿ ಗಾಯಾಳುವನ್ನು ತತ್ ಕ್ಷಣ ಆಸ್ಪತ್ರೆಗೆ ಸಾಗಿಸಿದರು. ಮೂಲಗಳ ಪ್ರಕಾರ, ಆಕೆಯ ಬೆನ್ನುಹುರಿಗೆ ಗಂಭೀರವಾದ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊಂಬೆ ತುಂಡಾಗಿ ಬೀಳಲು ಕಾರಣವನ್ನು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ.
ಜಪಾಲಿ ಹನುಮಾನ್ ದೇವಸ್ಥಾನ ತಿರುಮಲ ದೇವಸ್ಥಾನದ ಬಳಿ, ಪಾಪವಿನಾಶಕ್ಕೆ ಹೋಗುವ ದಾರಿಯಲ್ಲಿದೆ.
A branch of tree fell on a women in Tirumala at Anjaneyaswamy Japali Kshetra. She is severely injured head and spinal,she’s shifted to Hospital #Tirupati #Tirumala #Tree #Injured pic.twitter.com/v0kksio4NA
— Saravanan Journalist (@Saranjournalist) July 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.