Dengue Case ರಾಜ್ಯದಲ್ಲಿ ಒಂದೇ ದಿನದಲ್ಲಿ 437 ಡೆಂಗ್ಯೂ ಪ್ರಕರಣ
Team Udayavani, Jul 13, 2024, 6:42 AM IST
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಏರುಗತಿಯಲ್ಲಿ ವರದಿಯಾಗುತ್ತಿದೆ. ಕೆಲವು ತಿಂಗಳ ಹಿಂದೆ 15 ದಿನ ಹಾಗೂ ವಾರಕ್ಕೊಮ್ಮೆ ದಾಖಲಾಗುತ್ತಿದ್ದ ಡೆಂಗ್ಯೂ ಒಟ್ಟಾರೆ ಪ್ರಕರಣಗಳ ಸಂಖ್ಯೆ ಶುಕ್ರವಾರ ಒಂದೇ ದಿನ ವರದಿಯಾಗುವ ಮೂಲಕ ಆತಂಕ ಸೃಷ್ಟಿ ಮಾಡಿದೆ.
ಆರೋಗ್ಯ ಇಲಾಖೆ ಡೆಂಗ್ಯೂ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡಿ, ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಡೆಂಗ್ಯೂ ಪರೀಕ್ಷೆಯನ್ನು ಹೆಚ್ಚಿಸಿದೆ. ಶುಕ್ರವಾರ ಪರೀಕ್ಷೆಗೆ ಒಳಪಡಿಸಲಾದ 2704 ಶಂಕಿತ ಮಾದರಿ ಪರೀಕ್ಷೆಯಲ್ಲಿ ಶೇ.16ರಷ್ಟು ಮಾದರಿಗಳಲ್ಲಿ ಡೆಂಗ್ಯೂ ಸೋಂಕು ದೃಢವಾಗಿದೆ. ಕಳೆದ 24 ಗಂಟೆಯೊಳಗೆ ವರ್ಷದೊಳಗಿನ 7 ಮಕ್ಕಳಲ್ಲಿ, 18 ವರ್ಷದೊಳಗಿನ 154 ಹಾಗೂ 18ವರ್ಷ ಮೇಲ್ಪಟ್ಟ 276 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ.
ರಾಜ್ಯದಲ್ಲಿ 2024ರ ಜ.1ರಿಂದ ಜು.12ರ ವರೆಗೆ 8, 658 ಮಂದಿಯಲ್ಲಿ ಡೆಂಗ್ಯೂ ಪ್ರಕರಣ ವರದಿಯಾಗಿದೆ. ಜು. 1ರಿಂದ 12ವರೆಗೆ 2471 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಜೂ. 1ರಿಂದ 20ರ ವರಗೆ ದಿನವೊಂದಕ್ಕೆ ಸರಾಸರಿ 30 ರಿಂದ 128 ಪ್ರಕರಣಗಳು ವರದಿಯಾಗುತ್ತಿತ್ತು. ಇದೀಗ ಕಳೆದ ಒಂದು ವಾರದಿಂದ ದಿನವೊಂದಕ್ಕೆ 150 ರಿಂದ 200 ಪ್ರಕರಣ ವರದಿಯಾಗುತ್ತಿರುವ ಜಾಗದಲ್ಲಿ ಇದೀಗ ಒಂದೇ ದಿನ 437 ಪಾಸಿಟವ್ ವರದಿಯಾಗುವ ಮೂಲಕ ಡೆಂಗ್ಯೂ ವ್ಯಾಪಕವಾಗಿ ಹರಡಿರುವುದಕ್ಕೆ ಸಾಕ್ಷ್ಯ ನೀಡುತ್ತಿವೆ.
6 ಜಿಲ್ಲೆಗಳ ವರದಿ ಇಲ್ಲ
ಬಿಬಿಎಂಪಿ 165, ಮಂಡ್ಯ 47, ಬೆಳಗಾವಿ 32, ದಾವಣಗೆರೆ 24, ಕಲಬುರಗಿ 20, ಕೋಲಾರ 19, ಮೈಸೂರು 17, ಗದಗ 15, ರಾಮನಗರ 14, ಬೀದರ್, ಉಡುಪಿ, ಬೆಂಗಳೂರು ನಗರ ,ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ತಲಾ 10, ಚಿಕ್ಕಬಳ್ಳಾಪುರ 7, ಹಾಸನ 6, ಬೆಂಗಳೂರು ಗ್ರಾಮಾಂತರ, ತುಮಕೂರು 5,ಬಳ್ಳಾರಿ 4, ಚಿತ್ರದುರ್ಗ, ಕೊಪ್ಪಳ ಜಿಲ್ಲೆಯಲ್ಲಿ ತಲಾ 3, ಉ.ಕ. ಹಾಗೂ ವಿಜಯನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಡೆಂ à ದೃಢವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.