Zika Virus Test: “ಝೀಕಾ’ ಸೋಂಕನ್ನೂ ಹರಡುತ್ತಿದೆ ಈಡಿಸ್ ಸೊಳ್ಳೆ!
ಡೆಂಗ್ಯೂ, ಚಿಕೂನ್‌ಗುನ್ಯ ನೆಗಟಿವ್ ಬಂದ ಶೇ.10 ರೋಗಿಗಳಿಗೆ ಝೀಕಾ ಪರೀಕ್ಷೆ
Team Udayavani, Jul 13, 2024, 7:40 AM IST
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ಹರಡುವ ಸೊಳ್ಳೆಗಳೇ “ಝೀಕಾ’ ವೈರಾಣುವನ್ನೂ ಹರಡುವ ಭೀತಿ ಸೃಷ್ಟಿಯಾಗಿದ್ದು, ಒಂದು ವೇಳೆ ಡೆಂಗ್ಯೂ, ಚಿಕೂನ್‌ಗುನ್ಯ ಪರೀಕ್ಷೆಯ ವರದಿ ನೆಗೆಟಿವ್ ಬಂದರೂ ರೋಗಲಕ್ಷಣ ಇರುವ ಶೇ.10ರಷ್ಟು ಮಂದಿಯನ್ನು ಝೀಕಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಇಷ್ಟು ದಿನ “ಈಡಿಸ್’ ಸೊಳ್ಳೆಯು ಕೇವಲ ಡೆಂಗ್ಯೂ ಮತ್ತು ಚಿಕೂನ್‌ಗುನ್ಯವನ್ನಷ್ಟೇ ಹರಡುತ್ತದೆ ಎಂದುಕೊಳ್ಳಲಾಗಿತ್ತು. ಆದರೆ, ಝೀಕಾ ಸೋಂಕಿತರಿಗೆ ಕಚ್ಚಿದ ಈಡಿಸ್ ಸೊಳ್ಳೆ, ಅವರಲ್ಲಿನ ಝೀಕಾ ವೈರಾಣುವನ್ನು ಹೊತ್ತೂಯ್ದು ಮತ್ತೊಬ್ಬರಿಗೆ ಹರಡುವ ಆತಂಕ ಶುರುವಾಗಿದೆ.
ಪ್ರಸ್ತುತ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯ ಸೋಂಕಿನ ಲಕ್ಷಣಗಳಾದ ಹಠಾತ್ ತೀವ್ರ ಜ್ವರ, ಕಣ್ಣುಗಳ ಹಿಂದೆ ನೋವು, ವಾಕರಿಕೆ, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು ಮತ್ತು ದದ್ದುಗಳಂತಹ ರೋಗ ಲಕ್ಷಣಗಳು ವರದಿಯಾಗುತ್ತಿವೆ. ಆದರೆ ಡೆಂಗ್ಯೂ -ಚಿಕೂನ್‌ಗುನ್ಯ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಕೈ ಸೇರುತ್ತಿದೆ. ರಾಜ್ಯದಲ್ಲಿ ಇದುವರೆಗೆ ಡೆಂಗ್ಯೂಗೆ ಸಂಬಂಧಿಸಿದಂತೆ 61,037 ಶಂಕಿತ ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 8,221ಮಂದಿಯಲ್ಲಿ ಪಾಸಿಟಿವ್ ವರದಿಯಾಗಿದೆ. ರೋಗಿಯಲ್ಲಿ ಎಲ್ಲ ಲಕ್ಷಣಗಳಿದ್ದರೂ, ವರದಿ ಮಾತ್ರ ನೆಗೆಟಿವ್ ವರದಿಯಾಗುತ್ತಿದೆ. ಇದು ವೈದ್ಯರ ಹಾಗೂ ಆರೋಗ್ಯ ಇಲಾಖೆಯ ಪಾಲಿಗೆ ತಲೆ ನೋವಾಗಿ ಪರಿಣಮಿಸಿದೆ.
ಶೇ.10ರಷ್ಟು ಮಾದರಿ ಪರೀಕ್ಷೆ
ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ (ಐಸಿಎಂಆರ್) ವಿಜ್ಞಾನಿಗಳು ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ಜ್ವರದ ಲಕ್ಷಣಗಳಿದ್ದು, ವರದಿ ನೆಗೆಟಿವ್ ಹೊಂದಿರುವ ರೋಗಿಯ ಮಾದರಿಯನ್ನು ಸಹ ಝೀಕಾ ಪರೀಕ್ಷೆಗೆ ಒಳಪಡಿಸಲು ರಾಜ್ಯಗಳಿಗೆ ಸಲಹೆ ನೀಡಿದೆ. ಪ್ರಸ್ತುತ ಆರೋಗ್ಯ ಇಲಾಖೆ ಚಿಕೂನ್‌ಗುನ್ಯ ಹಾಗೂ ಡೆಂಗ್ಯೂ ನೆಗೆಟಿವ್ ಬಂದಿರುವ ಒಟ್ಟು ಪ್ರಕರಣಗಳ ಶೇ.10ರಷ್ಟು ಮಾದರಿಗಳನ್ನು ಝೀಕಾ ಪರೀಕ್ಷೆ ಒಳಪಡಿಸಲಾಗುತ್ತಿದೆ.
ಸಾಮಾನ್ಯ ಲಕ್ಷಣಗಳು !
ಝೀಕಾ ವೈರಾಣು ಮನುಷ್ಯನ ದೇಹ ಹೊಕ್ಕಿದ 3 ರಿಂದ 14 ದಿನಗಳ ನಂತರ ರೋಗ ಲಕ್ಷಣಗಳು ಸಣ್ಣದಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸೋಂಕಿನ ಲಕ್ಷಣಗಳು ಕಂಡು ಬಂದ 5 ದಿನಗಳ ಬಳಿಕವೇ ಝೀಕಾ ಪರೀಕ್ಷೆಗೆ ರಕ್ತ, ಲಾಲಾರಸ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಹಾಗೂ ವೈರಾಣು ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದಲ್ಲಿ ಝೀಕಾ ವೈರಸ್ ಶಂಕಿತ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಮೈಕ್ರೊಸೆಫಾಲಿ ಸಮಸ್ಯೆ
ಮತ್ತೂಂದು ಅಪಾಯಕಾರಿ ಅಂಶವೆಂದರೆ ಬಹುತೇಕ ಝೀಕಾ ಸೋಂಕಿತರಲ್ಲಿ ರೋಗ ಲಕ್ಷಣಗಳು ಅಷ್ಟಾಗಿ ಕಂಡುಬರದ ಪ್ರಕರಣಗಳೂ ಇವೆ. ಕೆಲವರಿಗೆ ಇದ್ದರೂ ಸೌಮ್ಯ ಹಾಗೂ ಸಾಧಾರಣ ಸ್ವರೂಪದ್ದಾಗಿರುತ್ತವೆ. ಆದರೆ, ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ಕಾಣಿಸಿಕೊಂಡರೆ, ಜನಸಿದ ಶಿಶುವಿನಲ್ಲಿ ತಲೆ ಗಾತ್ರದಲ್ಲಿ ಕಡಿಮೆ (ಮೈಕ್ರೊಸೆಫಾಲಿ) ಬೆಳವಣಿಗೆ ದೋಷ ಕಂಡು ಬರಲಿದೆ. ಝೀಕಾ ರೋಗಕ್ಕೂ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆಯಿಲ್ಲ. ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಝೀಕಾ ಲಕ್ಷಣಗಳು?
-ಜ್ವರ
– ತಲೆನೋವು
-ಕಣ್ಣು ಕೆಂಪಾಗುವಿಕೆ
-ಗಂಧೆಗಳು (ದದ್ದು)
-ಕೀಲು, ಸ್ನಾಯುಗಳಲ್ಲಿ ನೋವು
ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಸಲಹೆಯಂತೆ ರಾಜ್ಯದಲ್ಲಿ ಚಿಕೂನ್ ಗುನ್ಯ ಹಾಗೂ ಡೆಂಗ್ಯೂ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವವರ ಮಾದರಿಗಳನ್ನು ಝೀಕಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
-ಡಾ| ರಂದೀಪ,
ಆಯುಕ್ತರು, ಆರೋಗ್ಯ ಇಲಾಖೆ.
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.