Shirva: ಬೆನೆಡಿಕ್ಟ ಡಿಸೋಜಾ ನಿಧನ
Team Udayavani, Jul 13, 2024, 4:54 PM IST
![Shirva: ಬೆನೆಡಿಕ್ಟ ಡಿಸೋಜಾ ನಿಧನ](https://www.udayavani.com/wp-content/uploads/2024/07/nene-620x342.jpg)
![Shirva: ಬೆನೆಡಿಕ್ಟ ಡಿಸೋಜಾ ನಿಧನ](https://www.udayavani.com/wp-content/uploads/2024/07/nene-620x342.jpg)
ಶಿರ್ವ: ಶಿರ್ವದ ಹಿರಿಯ ಉದ್ಯಮಿ ದಿ| ಅಲೆಕ್ಸ್ ಡಿಸೋಜಾ ಅವರ ಪತ್ನಿ, ಹಳೆ ಇಗರ್ಜಿ ಬಳಿಯ ನಿವಾಸಿ ಬೆನೆಡಿಕ್ಟ ಡಿಸೋಜಾ (80) ಅವರು ಜು.13 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಶಿರ್ವದ ಪ್ರಸಿದ್ಧ ಜವುಳಿ ಮಳಿಗೆ ಅಲೆಕ್ಸ್ ಟೆಕ್ಸ್‌ಟೈಲ್ಸ್‌ನ ಪಾಲುದಾರೆಯಾಗಿದ್ದ ಅವರು ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮಾತೆ ಮರಿಯಮ್ಮನ ಪರಮ ಭಕ್ತೆಯಾಗಿದ್ದ ಅವರು ಶಿರ್ವದ ಹಳೆ ಇಗರ್ಜಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.