Mudubidire: ಸಿ.ಎ. : ಆಳ್ವಾಸ್‌ನ 38 ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾಹಿತಿ
Team Udayavani, Jul 14, 2024, 1:26 AM IST
ಮೂಡುಬಿದಿರೆ: ಮೇ ತಿಂಗಳಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ 25 ಮಂದಿ ಹಾಗೂ ಜನವರಿಯಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ 13 ಮಂದಿ ತೇರ್ಗಡೆಯಾಗುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಒಲ್ವಿಟಾ ಡಿ’ ಸೋಜಾ ಅವರು ರಾಷ್ಟ್ರೀಯ ಮಟ್ಟದಲ್ಲಿ 23ನೇ ರ್‍ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೇ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಒಲ್ವಿಟಾ ಆ್ಯನ್ಸಿಲ್ಲಾ ಡಿ’ ಸೋಜಾ, ಪ್ರೀತಿಶ್ ಕುಡ್ವಾ, ಜೊನಿಟಾ ಜೋಶ್ನಿ ಸೋಜಾ, ಸಾಹುಲ್ ಹಮೀದ್, ಅನುಷಾ ಹೆಗ್ಡೆ, ಮೆಲ್ವಿನ್ ಜೋಸ್ವಿನ್ ಲೋಬೋ, ಪಲ್ಲವಿ ಎಚ್. ಆರ್., ಪ್ರಜ್ವಲ್, ವಿಲಿಟಾ ಆಲ್ವಿಶಾ ರೇಗೊ, ಆಂಚಲ್, ಸುಷ್ಮಾ ಎನ್., ಕಿರಣ್ ಚಂದ್ರಶೇಖರ್ ಶೇರಿಗಾರ್, ರೋಯxನ್, ಕೌಶಿಕ್, ಕಿರಣ್ ಭಾರದ್ವಾಜ್, ರಜತ್ ಜೈನ್, ಶುಭಂಕರ್, ರಾಕೇಶ್, ಪ್ರಖ್ಯಾತ್, ಪವನ್, ನಾಗರಾಜ್ ಜಿ. ಶೆಟ್ಟಿ, ಹೇಮಂತ್ ಕುಮಾರ್‌ಡಿ.ಕೆ. , ಶ್ರೀನಿಧಿ ಎಸ್. ಶೆಟ್ಟಿ, ಖುಶೂº ಮತ್ತು ಗೀತಾ ನಿಶಾ ಪಿರೇರಾ ಉತ್ತೀರ್ಣರಾಗಿದ್ದಾರೆ.
ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಕ್ಲರ್ಸನ್, ಮೇಘಾ, ತೇಜಸ್, ವಾಣಿಶ್ರೀ, ಧಾಮಿನಿ, ದರ್ಶನ್, ಜಿ. ಎಚ್., ಪ್ರಸಾದ, ನೌಫಾಲ್, ಅಂಕಿತಾ ಕಲ್ಲಪ್ಪ, ರಾಷ್ಟ್ರೀತ್ ಸಿ.ಜಿ., ಅವಿನಾಶ್, ಸುಕ್‌ಷ್ಮಾ, ಅಭಿಷೇಕ್ ಚೋಟಿ ಸಹಿತ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಲ್ಲರೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-1 ಮತ್ತು ಗ್ರೂಪ್-2 ಎರಡೂ ವಿಭಾಗಗಳನ್ನು ಪ್ರಥಮ ಪ್ರಯತ್ನದಲ್ಲೇ ಪೂರೈಸಿದ್ದಾರೆ ಎಂದು ಅವರು ತಿಳಿಸಿದರು.
ಸಿಎ ಸಂಯೋಜಕ ಪ್ರಶಾಂತ್ ಎಂ.ಡಿ., ಸಹಸಂಯೋಜಕ ಅಶೋಕ್ ಕೆ.ಜಿ., ವಾಣಿಜ್ಯ ವಿಭಾಗ ಮುಖ್ಯಸ್ಥೆ ಶರ್ಮಿಳಾ ಕುಂದರ್ ಉಪಸ್ಥಿತರಿದ್ದರು.
ಒಲ್ವಿಟಾ ಆ್ಯನ್ಸಿಲ್ಲಾ ಡಿ’ ಸೋಜಾ
ಕಿನ್ನಿಗೋಳಿ ಮೂಲದ ಒಲ್ವಿಟಾ ಆ್ಯನ್ಸಿಲ್ಲಾ ಡಿ’ ಸೋಜಾ ಅವರು ಆಳ್ವಾಸ್‌ನಲ್ಲಿ ದತ್ತು ಶಿಕ್ಷಣ ಯೋಜನೆಯಡಿ ಉಚಿತವಾಗಿ ಪ.ಪೂ. ಹಾಗೂ ಪದವಿ ಶಿಕ್ಷಣ ಪಡೆದವರು. 2019ರಲ್ಲಿ ಪ.ಪೂ. ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದು, ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 19ನೇ ರ್‍ಯಾಂಕ್ ಗಳಿಸಿದ್ದರು. ಇವರು ಒಲಿವರ್‌ಉಬಾಲ್ಡ… ಡಿ’ ಸೋಜಾ – ಅನಿತಾ ಮರಿಯಾ ದಂಪತಿಯ ಪುತ್ರಿ. ತಮ್ಮ ಆರ್ಟಿಕಲ್‌ಶಿಪ್ ಅನ್ನು ಮಂಗಳೂರಿನ ಸಿ.ಎ.ನಿತಿನ್ ಜೆ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪೂರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.