Wimbledon Doubles: ಪ್ಯಾಟೆನ್-ಹೆಲಿಯೋವಾರ; ಟೌನ್ಸೆಂಡ್-ಸಿನಿಯಕೋವಾ ಚಾಂಪಿಯನ್ಸ್
Team Udayavani, Jul 14, 2024, 11:28 PM IST
ಬ್ರಿಟನ್ನ ಹೆನ್ರಿ ಪ್ಯಾಟೆನ್ ಮತ್ತು ಫಿನ್ಲಂಡ್ನ ಹ್ಯಾರ್ರಿ ಹೆಲಿಯೋವಾರ ವಿಂಬಲ್ಡನ್ ಪುರುಷರ ಡಬಲ್ಸ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ತೀವ್ರ ಪೈಪೋಟಿಯ ಫೈನಲ್ನಲ್ಲಿ ಇವರು ಆಸ್ಟ್ರೇಲಿಯದ ಮ್ಯಾಕ್ಸ್ ಪರ್ಸೆಲ್-ಜೋರ್ಡನ್ ಥಾಮ್ಸನ್ ವಿರುದ್ಧ 6-7 (7), 7-6 (8), 7-6 (11-9) ಅಂತರದ ಜಯ ಸಾಧಿಸಿದರು.
ಇದು ಪ್ಯಾಟೆನ್-ಹೆಲಿಯೋವಾರ ಜೋಡಿಗೆ ಒಲಿದ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ. ಈ ಪಂದ್ಯಾವಳಿಯಲ್ಲಿ ಇವರಿಗೆ ಯಾವುದೇ ಶ್ರೇಯಾಂಕ ಲಭಿಸಿರ ಲಿಲ್ಲ. 3 ಗಂಟೆಗಳ ಕಾಲ ನಡೆದ ಪಂದ್ಯದ ವೇಳೆ ಮೂರೂ ಸೆಟ್ ಟೈ-ಬ್ರೇಕರ್ಗೆ ವಿಸ್ತರಿಸಲ್ಪಟ್ಟದ್ದು ಫೈನಲ್ ತೀವ್ರತೆಗೆ ಸಾಕ್ಷಿ.
ವನಿತಾ ಡಬಲ್ಸ್
ವನಿತಾ ಡಬಲ್ಸ್ ಪ್ರಶಸ್ತಿ ಅಮೆರಿಕದ ಟೇಲರ್ ಟೌನ್ಸೆಂಡ್-ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಪಾಲಾಯಿತು. ಇವರು ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್ಸ್ಕಿ-ನ್ಯೂಜಿಲ್ಯಾಂಡ್ನ ಎರಿನ್ ರೌಟಿÉಫ್ ವಿರುದ್ಧ 7-6 (5), 7-6 (1) ಅಂತರದಿಂದ ಗೆದ್ದರು.
ಇಲ್ಲಿ ಟೌನ್ಸೆಂಡ್ “ಥರ್ಡ್ ಟೈಮ್ ಲಕ್ಕಿ’ ಎನಿಸಿದರು. 2022ರ ಯುಎಸ್ ಓಪನ್ ಡಬಲ್ಸ್ ಹಾಗೂ ಕಳೆದ ವರ್ಷದ ಫ್ರೆಂಚ್ ಓಪನ್ ಡಬಲ್ಸ್ ಫೈನಲ್ನಲ್ಲಿ ಇವರು ಸೋಲನುಭವಿಸಿದ್ದರು. ಇದೇ ವೇಳೆ ಸಿನಿಯಕೋವಾ 9ನೇ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.