Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

ದೇಶ, ವಿದೇಶಗಳಲ್ಲಿ ಶಾಖೆ ಹೊಂದಿದ್ದು, ಅಪಾರ ಪ್ರಮಾಣದ ಭಕ್ತ ವರ್ಗವನ್ನು ಹೊಂದಿದೆ.

Team Udayavani, Jul 15, 2024, 10:38 AM IST

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

ವಾಷಿಂಗ್ಟನ್:‌ ಭಗವಾನ್‌ ಜಗನ್ನಾಥನ ಕೃಪೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (78ವರ್ಷ) ಸಣ್ಣ, ಪುಟ್ಟ ಗಾಯದೊಂದಿಗೆ ಗುಂಡಿನ ದಾಳಿಯಿಂದ ಬದುಕುಳಿದಿದ್ದಾರೆ ಎಂದು ಇಸ್ಕಾನ್‌ ಹೇಳಿದೆ.‌

48 ವರ್ಷಗಳ ಹಿಂದೆ ನ್ಯೂಯಾರ್ಕ್‌ ನಲ್ಲಿ ನಡೆದ ಭಗವಾನ್‌ ಜಗನ್ನಾಥನ ಮೊದಲ ರಥಯಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಡೊನಾಲ್ಡ್‌ ಟ್ರಂಪ್‌ ನೆರವು ನೀಡಿದ್ದರು. ಟ್ರಂಪ್‌ ನೀಡಿರುವ ಸೇವೆಗಾಗಿ ಜಗನ್ನಾಥ್‌ ದೇವರು ಅವರ ಪ್ರಾಣವನ್ನು ರಕ್ಷಿಸಿರುವುದಾಗಿ ಇಸ್ಕಾನ್‌ (ISKCON) ವಕ್ತಾರ ತಿಳಿಸಿರುವುದಾಗಿ ವರದಿಯಾಗಿದೆ.

ಹೌದು, ನಿಜವಾಗಿಯೂ ಇದೊಂದು ಅಲೌಕಿಕವಾದ ಘಟನೆಯಾಗಿದೆ. ಬರೋಬ್ಬರಿ 48 ವರ್ಷಗಳ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರು ಜಗನ್ನಾಥ ರಥಯಾತ್ರೆ ಉತ್ಸವವನ್ನು ಉಳಿಸಿದ್ದರು. ಇದೀಗ ಪ್ರಪಂಚದಾದ್ಯಂತ ಜಗನ್ನಾಥ ರಥಯಾತ್ರೆಯ ಸಂಭ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಟ್ರಂಪ್‌ ಮೇಲೆ ದಾಳಿಯಾಗಿದ್ದು, ಭಗವಾನ್‌ ಜಗನ್ನಾಥ್‌ ಅವರ ಪ್ರಾಣವನ್ನು ರಕ್ಷಿಸುವ ಮೂಲಕ ಋಣ ಸಂದಾಯ ಮಾಡಿರುವುದಾಗಿ ಇಸ್ಕಾನ್‌ ವಕ್ತಾರ ರಾಧಾರಮಣ ದಾಸ್‌ ತಿಳಿಸಿದ್ದಾರೆ.

ಇಸ್ಕಾನ್‌ (ಹರೇ ಕೃಷ್ಣ ಪಂಥ) ದೇಶ, ವಿದೇಶಗಳಲ್ಲಿ ಶಾಖೆ ಹೊಂದಿದ್ದು, ಅಪಾರ ಪ್ರಮಾಣದ ಭಕ್ತ ವರ್ಗವನ್ನು ಹೊಂದಿದೆ. 1976ರ ಜುಲೈನಲ್ಲಿ ಇಸ್ಕಾನ್‌ ಭಕ್ತರು ಜಗನ್ನಾಥ ರಥಯಾತ್ರೆಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ರಥ ನಿರ್ಮಾಣಕ್ಕಾಗಿ ಟ್ರಂಪ್‌ ಅವರು ತಮ್ಮ ಟ್ರೈನ್‌ ಯಾರ್ಡ್‌ ಸ್ಥಳವನ್ನು ಉಚಿತವಾಗಿ ನೀಡಿದ್ದರು. ಇಂದು ಜಗತ್ತಿನಾದ್ಯಂತ 9 ದಿನಗಳ ಕಾಲ ಜಗನ್ನಾಥ ರಥಯಾತ್ರೆ ಸಂಭ್ರಮ ನಡೆಯುತ್ತಿರುವಾಗಲೇ ಟ್ರಂಪ್‌ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದರೂ, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಭಗವಾನ್‌ ಜಗನ್ನಾಥನೇ ಕಾರಣ ಎಂದು ದಾಸ್‌ ಎಕ್ಸ್‌ ನಲ್ಲಿ ನೀಡಿರುವ ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:Chitradurga: ಕಳವಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

ಟಾಪ್ ನ್ಯೂಸ್

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thimarodi

Belthangady:ಗಣೇಶ ಹಬ್ಬದಂದು ಪ್ರಚೋದನಾಕಾರಿ ಭಾಷಣ; ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು

kejriwal 2

Kejriwal ಜೈಲೋ, ಬಿಡುಗಡೆ ಭಾಗ್ಯವೋ? ಇಂದು ಸುಪ್ರೀಂ ತೀರ್ಪು

1-dp

Namaz, ಆಜಾನ್‌ ವೇಳೆ ದುರ್ಗಾಪೂಜೆ ಸ್ಥಗಿತ: ಬಾಂಗ್ಲಾ ಸರಕಾರ

Bajpe

Bajpe-Kateel State Highway: ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dp

Namaz, ಆಜಾನ್‌ ವೇಳೆ ದುರ್ಗಾಪೂಜೆ ಸ್ಥಗಿತ: ಬಾಂಗ್ಲಾ ಸರಕಾರ

putin (2)

Modi ಭೇಟಿ ಮಾಡಲು ನಾನು ಕಾಯುತ್ತಿರುವೆ: ರಷ್ಯಾ ಅಧ್ಯಕ್ಷ

1-ggggg

SpaceX; ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ!

1-eweeeeeee

Palestine ದಾಳಿಗೆ ಭಾರತ ಮೂಲದ ಇಸ್ರೇಲಿ ಯೋಧ ಸಾ*ವು

10

Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thimarodi

Belthangady:ಗಣೇಶ ಹಬ್ಬದಂದು ಪ್ರಚೋದನಾಕಾರಿ ಭಾಷಣ; ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು

1-weeqeqeqeqwe-w

Manipur ಪೊಲೀಸರ ಕೈಗೆ ಮಷೀನ್‌ ಗನ್‌: ಕಾಂಗ್ರೆಸ್‌ನಿಂದ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.