Cast Away: ಫೆಸಿಪಿಕ್‌ ಮಹಾಸಾಗರದೊಳಗಿನ ಜೀವನ ಕಥಾನಕದ ಚಿತ್ರ “ಕಾಸ್ಟ್‌ ಅವೇ”

ಅವನನ್ನು ಕಂಡು ಗುರುತು ಹಚ್ಚುವುದೇ ಸವಾಲಾಗುತ್ತದೆ.

Team Udayavani, Jul 15, 2024, 1:00 PM IST

Cast Away: ಫೆಸಿಪಿಕ್‌ ಮಹಾಸಾಗರದೊಳಗಿನ ಜೀವನ ಕಥಾನಕದ ಚಿತ್ರ “ಕಾಸ್ಟ್‌ ಅವೇ”

ಇದು ಮತ್ತೊಂದು ಅದಮ್ಯ ಆತ್ಮವಿಶ್ವಾಸದ ಚಿತ್ರ. ಕಾಸ್ಟ್‌ ಅವೇ ಹಾಲಿವುಡ್‌ ಸಿನಿಮಾ. 2000 ದಲ್ಲಿ ರೂಪಿತವಾದದ್ದು. ರಾಬರ್ಟ್‌
ಜೆಮಿಕಿಸ್‌ ನಿರ್ದೇಶಿಸಿ ನಿರ್ಮಿಸಿದ ಚಿತ್ರ. 90 ದಶಲಕ್ಷ ಡಾಲರ್‌ ಗಳಲ್ಲಿ ನಿರ್ಮಾಣವಾದ ಚಿತ್ರ ಸುಮಾರು 429 ಮಿಲಿಯನ್‌ ಡಾಲರ್‌ಗಳನ್ನು ಗಳಿಸಿ ದಾಖಲೆ ಮಾಡಿದ ಸಿನಿಮಾವಿದು.

ಕಥೆ ಎಷ್ಟು ಸಮರ್ಥವಾಗಿತ್ತೋ ಅಷ್ಟೇ ಅರ್ಥಪೂರ್ಣವಾಗಿ ಪಾತ್ರಕ್ಕೆ ಜೀವ ತುಂಬಿದವರು ಪ್ರಸಿದ್ಧ ನಟ ಟಾಮ್‌ ಹಾಂಕ್ಸ್‌. ಕಾರ್ಗೋ ಕಂಪೆನಿಯೊಂದರ ವ್ಯವಹಾರದ ಅನಾಲಿಸ್ಟ್‌ ಆಗಿ ವಿಶ್ವಾದ್ಯಂತ ವಿವಿಧ ನಗರಗಳಿಗೆ ಸೇವೆ ಒದಗಿಸಲು ಹೋಗುತ್ತಿರುತ್ತಾನೆ ಕಥಾ ನಾಯಕ.

ಕಾರ್ಯತಲ್ಲೀನತೆಗೆ ಹೆಸರಾದ ಕಥಾ ನಾಯಕ, ಅಂಥದೊಂದು ಟ್ರಿಪ್‌ ಗೆ ಸಜ್ಜಾಗುತ್ತಾನೆ. ತನ್ನ ಪ್ರಿಯತಮೆಯ ಮನವೊಲಿಸಿ ಆ ಟ್ರಿಪ್‌ಗೆ ಹೊರಡುವ ಕಥಾ ನಾಯಕ, ಪ್ರಯಾಣದ ಮಧ್ಯೆ ಕಾರ್ಗೋ ವಿಮಾನ ಆಪಘಾತಕ್ಕೀಡಾಗುತ್ತದೆ. ಕಥಾನಾಯಕನನ್ನು ಹೊರತುಪಡಿಸಿ ಬೇರಾರೂ ಬದುಕುಳಿಯುವುದಿಲ್ಲ. ಕಥಾ ನಾಯಕನೂ ಫೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಬೀಳುತ್ತಾನೆ.

ಗಾಯಗಳಿಂದ ಜರ್ಝರಿತಗೊಂಡು ಆಘಾತಕ್ಕೊಳಗಾಗುತ್ತಾನೆ. ಜನ ವಸತಿಯಿಲ್ಲದ ಪ್ರದೇಶ. ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂಬುದು ತೋಚದೇ ಕಂಗಾಲಾಗುತ್ತಾನೆ. ಹೇಗಾದರೂ ಮಾಡಿ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಹೋಗುವ ಎಲ್ಲ
ಪ್ರಯತ್ನಗಳನ್ನೂ ಮಾಡಿದರೂ ವಿಫ‌ಲನಾಗುತ್ತಾನೆ. ಕಡೆಗೆ ಅನಿವಾರ್ಯವಾಗಿ ಪರಿಸ್ಥಿತಿಗೆ ಹೊಂದಿ ಬದುಕುವುದನ್ನು ಅಭ್ಯಾಸ
ಮಾಡಿಕೊಳ್ಳತೊಡಗುತ್ತಾನೆ.

ಕೊನೆಗೂ ಹಲವು ತಿಂಗಳುಗಳ ನಂತರ ಮತ್ತೊಂ ದು ಕಂಪೆನಿಯ ಸಹಕಾರದಿಂದ ಕಥಾನಾಯಕ ಬದುಕುಳಿದು ತನ್ನ ಊರಿಗೆ ವಾಪಸಾಗುತ್ತಾನೆ. ಅವನ ವೇಷವೇ ಬದಲಾಗಿರುತ್ತದೆ. ಅವನನ್ನು ಕಂಡು ಗುರುತು ಹಚ್ಚುವುದೇ ಸವಾಲಾಗುತ್ತದೆ. ಬಳಿಕ ತನ್ನ ವೃತ್ತಿಯನ್ನು ಮತ್ತಷ್ಟು ಪ್ರೀತಿಸತೊಡಗುತ್ತಾನೆ.

ಅನಿಶ್ಚಿತ ಸಂದರ್ಭವೊಂದು ಒದಗಿಸುವ ಬದುಕನ್ನು ಅರ್ಥ ಮಾಡಿಕೊಳ್ಳುವಂಥ ಅವಕಾಶವನ್ನು ತಪ್ಪಿಸಿಕೊಳ್ಳದ ಕಥಾ ನಾಯಕ ಹೊಸ ಮನುಷ್ಯನಾಗಿಯೇ ರೂಪುಗೊಳ್ಳುತ್ತಾನೆ. ಬದುಕಿನ ಎಲ್ಲ ಸವಾಲುಗಳನ್ನು ಗೆದ್ದು ಬೀಗುವವನ ಕಥೆ.

ಇಡೀ ಸಿನಿಮಾ ಆರಂಭದಲ್ಲಿ ಕೊಂಚ ಮಂದಗತಿ ಎನಿಸಿದರೂ, ಬಳಿಕ ಒಳಗೊಳ್ಳುತ್ತದೆ. ನಮ್ಮೊಳಗೆ ಸಾಹಸ ಪ್ರವೃತ್ತಿಯನ್ನು
ಉದ್ದೀಪನಗೊಳಿಸುವಂಥ ಚಿತ್ರ. 20 ಸೆಂಚುರಿ ಫಾಕ್ಸ್‌ ಬಿಡುಗಡೆಗೊಳಿಸಿದ ಚಿತ್ರ ಆ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಮೂರು ಚಿತ್ರಗಳಲ್ಲಿ ಒಂದಾಗಿತ್ತು. ಟಾಮ್‌ ಹಾಂಕ್ಸ್‌ರ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಹಾಗೂ ಆಸ್ಕರ್‌ ಪ್ರಶಸ್ತಿಯೂ ಅವರ ಅತ್ಯುತ್ತಮ ನಟನೆಗೆ ಸಂದಾಯವಾಗಿತ್ತು.

*ಅಪ್ರಮೇಯ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.