Highest-paid lyricist: ಇವರು ಬರೆಯುವ ಒಂದು ಹಾಡಿಗೆ 25 ಲಕ್ಷ ರೂ. ಸಂಭಾವನೆ.. ಯಾರಿವರು?
ಅತೀ ಹೆಚ್ಚು ಸಂಭಾವನೆ ಪಡೆಯುವ ಗೀತರಚನೆಕಾರರಿವರು..
ಸುಹಾನ್ ಶೇಕ್, Jul 15, 2024, 3:30 PM IST
ಸಿನಿಮಾರಂಗದಲ್ಲಿ ಗೀತಾರಚನಾಕಾರರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಒಂದು ಹಾಡು ಎಷ್ಟು ಸುಂದರವಾಗಿ ಮೂಡಿಬರಲು ಅದರ ಹಿಂದೆ ಲಿರಿಕ್ಸ್ ರೈಟರ್ (Lyrics writer) ನ ಪದಪುಂಜಗಳ ಆಟ ಅಡಗಿರುತ್ತದೆ. ಭಾರತದಲ್ಲಿ ಹಿಂದಿ ಸಿನಿಮಾ (Bollywood) ಆರಂಭವಾದಾಗಿನಿಂದ(1931) ಹಾಡುಗಳು ಸಿನಿಮಾದ ಅವಿಭಾಜ್ಯವಾಗಿದೆ. ಎಷ್ಟೋ ಸಿನಿಮಾಗಳಲ್ಲಿ ಹಾಡುಗಳೇ ಸಿನಿಮಾದ ಹೃದಯಭಾಗವಾಗಿ ಆ ಸಿನಿಮಾದ ಕಥೆ ಚೆನ್ನಾಗಿಲ್ಲದಿದ್ರೂ ಅದನ್ನು ಹಾಡಿನ ಶಕ್ತಿಯೇ ಗೆಲ್ಲಿಸಿದ ಉದಾಹರಣೆಗಳು ನೂರಾರಿದೆ.
ಅಂದಿನ ಕಾಲದಲ್ಲಿ ಗೀತಾರಚನಾಕಾರರಿಗೆ ಪ್ರತಿಭೆಗೆ ತಕ್ಕ ಸಂಭಾವನೆ ಸಿಗುತ್ತಿರಲಿಲ್ಲ. ನಟ- ನಟಿಯರಿಗೆ ಹೆಚ್ಚಿನ ಬೇಡಿಕೆ ಹಾಗೂ ಅಷ್ಟೇ ಸಂಭಾವನೆಯನ್ನು ನೀಡಲಾಗುತ್ತಿತ್ತು. ಆದರೆ ಇಂದು ಸಿನಿಮಾರಂಗ ಸಾಕಷ್ಟು ಮುಂದುವರೆದಿದೆ. ಇಲ್ಲಿ ಕಲಾವಿದರಿಗೆ ಮಾತ್ರವಲ್ಲದೆ, ಆ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೆ ಅವರವರ ಪ್ರತಿಭೆಗೆ ಅನುಗುಣವಾಗಿ ಸಂಭಾವನೆಯನ್ನೂ ತಕ್ಕಮಟ್ಟಿಗೆ ನೀಡಲಾಗುತ್ತದೆ.
ಇಂದು ಹಾಡು ಬರೆಯುವ ಲಿರಿಕ್ಸ್ ರೈಟರ್ ಗಳು ಒಂದು ಹಾಡಿನ ಲಕ್ಷ ರೂ. ಪಡೆಯುವಷ್ಟು ಬೆಳೆದಿದ್ದಾರೆ ಹಾಗೂ ಮುಂದುವರೆದಿದ್ದಾರೆ.
ಹಿಂದಿ ಸಿನಿಮಾರಂಗದಲ್ಲಿ ಗುಲ್ಜಾರ್, ಪ್ರಸೂನ್ ಜೋಶಿಯಂತಹ ಹಿರಿಯ ಲಿರಿಕ್ಸ್ ರೈಟರ್ ಗಳಿಂದ ಹಿಡಿದು ಯಂಗ್ ಜನರೇಷನ್ ಮೆಚ್ಚುವ ಹಾಡುಗಳನ್ನು ಬರೆಯುವ ವಿಶಾಲ್ ದದ್ಲಾನಿ, ಇರ್ಷಾದ್ ಕಾಮಿಲ್(Irshad Kamil) ಯಂತಹ ಲಿರಿಕ್ಸ್ ರೈಟರ್ ಗಳು ತಾವು ಬರೆಯುವ ಹಾಡಿನ ಸಾಹಿತ್ಯಕ್ಕೆ ಲಕ್ಷ ರೂ. ಗಳಲ್ಲಿ ಸಂಭಾವನೆ ಪಡೆಯುತ್ತಾರೆ.
ಒಂದು ಹಾಡು ಬರೆಯಲು 25 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಇವರು…
ಭಾರತೀಯ ಚಿತ್ರರಂಗದಲ್ಲಿ ದಿಗ್ಗಜರಾಗಿ, ಸಂಗೀತ ಲೋಕದಲ್ಲಿ ಅಪಾರ ಸಾಧನೆಗೈದಿರುವ ಗುಲ್ಜಾರ್ (Gulzar) ತನ್ನ 89ರ ಹಿರಿ ವಯಸ್ಸಿನಲ್ಲೂ ಸಿನಿಮಾರಂಗದಲ್ಲಿ ಲಕ್ಷ ಲಕ್ಷ ಗಳಿಸುತ್ತಿದ್ದಾರೆ.
ಉರ್ದು ಕವಿ, ಗೀತರಚನೆಕಾರ, ಲೇಖಕ, ಚಿತ್ರಕಥೆಗಾರ ಮತ್ತು ಚಲನಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುಲ್ಜಾರ್ ಬರೆದ ಹಾಡುಗಳು ಇಂದಿಗೂ – ಮುಂದಿಗೂ ರಾರಾಜಿಸುತ್ತಲೇ ಇರುವಂಥದ್ದು.
ಗುಲ್ಜಾರ್ ಒಂದು ಹಾಡು ಬರೆಯಲು 20 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಕಳೆದ ವರ್ಷದವರೆಗೆ ಭಾರತದಲ್ಲಿ ಹಾಡು ಬರೆಯಲು ಅತೀ ಹೆಚ್ಚು ಸಂಭಾವನೆ ಪಡೆಯುವ ಲಿರಿಕ್ಸ್ ರೈಟರ್ ಆಗಿ ಗುಲ್ಜಾರ್ ಗುರುತಿಸಿಕೊಂಡಿದ್ದರು. ಆದರೆ ಇವರನ್ನು ಮೀರಿಸಿ ಈಗ ಮತ್ತೊಬ್ಬ ದಿಗ್ಗಜ ಗೀತಾರಚನಾಕಾರ ನಂ.1 ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಗುಲ್ಜಾರ್ ಅವರನ್ನು ಹೊರತುಪಡಿಸಿದರೆ ಹೆಚ್ಚು ಸಂಭಾವನೆ ಪಡೆಯುವ ಸ್ಥಾನದಲ್ಲಿ ಎರಡನೇಯವರಾಗಿ ಜಾವೇದ್ ಅಖ್ತರ್(Javed Akhtar) ಇದ್ದರು. ಇವರು ಪ್ರತಿ ಹಾಡೊಂದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು.
ವರದಿಗಳ ಪ್ರಕಾರ ಕಳೆದ ವರ್ಷ, ಅಂದರೆ 2023ರಲ್ಲಿ ಬಂದ ರಾಜ್ ಕುಮಾರ್ ಹಿರಾನಿ ಅವರ ʼಡಂಕಿʼ ಚಿತ್ರದ ‘ನಿಕ್ಲೆ ದ ಹಮ್ ಕಭಿ ಘರ್ ಸೆʼ ಎನ್ನುವ ಹಾಡನ್ನು ಬರೆಯಲು ಜಾವೇದ್ ಅವರು 25 ಲಕ್ಷ ರೂ. ಸಂಭಾವನೆಯನ್ನು ಪಡೆದಿದ್ದರು. ಆ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆದ ಲಿರಿಕ್ಸ್ ರೈಟರ್ ಆಗಿ ಹೊರಹೊಮ್ಮಿದ್ದಾರೆ.
ಈ ಬಗ್ಗೆ ಜಾವೇದ್ ಅವರು ʼಮೈಂ ಕೋಯಿ ಐಸಾ ಗೀತ್ ಗೌಂʼ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ನಾನು ಸಾಮಾನ್ಯವಾಗಿ ಚಿತ್ರದಲ್ಲಿ ಕೇವಲ ಒಂದು ಟ್ರ್ಯಾಕ್ ಬರೆಯುವುದಿಲ್ಲ. ರಾಜು ಹಿರಾನಿ ಸಾಹೇಬ್ ಅವರು ಕೇವಲ ಒಂದು ಹಾಡಿನ ಸಾಹಿತ್ಯವನ್ನು ಬರೆಯಲು ನನ್ನನ್ನು ಕೇಳಿದರು. ನಾನು ನಿರಾಕರಿಸಿದೆ ಆದರೆ ಅವರು ಒತ್ತಾಯಿಸಿದರು. ಅದಕ್ಕೆ ನಾನು ಅವರೊಂದಿಗೆ ಕೆಲವೊಂದು ಷರತ್ತುಗಳನ್ನು ಇಟ್ಟಿದ್ದೆ. ನಾನು ಅವರು ಅದನ್ನು ಒಪ್ಪುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಕಣ್ಣು ರೆಪ್ಪೆ ಮಿಟುಕಿಸದೆ, ಅವರು ಆ ಷರತ್ತುಗಳನ್ನು ಒಪ್ಪಿಕೊಂಡಿದ್ದರು” ಎಂದು ಹೇಳಿದ್ದರು.
ಈ ಒಂದು ಹಾಡನ್ನು ಬರೆದಿದ್ದಕ್ಕಾಗಿ, ಗೀತರಚನೆಕಾರರು ತೆರೆಯ ಮೇಲೆ ಪ್ರತ್ಯೇಕ ಕ್ರೆಡಿಟ್ ಪಡೆದಿದ್ದರು.
ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಇತರ ಗೀತಾರಚನಾಕಾರರು:
ಸಿಬಿಎಫ್ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಅಧ್ಯಕ್ಷ ಮತ್ತು ಬರಹಗಾರ ಪ್ರಸೂನ್ ಜೋಶಿ (Prasoon Joshi) ಅವರು ಈ ಪಟ್ಟಿಯಲ್ಲಿ ಮೂರನೇಯವರಾಗಿದ್ದಾರೆ. ಇವರು ಹಾಡೊಂದನ್ನು ಬರೆಯಲು 10 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಇನ್ನು ಸಂಗೀತ ಸಂಯೋಜಕ ಸಂಯೋಜಕ ವಿಶಾಲ್ ದದ್ಲಾನಿ (Vishal Dadlani) ಕೂಡ ಹಾಡು ಬರೆಯಲು 10 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಇರ್ಷಾದ್ ಕಾಮಿಲ್ ಅವರು ಬರೆಯುವ ಪ್ರತಿ ಹಾಡಿಗೆ 8-9 ಲಕ್ಷ ರೂ. ಪಡೆಯುತ್ತಾರೆ. ಅಮಿತಾಭ್ ಭಟ್ಟಾಚಾರ್ಯ ಅವರು ಪ್ರತಿ ಹಾಡಿಗೆ ಸುಮಾರು 7-8 ಲಕ್ಷ ರೂ. ಪಡೆಯುತ್ತಾರೆ. ಸ್ವಾನಂದ್ ಕಿರ್ಕಿರೆ 5-6 ಲಕ್ಷ ರೂ. ಪಡೆಯುತ್ತಾರೆ.
ಜೈದೀಪ್ ಸಾಹ್ನಿ, ಸಮೀರ್ ಅಂಜಾನ್, ಮತ್ತು ಅನ್ವರ್ ಫೈಜ್, ಇವರೆಲ್ಲರೂ ಪ್ರತಿ ಹಾಡಿಗೆ 5 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.