UV Fusion: ಒಂಟಿತನದ ಗುಟ್ಟು ಸಂಗೀತದಲ್ಲಿ ಅಡಗಿದೆ


Team Udayavani, Jul 15, 2024, 4:45 PM IST

14-uvfusion

ಒಂಟಿತನವು ಜೀವನದ ಒಂದು ಅವಿಭಾಜ್ಯ ಭಾಗ ಎಂದರೆ ತಪ್ಪಿಲ್ಲ. ಇದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಆದರೆ ನಮ್ಮ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಂಟಿತನಕ್ಕೆ ಹಲವಾರು ಕಾರಣಗಳಿರಬಹುದು ಮುಖ್ಯವಾಗಿ ಸಂಪರ್ಕದ ಕೊರತೆ ಅಂದರೆ ಕುಟುಂಬ, ಸ್ನೇಹಿತರು ಅಥವಾ ಸಮುದಾಯದೊಂದಿಗೆ ಜತೆಗೂಡಿ ಮಾತನಾಡಲು ಸಾಧ್ಯವಾಗದೇ ಇರುವುದು. ಹೊಸ ಜೀವನಶೈಲಿ, ನಿವೃತ್ತಿ, ಪ್ರಿಯ ವ್ಯಕ್ತಿಯ ಮರಣ, ಆತ್ಮವಿಶ್ವಾಸದ ಕೊರತೆ, ಆಧುನಿಕತೆಯೂ ಕೂಡ ಕಾರಣವಾಗಿರಬಹುದು.

ಸಂಗೀತ ಹೇಗೆ ಒಂಟಿತನ ನಿರ್ಮೂಲನೆಗೆ ಸಹಕಾರಿ

ಸಂಗೀತ ಯಾರಿಗಿಷ್ಟ ಇಲ್ಲ ಹೇಳಿ, ಕಿರಿಯರಿಂದ ಹಿರಿಯರ ವರೆಗೂ ಸಂಗೀತ ತುಂಬಾನೆ ಅಚ್ಚುಮೆಚ್ಚು. ಒಂಟಿತನವು ಒಂದು ಆಳವಾದ ಮತ್ತು ವಿಭಿನ್ನ ಭಾವನೆ. ಇದನ್ನು ಅರಿತುಕೊಳ್ಳಲು ಮತ್ತು ಸಮರ್ಥವಾಗಿ ನಿಭಾಯಿಸಲು ಅನೇಕ ಮಂದಿ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗೀತವು ಕೇವಲ ಮನೋರಂಜನೆಗೆ ಮಾತ್ರವಲ್ಲದೇ, ಅದು ನಮ್ಮ ಭಾವನೆಗಳನ್ನು ವ್ಯಕ್ತಗೊಳಿಸಲು ಶಕ್ತಿಯುತವಾದ ಸಾಧನವಾಗಿದೆ.

ಹೌದು ಯಾರೊಂದಿಗೂ ಬೆರೆಯಲು ಇಚ್ಚಿಸದವರು ತಮ್ಮ ಒಂಟಿತನವನ್ನು ದೂರವಾಗಿಸಲು ಸಂಗೀತದ ಮೊರೆ ಹೋಗುತ್ತಾರೆ. ಸಂಗೀತವು ಒಂಟಿತನದ ಜತೆಗೆ ಭಾವನೆಗಳನ್ನು ವ್ಯಕ್ತಗೊಳಿಸುತ್ತದೆ. ಸಂಗೀತವು ನಮ್ಮ ಹೃದಯದ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವುದರ ಜತೆಗೆ ನಮ್ಮ ತಾಳಹೀನ ಭಾವನೆಗಳನ್ನು ಸಂಗೀತದ ಮೂಲಕ ವಿವರಿಸಬಹುದು.

ಕವನಗಳು, ರಾಗಗಳು ಮತ್ತು ಸ್ವರಗಳು ಒಟ್ಟಾಗಿ ನಮ್ಮ ಮನಸ್ಸಿನ ಭಾವನಾತ್ಮಕ ಸ್ಥಿತಿಯನ್ನು ಬಿಂಬಿಸುತ್ತವೆ.

ಕೆಲವೊಮ್ಮೆ ಸಂಗೀತದ ನಾದವು ನಮ್ಮ ಹೃದಯದ ಧ್ವನಿಯಂತೆ ಕೆಲಸ ಮಾಡುತ್ತದೆ. ಇದು ನಮ್ಮ ಆತ್ಮಕ್ಕೆ ಸ್ಪರ್ಶಿಸುವಂತಹ ಅನುಭೂತಿ ನೀಡುತ್ತದೆ. ದುಃಖಭರಿತ ಗೀತೆಗಳು ಅಥವಾ ಸಂತೋಷದ ಗೀತೆಗಳು ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುತ್ತವೆ ಎಂದರೆ ತಪ್ಪಿಲ್ಲ.

ಸಂಗೀತವು ನಾವು ಯಾರು, ನಾವು ಏನನ್ನು ಭಾವಿಸುತ್ತೇವೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮವಾಗಿದೆ. ಇದು ನಮ್ಮ ಒಂಟಿತನವನ್ನು ಕಡಿಮೆ ಮಾಡಲು ಮತ್ತು ಏಕಾಂತ ಅನುಭವಿಸಲು ಸಹಕರಿಸುತ್ತದೆ.

ಸಂಗೀತವು ನಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸುವುದರ ಜತೆಗೆ ಸ್ವಲ್ಪ ಸಮಯ ನಮ್ಮ ಸಮಸ್ಯೆಗಳಿಂದ ದೂರವಿದ್ದು, ಕಲ್ಪನಾತ್ಮಕ ಜಗತ್ತನ್ನು ಸೃಷ್ಟಿಸಿ ಖುಷಿಪಡಿಸುವಂತೆ ಮಾಡುತ್ತದೆ. ಸಂಗೀತ ಆಲಿಸುವದರಿಂದ ನಿರಾತಂಕತೆ ಮತ್ತು ನೆಮ್ಮದಿಯನ್ನು ಪಡೆಯಬಹುದು.

ಸಂಗೀತದಿಂದ ಏನೆಲ್ಲ ಸಾಧ್ಯ

ನಿಮ್ಮ ಹೃದಯವನ್ನು ಸ್ಪರ್ಶಿಸುವಂತಹ ಆಧುನಿಕ ಅಥವಾ ಸಾಂಪ್ರದಾಯಿಕ ಗೀತೆಗಳನ್ನು ಆರಿಸಿಕೊಳ್ಳುವುದರಿಂದ ತಾನು ಒಂಟಿತನದಲ್ಲಿ ಅನುಭವಿಸುತ್ತಿರುವ ವ್ಯಕ್ತಿಯ ಕಥೆಯನ್ನು ವಿವರಿಸುವಂತೆ ಭಾಸವಾಗುತ್ತದೆ. ಇದು ಮತ್ತಷ್ಟು ಪ್ರಭಾವ ಬೀರುತ್ತದೆ. ಅದೇ ರೀತಿ ತಾವು ವ್ಯಕ್ತಪಡಿಸಲು ಬಯಸುವ ಭಾವನೆಗಳನ್ನು ಗೀತೆಯಲ್ಲಿ ಬರೆದು, ಸ್ವರಗಳಲ್ಲಿ ಚಿತ್ರೀಕರಿಸುವುದು ಕೂಡ ಉತ್ತಮ ಹವ್ಯಾಸವಾಗಿದೆ. ಈ ಪ್ರಕ್ರಿಯೆಯು ಒಂದು ರೀತಿಯ ಮನೋ ಉಲ್ಲಾಸವನ್ನು ನೀಡುತ್ತದೆ. ಧ್ಯಾನಗೀತಗಳು ಅಥವಾ ಶಾಂತಿದಾಯಕ ಸಂಗೀತವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತದೆ. ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು.

ಒಂಟಿತನದ ಗುಟ್ಟು ಸಂಗೀತದಲ್ಲಿದೆ ಹಾಗೆಯೇ ಸಂಗೀತ ಎಂಬುದು ನಮ್ಮ ಭಾವನೆಗಳನ್ನು ಸಮರ್ಥವಾಗಿ ಹಂಚಿಕೊಳ್ಳುವ ಮತ್ತು ಪರಿಹರಿಸುವ ಒಂದು ಮಾರ್ಗವಾಗಿದೆ. ಸಂಗೀತದ ಮೂಲಕ ನಾವು ನಮ್ಮ ಒಂಟಿತನವನ್ನು ಮರೆಯಲು ಮತ್ತು ಜೀವನದಲ್ಲಿ ಹೊಸ ಹುರುಪವನ್ನು ತರಲು ಸಾಧ್ಯವಿದೆ. ಒಂಟಿತನವೆಂದು ನಮ್ಮ ಆತ್ಮಸ್ಥೆçರ್ಯ ಕುಗ್ಗಿಸಿಕೊಳ್ಳದೆ ಬಂದ ಕಷ್ಟಗಳನ್ನು ಎದುರಿಸಿ ಮುನ್ನಡೆದು ಗುರಿಯೆಡೆಗೆ ಸಾಗುವುದೇ ಜೀವನ.

  -ವಿಜಿತಾ ಅಮೀನ್‌

ಬಂಟ್ವಾಳ

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.