UV Fusion: ಏಕೆ ಪಕ್ಷಿಗಳೆಲ್ಲಾ ಅಳಿವಿನಂಚಿನಲ್ಲಿದೆ?…

ಹಲವಾರು ತಳಿಯ ಪಕ್ಷಿಗಳು ಇದೀಗಾಗಲೇ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡಿದೆ

Team Udayavani, Jul 15, 2024, 4:32 PM IST

UV Fusion: ಏಕೆ ಪಕ್ಷಿಗಳೆಲ್ಲಾ ಅಳಿವಿನಂಚಿನಲ್ಲಿದೆ?…

ದೊಡ್ಡ ದೊಡ್ಡ ಗುಡ್ಡಗಳು, ಅದರಲ್ಲಿ ಸಾಲು ಸಾಲು ಮರಗಳು, ಮರದಲ್ಲಿ ಕೂತು, ತಮ್ಮ ಕೂಡುಗಳನ್ನ ಕಟ್ಟಿಕೊಂಡು, ಹಣ್ಣು ಹಂಪಲುಗಳನ್ನು ಸವಿದು ಚಿಲಿಪಿಲಿಗುಟ್ಟುತ್ತಾ ಸುಂದರವಾಗಿ ಹಾರಾಡುವ ಹಕ್ಕಿಗಳು, ಗುಡ್ಡದ ತುದಿಯಿಂದ ಧುಮುಕುವ ಜಲಪಾತ, ಇವೆಲ್ಲವೂ ಕೆಲವು ವರ್ಷಗಳ ಹಿಂದೆ ನಮ್ಮೆಲ್ಲರ ಸ್ಲೇಟು, ಚಿತ್ರ ಪುಸ್ತಕದ ಮೊದಲ ಚಿತ್ರವಾಗಿರುತ್ತಿತ್ತು. ಆದರೆ ನನಗನಿಸುವ ಪ್ರಕಾರ ನಿಜವಾಗಲೂ ಇಂತಹಾ ಪ್ರಕೃತಿ ಸೌಂದರ್ಯವನ್ನು ನಾವು ನಿಜವಾಗಿಯೂ ಸವಿದಿದ್ದೇವಾ ಎಂಬುವುದು…ಯಾಕೆಂದರೆ ಇಂದಿನ ಕೃತಕ ಪರಿಸರದಲ್ಲಿ ನಿಜವಾದ ಸೌಂದರ್ಯ ಎಂಬುವುದು ಭಾಗಶಃ ಇಲ್ಲದೇ ಆಗಿವೆ ಎಂದರೆ ಸುಳ್ಳಲ್ಲ.

ಇನ್ನೊಂದು ಕಾರಣವೇನೆಂದರೆ ಮಾನವರ ಅತಿಯಾದ ಹಾರಾಟದಿಂದಾಗಿ ಪ್ರಕೃತಿ ಅರ್ಧಕ್ಕೆ ಅರ್ಧ ಭಾಗ ನಶಿಸಿಹೋಗಿದೆ. ನದಿ, ಹೊಳೆ, ಜಲಪಾತ, ಪ್ರಾಣಿ-ಪಕ್ಷಿಗಳು ಎಲ್ಲವೂ ಕೂಡ ಪ್ರಕೃತಿಯ ಸೃಷ್ಟಿಯೇ ಹೊರತು ಮನುಷ್ಯನ ಸೃಷ್ಟಿಯಲ್ಲ. ಜಾಸ್ತಿಯೆಂದರೆ ಮನುಷ್ಯನೂ ಕೂಡ ಪ್ರಾಣಿಯೇ, ಮಾನವರು ಕೂಡ ಪ್ರಕೃತಿಯ ಸೃಷ್ಟಿಯೇ….ಇಂದಿಗೆ ಅದೆಷ್ಟೋ ತರಹದ ಪ್ರಾಣಿ ಪಕ್ಷಿಗಳು ನಾವು ಕಿವಿಯಲ್ಲಿ ಕೇಳಬಹುದೇ ವಿನಃ ಕಾಣಲು ಸಾಧ್ಯವೇ ಇಲ್ಲ. ಪಕ್ಷಿಗಳನ್ನ ನೋಡುತ್ತಾ ಹೋಗುವುದಾರದೆ ಹಲವಾರು ಪಕ್ಷಿಗಳು ಅಳಿವಿನಂಚಿನಲ್ಲಿದ್ದರೆ, ಇನ್ನೂ ಹಲವಾರು ತಳಿಯ ಪಕ್ಷಿಗಳು ಇದೀಗಾಗಲೇ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂದರೆ ಅದು ನಿಜವಾದ ಸಂಗತಿ. ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವ ಬರ್ಡ್ಸ್‌ ಆಫ್ ಇಂಡಿಯಾದ ಪ್ರಕಾರ ನಮ್ಮಲ್ಲಿ ಸರಿಸುಮಾರು 182 ಜಾತಿಯ ಪಕ್ಷಿಗಳು ಇಂದು ಅಳಿವಿನಂಚಿನಲ್ಲಿದೆ.

ಪ್ರಧಾನವಾಗಿ ಅಳಿವಿನಂಚಿನಲ್ಲಿರುವ ಪ್ರಬೇಧದ ಪಕ್ಷಿಗಳು ಗ್ರೇಟ್‌ ಇಂಡಿಯನ್‌ ಬಸ್ಟಾರ್ಡ್‌, ಕೆಂಪು ತಲೆಯ ಹದ್ದು, ಕಾಡು ಗೂಬೆ, ಬಂಗಾಳ ಫ್ಲೂ ರಿಕನ್‌, ಹಿಮಾಲಯನ್‌ ಕ್ವಿಲ್, ಸೈಬೀರಿಯನ್‌ ಕ್ರೇನ್‌, ಅಂಗಡಿ ಹಕ್ಕಿ, ಹಳದಿ ಎದೆಯ ಬಂಟಿಂಗ್‌, ಮುಂತಾದವುಗಳಾಗಿವೆ….

ಅಳಿವಿಗೆ ಕಾರಣ‌ ಪ್ರಧಾನವಾಗಿ ಇವುಗಳ ಅಳಿವಿಗೆ ಕಾರಣಗಳು ಎಂದರೆ ಮೊದಲನೆಯದಾಗಿ ನೆನಪಾಗುವುದೇ ಇವುಗಳಿಗೆ ಸರಿಯಾದ ಅದೇ ರೀತಿ ಅವುಗಳ ವಾಸಸ್ಥಾನಗಳ ಕೊರತೆಯೇ ಆಗಿವೆ. ಯಾಕೆಂದರೆ ಅವುಗಳ ಆವಾಸ ಸ್ಥಾನಗಳನ್ನು ಮನುಷ್ಯರೇ ಆಕ್ರಮಿಸಿಕೊಂಡಿದ್ದಾರೆ, ನಮ್ಮ ನಮ್ಮ ಉಪಯೋಗಗಳಿಗೋಸ್ಕರ ನಾವುಗಳು ಕಾಡುಗಳನ್ನು, ಗದ್ದೆ, ಬಯಲುಗಳನ್ನು ಕಡಿದು, ಸಮತಟ್ಟುಗಳನ್ನು ನಿರ್ಮಿಸಿ ದೊಡ್ಡ ದೊಡ್ಡ ಗಾತ್ರದ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಇದರಿಂದಲೇ ಅವುಗಳ ಆಹಾರ, ವಸತಿ ಎಲ್ಲವೂ ನಾಶವಾಗಿ ಅವುಗಳ ಜಾತಿ ನಶಿಸುತ್ತಾ ಬಂದಿದೆ ಎನ್ನುವುದು ಸತ್ಯ ಸಂಗತಿ.

ಇನ್ನೂ ಹೇಳಬೇಕೆಂದರೆ ಬೇಟೆಯಾಡುವಿಕೆ, ಮಾಲಿನ್ಯಗಳು ಮುಂತಾದವುಗಳು ಪಕ್ಷಿಗಳ ಉಳಿವಿಗೆ ಸವಾಲಾಗಿವೆ ಮತ್ತು ಬೆದರಿಕೆಯನ್ನು ನೀಡುತ್ತಿದೆ. ಸುಲಭದ ಉದಾಹರಣೆಯನ್ನು ನೋಡುವುದಾದರೆ, ನಾವೆಲ್ಲಾ ಬಾಲ್ಯದಲ್ಲಿ ಕಂಡಂತಹಾ ಅಂಗಡಿ ಪಕ್ಷಿಗಳು ಎಂಬ ಜಾತಿಯ ಹಕ್ಕಿಗಳು, ಇಂದು ಬಹುಶಃ ಹುಡುಕಿದರೂ ಸಿಗುವುದು ಬಲು ಅಪರೂಪ…ಚಿಕ್ಕ ಚಿಕ್ಕ ಗಾತ್ರದ ಈ ಹಕ್ಕಿಗಳು ಬೂದು ಬಣ್ಣಗಳಲ್ಲಿತ್ತು.ಇಂದು ಅಳಿವಿನಂಚಿನಲ್ಲಿರುವ ಪಕ್ಷಿಗಳ ಪೈಕಿಗೆ ಇದು ಕೂಡ ಸೇರಿಕೊಂಡಿದೆ.

ಸಾಮಾನ್ಯವಾಗಿ ಕೆಲವು ಹಳ್ಳಿಗಳಲ್ಲಿ ಕಂಡುಬರುವ ಕೊಕ್ಕರೆಗಳು…ಇದರಲ್ಲಿ ಎರಡು ಮೂರು ತರದವುಗಳಿವೆ….ಬಿಳಿ ಕೊಕ್ಕರೆ ಮತ್ತು ಕಪ್ಪು ಬಣ್ಣದ ಕೊಕ್ಕರೆ, ಅಂದರೆ ಕಪ್ಪು ಬಣ್ಣದ ಕೊಕ್ಕರೆ ನೀರು ಕೊಕ್ಕರೆ ಎಂದೂ ತಿಳಿಯಲ್ಪಡುತ್ತದೆ. ಇನ್ನೂ ಬಿಳಿ ಬಣ್ಣದ ಕೊಕ್ಕರೆ ಹಸು, ಎಮ್ಮೆ, ಮುಂತಾದ ಪ್ರಾಣಿಗಳ ಸನಿಹ ಕಂಡುಬರುತ್ತದೆ. ಆದರೆ ಇವುಗಳ ಸಂಖ್ಯೆಯೂ ಕೂಡ ಬಹಳ ಕಡಿಮೆ ಆಗಿವೆ ಎಂದರೆ ನಿಜ. ಹಸು, ಎಮ್ಮೆಗಳ ಮೈಯಿಂದ ಸಣ್ಣ ಸಣ್ಣ ಕೀಟಗಳನ್ನು ತಿಂದು ನಾಶ ಮಾಡುತ್ತಿದ್ದ ಕೊಕ್ಕರೆಗಳು ಇಂದು ದನ, ಕರು ಸಾಕುವವರ ಮನೆಯಲ್ಲೂ ಕಾಣಸಿಗುವುದು ಕಡಿಮೆಯೇ..

ಮತ್ತೊಮ್ಮೆ ಇದಕ್ಕೆಲ್ಲಾ ಕಾರಣಗಳು ಏನು ಎನ್ನುವುದನ್ನು ನೋಡುತ್ತಾ ಹೋದರೆ; ಅರಣ್ಯನಾಶ, ಪರಿಸರ ಮಾಲಿನ್ಯ, ಅತಿಯಾದ ಕಟ್ಟಡಗಳು ಎಂಬವುಗಳೇ ಆಗಿವೆ. ಇನ್ನು ಮುಂದಾದರೂ ಸಹ ಇದೇ ರೀತಿ ಪ್ರಾಣಿ ಪಕ್ಷಿಗಳು ಮಾರಣ ಹೋಮವನ್ನು ತಡೆಗಟ್ಟುವ ನಿಟ್ಟಿನಿಂದಾರೂ ನಾವುಗಳು ನಮ್ಮಿಂದಾಗುವ ಪರಿಸರ ಮಾಲಿನ್ಯ, ಅರಣ್ಯ ನಾಶ ಎಂಬುವುಗಳನ್ನ ತಡೆಗಟ್ಟಲೇಬೇಕು, ಇಲ್ಲವಾದರೂ ಮುಂದಿನ ದಿನಗಳಲ್ಲಿ ನಾವು ಇಂದು ಕಾಣುತ್ತಿರುವ ಪಕ್ಷಿಗಳನ್ನು, ಪ್ರಾಣಿಗಳನ್ನು ಕೇವಲ ನಮ್ಮ ಮೊಬೈಲ್, ಲ್ಯಾಪ್‌ ಟಾಪ್‌ ಗಳಲ್ಲಿ ಮಾತ್ರ ನೋಡಬೇಕಾಗಿ ಬರುವುದರಲ್ಲಿ ಸಂದೇಹವೇ ಇಲ್ಲ.

ಶ್ರೇಯಾ ಮಿಂಚಿನಡ್ಕ
ಎಸ್‌ ಡಿಎಂ ಉಜಿರೆ.

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.