Legislative Council: ಇದು ಟ್ರೇಲರ್‌ ಮಾತ್ರ, ಅಭಿ ಪಿಕ್ಚರ್‌ ಬಾಕಿ ಹೈ: ಸಿ.ಟಿ. ರವಿ

ಕಿಂಗ್‌ಪಿನ್‌ ಮಾಜಿ ಸಚಿವರ ವ್ಯಾಪಾರ ಪಾಲುದಾರಿಕೆ, ನಂ. 1, ನಂ. 2ನೇ ಸ್ಥಾನಿಗಳ ಜತೆ ಗಾಢ ಸ್ನೇಹ

Team Udayavani, Jul 16, 2024, 7:40 AM IST

CT-Ravi

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಶೇ. 100ರಷ್ಟು ಹಣವನ್ನೂ ಅಕ್ರಮವಾಗಿ ವರ್ಗಾಯಿಸಲಾಗಿದೆ. ಹಗರಣದ ಸಂಬಂಧ ಬರೀ ಟ್ರೇಲರ್‌ ಮಾತ್ರ ಬಿಟ್ಟಿದ್ದೇನೆ. ಅಭಿ ಪಿಕ್ಚರ್‌ ಬಾಕಿ ಹೈ… ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ (C.T.Ravi) ಹೇಳಿದರು.

ನಿಯಮ 68ರಡಿ ಚರ್ಚೆ ಆರಂಭಿಸಿದ ಸಿ.ಟಿ. ರವಿ, ನಮ್ಮ ಸರಕಾರದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸರಕಾರದ ಮೇಲೆ ಶೇ. 40 ಕಮಿಷನ್‌ನ ಆರೋಪ ಹೊರಿಸಲಾಗಿತ್ತು. ಆದರೆ ಈಗ ವಾಲ್ಮೀಕಿ ನಿಗಮದಲ್ಲಿನ ಹಣ ಲೂಟಿ ಹೊಡೆಯಲು ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ ಎಂದರು.

ಇಡೀ ಪ್ರಕರಣ ಕಿಂಗ್‌ಪಿನ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯ ಜತೆಯಲ್ಲಿ ಸರ್ಪಕ್ಕೆ ಇನ್ನೊಂದು ಹೆಸರನ್ನು ಹೊಂದಿರುವ ಮಾಜಿ ಸಚಿವರ ವ್ಯಾಪಾರ ಪಾಲುದಾರಿಕೆಯಿದೆ. ಹಾಗೆಯೇ ಸರಕಾರದ ನಂ. 1 ಮತ್ತು ನಂ. 2ನೇ ಸ್ಥಾನದಲ್ಲಿರುವವರೊಂದಿಗೆ ಗಾಢವಾದ ಸ್ನೇಹವಿದೆ. ಅದರಲ್ಲೂ ನಂ. 1 ಸ್ಥಾನದಲ್ಲಿರುವ
ವರ ಅಡುಗೆ ಮನೆಗೆ ಹೋಗುವಷ್ಟು ಸಲಿಗೆ ಹೊಂದಿದ್ದಾನೆ. ಹಾಗೆಯೇ ನಂ. 2 ಜತೆಯಲ್ಲಿ ಒಂದೇ ಏರ್‌ಕ್ರಾಫ್ಟ್ನಲ್ಲಿ ಹೋಗುತ್ತಾನೆ ಎಂದು ಆರೋಪಿಸಿದರು.

ಹಾಗೆಯೇ, ವಾಲ್ಮೀಕಿ ನಿಗಮದ ಹಣದಲ್ಲಿ ಶಾಸಕರೊಬ್ಬರ ಕುಟುಂಬ ಸದಸ್ಯರು ಜಮೀನು ಖರೀದಿಸಿ¨ªಾರೆ, ಲ್ಯಾಂಬೋರ್ಗಿನಿಯಂತಹ ಐಷಾರಾಮಿ ಕಾರು ಖರೀದಿಸಿದ್ದಾರೆ. ಇತ್ತೀಚೆಗೆ ನಂ.1 ಸ್ಥಾನದಲ್ಲಿರುವವರು ಅಹಿಂದ ಕಾರ್ಡ್‌ ಬಳಸುತ್ತ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಯಾರ ಹೆಸರನ್ನು ಬಳಸಬಾರದು ಎಂಬ ಸಭಾಪತಿಗಳ ಸ್ಪಷ್ಟ ಸೂಚನೆ ಇದ್ದರೂ ನಂ. 1, ನಂ. 2 ಎಂಬ ಪದಗಳನ್ನು ಬಳಸುತ್ತಿರುವುದು ತಪ್ಪು. ನಮ್ಮನ್ನು ಕೆಣಕುವಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಉಪಸಭಾಪತಿ ಎಂ.ಕೆ. ಪ್ರಾಣೇಶ್‌, ಯಾರನ್ನೂ ಕೆಣಕುವಂತೆ ಮಾತನಾಡಬೇಡಿ. ಕೇವಲ ವಿಷಯವನ್ನು ಮಂಡಿಸಿ ಎಂದು ಸಿ.ಟಿ. ರವಿ ಅವರಿಗೆ ಸೂಚಿಸಿದರು.

ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ಕೊಡುತ್ತಾರೆ!

ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಮ್ಮ ಹೋರಾಟದಿಂದಾಗಿ ಒಂದು ವಿಕೆಟ್‌ ಪತನವಾಗಿದೆ. ರಾಜ್ಯ ಸರಕಾರ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಪ್ರತೀ ನಿಗಮ, ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿ ತಾವು ಮಾಡದ ಭ್ರಷ್ಟಾಚಾರವಿಲ್ಲ ಎನ್ನುವಂತಾಗಿದೆ. ಹೀಗೆ ಮುಂದುವರಿದರೆ ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ನೀಡುತ್ತಾರೆ ನೋಡ್ತಾ ಇರಿ ಎಂದು ಸಿ.ಟಿ. ರವಿ ಆಡಳಿತ ಪಕ್ಷದವರನ್ನು ಕಿಚಾಯಿಸಿದರು. ಅದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ, ನಮ್ಮನ್ನು ಖಾಲಿ ಆಮೇಲೆ ಮಾಡಿ. ಮೊದಲು ವಿಧಾನಪರಿಷತ್‌ಗೆ ವಿಪಕ್ಷ ನಾಯಕ ಮತ್ತು ಮುಖ್ಯ ಸಚೇತಕರನ್ನು ಆಯ್ಕೆ ಮಾಡಿ ಎಂದರು.

ಯು.ಬಿ. ವೆಂಕಟೇಶ್‌ ವಿರುದ್ಧ ಕ್ರಮದ ಎಚ್ಚರಿಕೆ
ಚರ್ಚೆ ವೇಳೆ ಸಿ.ಟಿ. ರವಿ ಮಾತಿಗೆ ಪದೇಪದೆ ಅಡ್ಡಿ ಪಡಿಸುತ್ತಿದ್ದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ವಿರುದ್ಧ ಸಿಟ್ಟಾದ ಉಪ ಸಭಾಪತಿ ಪ್ರಾಣೇಶ್‌, ಹೀಗೆ ಪದೇಪದೆ ಎದ್ದು ನಿಂತು ಮಾತನಾಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ಯಾರಿಗೂ ಕರೆ ಮಾಡಿಲ್ಲ: ಪರಂ
ಚರ್ಚೆಯ ಸಂದರ್ಭ ಮಧ್ಯ ಪ್ರವೇಶಿಸಿದ ಗೃಹ ಸಚಿವ ಪರಮೇಶ್ವರ್‌, ನಾನು ಈ ವರೆಗೆ ಈ ಪ್ರಕರಣದಲ್ಲಿ ಒಬ್ಬರಿಗೂ ಕರೆ ಮಾಡಿಲ್ಲ. ಪ್ರಕರಣ ಸಂಬಂಧ ಎಸ್‌ಐಟಿ, ಸಿಬಿಐ ಹಾಗೂ ಇ.ಡಿ. ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹಗರಣ ಸಂಬಂಧ ಪರಿಮಿತಿಯೊಳಗೆ ಚರ್ಚೆಯಾಗಬೇಕು. ಸರಕಾರವು ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದೆ ಎಂದರು.

ಟಾಪ್ ನ್ಯೂಸ್

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

MLA Munirathna Case; ನಿಂದನೆ ತಪ್ಪು, ಕ್ರಮ ಆಗಲಿ: ನಿರ್ಮಲಾನಂದನಾಥ ಶ್ರೀ

MLA Munirathna Case; ನಿಂದನೆ ತಪ್ಪು, ಕ್ರಮ ಆಗಲಿ: ನಿರ್ಮಲಾನಂದನಾಥ ಶ್ರೀ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.