ʼBad Newzʼ ಗೆ ʼಯುಎʼ ಸರ್ಟಿಫಿಕೇಟ್; ವಿಕ್ಕಿ – ತೃಪ್ತಿ ಕಿಸ್ಸಿಂಗ್ ಸೀನ್ಸ್‌ಗೆ ಸೆನ್ಸಾರ್
Team Udayavani, Jul 16, 2024, 3:35 PM IST
ಮುಂಬಯಿ: ಸದ್ಯ ಬಾಲಿವುಡ್ ನಲ್ಲಿ(Bollywood) ಒಂದು ಹಾಡಿನಿಂದ ಸಿಕ್ಕಾಪಟ್ಟೆ ಸುದ್ದಿಯಾಗಿರುವ ವಿಕ್ಕಿ ಕೌಶಲ್ (Vicky Kaushal) ಹಾಗೂ ತೃಪ್ತಿ ದಿಮ್ರಿ(Triptii Dimri) ಅವರ ʼಬ್ಯಾಡ್ ನ್ಯೂಸ್ʼ (Bad Newz) ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಚಿತ್ರತಂಡ ಈಗಾಗಲೇ ʼ ತೌಬಾ ತೌಬಾʼ ಹಾಡಿನ ಮೂಲಕ ಹವಾ ಕ್ರಿಯೇಟ್ ಮಾಡಿದೆ. ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ.
ಇತ್ತೀಚೆಗಷ್ಟೇ ಚಿತ್ರದ ʼಜಾನಂʼ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ವಿಕ್ಕಿ ಕೌಶಲ್ ಹಾಗೂ ತೃಪ್ತಿ ದಿಮ್ರಿ ಮೈಚಳಿ ಕುಣಿದಿದ್ದಾರೆ. ತೃಪ್ತಿ ಹಾಟ್ ಲುಕ್ ನಲ್ಲಿ ಪಡ್ಡೆ ಹೈಕಳ ಕಣ್ಮನ ಸೆಳೆದಿದ್ದಾರೆ.
ಚಿತ್ರದ ಹಾಡುಗಳು ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಸೆನ್ಸಾರ್ ಬೋರ್ಡ್ ಚಿತ್ರವನ್ನು ವೀಕ್ಷಿಸಿ, ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಿದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈಗ ಚಿತ್ರದ ಮೂರು ವಿಭಿನ್ನ ಭಾಗಗಳಿಂದ 27 ಸೆಕೆಂಡುಗಳ ದೃಶ್ಯಗಳಿಗೆ ದೃಶ್ಯವನ್ನು ಎಡಿಟ್ ಮಾಡುವಂತೆ ಚಿತ್ರತಂಡಕ್ಕೆ ಹೇಳಿರುವುದಾಗಿ ʼಬಾಲಿವುಡ್ ಹಂಗಾಮʼ ವರದಿ ಮಾಡಿದೆ.
ವಿಕ್ಕಿ ಕೌಶಲ್ ಹಾಗೂ ತೃಪ್ತಿ ನಡುವಿನ ಒಂದು ದೃಶ್ಯವು 9 ಸೆಕೆಂಡುಗಳು, ಇನ್ನೊಂದು 10 ಸೆಕೆಂಡುಗಳು ಮತ್ತು ಮೂರನೆಯದು 8 ಸೆಕೆಂಡುಗಳಿದ್ದು ಇವೆಲ್ಲವೂ ಕಿಸ್ಸಿಂಗ್ ಸೀನ್ ಗಳಾಗಿವೆ. ಈ ಸೀನ್ ಗಳನ್ನು ತೆಗೆದು ಹಾಕುವ ಬದಲು ಇದನ್ನು ಮಾರ್ಪಾಡು ಮಾಡಿ ಎಂದು ಸೆನ್ಸಾರ್ ಬೋರ್ಡ್ ಚಿತ್ರತಂಡಕ್ಕೆ ಹೇಳಿದೆ.
ಇನ್ನು ಮದ್ಯಪಾನ ಮಾಡುವಾಗಿನ ದೃಶ್ಯದ ಕೆಳಗೆ ಮದ್ಯಪಾನ ಎಚ್ಚರಿಕೆಯ ಸಂದೇಶವನ್ನು ಹಾಕಬೇಕೆಂದು ಹೇಳಿದೆ.
ಎಲ್ಲಾ ಬದಲಾವಣೆಗಳನ್ನು ಹೇಳಿದ ಬಳಿಕ ಸೆನ್ಸಾರ್ ಬೋರ್ಡ್ ʼಬ್ಯಾಡ್ ನ್ಯೂಸ್ʼ ಗೆ ʼಯುಎʼ ಸರ್ಟಿಫಿಕೇಟ್ ನೀಡಿದೆ. ಸಿನಿಮಾ 2 ಗಂಟೆ 22 ನಿಮಿಷ ಅವಧಿ ಇರಲಿದೆ.
ಆನಂದ್ ತಿವಾರಿ ನಿರ್ದೇಶನದ ʼಬ್ಯಾಡ್ ನ್ಯೂಸ್ʼ ಚಿತ್ರದಲ್ಲಿ ವಿಕ್ಕಿ ಕೌಶಲ್, ಟ್ರಿಪ್ಟಿ ಡಿಮ್ರಿ ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಜು.19ರಂದು ಚಿತ್ರ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.