Today ಸಚಿವ ಸೋಮಣ್ಣ ಸಭೆ: ಕರಾವಳಿ ಭಾಗದ ರೈಲ್ವೇ ಕುರಿತ ಸುದೀರ್ಘ‌ ಬೇಡಿಕೆಗಳ ಪಟ್ಟಿ


Team Udayavani, Jul 17, 2024, 6:42 AM IST

ಕರಾವಳಿ ಭಾಗದ ರೈಲ್ವೇ ಕುರಿತ ಸುದೀರ್ಘ‌ ಬೇಡಿಕೆಗಳ ಪಟ್ಟಿ

ಮಂಗಳೂರು : ಮಂಗಳೂರು ರೈಲ್ವೇ ಪ್ರತ್ಯೇಕ ವಿಭಾಗ, ಕೊಂಕಣ ರೈಲ್ವೇಯನ್ನು ರೈಲ್ವೇ ಇಲಾಖೆಯೊಂದಿಗೆ ಸೇರ್ಪಡೆ, ಹಲವು ಹೊಸ ರೈಲು, ಹಲವು ರೈಲುಗಳ ವಿಸ್ತರಣೆ, ಸೇವೆಯಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ಬುಧವಾರ (ಜು.17) ದಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮುಂದಿಡಲು ವಿವಿಧ ರೈಲ್ವೇ ಯಾತ್ರಿ ಸಂಘದವರು ಸಿದ್ಧರಾಗಿದ್ದಾರೆ.

ಈಗಾಗಲೇ ಕೆಲವು ಮನವಿಗಳನ್ನು ಸಂಸದರಾದ ಕ್ಯಾ|ಬ್ರಿಜೇಶ್‌ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರ ಗಮನಕ್ಕೆ ತಂದಿದ್ದಾರೆ. ಹಲವು ವಿಷಯಗಳ ಕುರಿತು ತಾವೇ ಬಂದು ಚರ್ಚಿಸುವುದಾಗಿ ಹೇಳಿದಂತೆ ವಿ. ಸೋಮಣ್ಣನವರು ಜು.17ರಂದು ಬೆಳಗ್ಗೆ 10.45ಕ್ಕೆ ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರೂ ಅಲ್ಲದೆ ದಕ್ಷಿಣ ರೈಲ್ವೇ, ನೈರುತ್ಯ ರೈಲ್ವೇ ಹಿರಿಯ ಅಧಿಕಾರಿಗಳು ಭಾಗವಹಿಸುವರು.

ಪ್ರಮುಖ ಬೇಡಿಕೆಗಳು
– ಸಕಲೇಶಪುರ-ಸುಬ್ರಹ್ಮಣ್ಯ ಭಾಗದ ರೈಲ್ವೇ ಹಳಿಯನ್ನು ಮೇಲ್ದರ್ಜೆಗೇರಿಸಬೇಕು, ಆ ಮೂಲಕ ಘಾಟ್‌ ಸೆಕ್ಷನ್‌ನ ಎಲ್ಲಾ ಸ್ಟೇಷನ್‌ಗಳಲ್ಲೂ ಕ್ರಾಸಿಂಗ್‌ಗೆ ಅವಕಾಶ ಕೊಡಬೇಕು ಹಾಗೂ ಸರಾಸರಿ ವೇಗವನ್ನು ಗಂಟೆಗೆ 30ರಿಂದ 35 ಕಿ.ಮೀಗೆ ಏರಿಸಬೇಕು. ಕಡಗರವಳ್ಳಿ ಹಾಗೂ ಯಡಕುಮರಿಯಲ್ಲಿ ಕ್ಯಾಚ್‌ ಸ್ಲೆಡಿಂಗ್‌ ನಿರ್ಮಿಸಬೇಕು.
ಬೆಳಗ್ಗೆ ಹಾಗೂ ಸಂಜೆಯ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ರೋಡ್‌ ವರೆಗೆ ವಿಸ್ತರಿಸಬೇಕು. ಬೆಂಗಳೂರು-ಮಂಗಳೂರು-ಕಣ್ಣೂರುನಂ 16511/12 ರೈಲಿನ ಈಗಿನ ವೇಳೆಯನ್ನು ಬದಲಾಯಿಸಬಾರದು.
– ಬೆಂಗಳೂರು-ಮುರುಡೇಶ್ವರ ಎಕ್ಸ್‌ ಪ್ರಸ್‌ ರೈಲು ಮಂಗಳೂರು ಸೆಂಟ್ರಲ್‌ ಮೂಲಕ ಹೋಗುತ್ತಿದ್ದು ಈ ಮಾರ್ಗ ಬದಲಾಯಿಸಬಾರದು. ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ಸುಧಾರಿತ ಎಲ್‌ಎಚ್‌ಬಿ ಕೋಚ್‌ ಒದಗಿಸಬೇಕು.
ಮಂಗಳೂರು ಜಂಕ್ಷನ್‌-ಮಂಗಳೂರು ಸೆಂಟ್ರಲ್‌ ಮಧ್ಯೆ ಇರುವ 3 ಕಿ.ಮೀ ದೂರದಲ್ಲಿ ಹಳಿ ದ್ವಿಗುಣ ಮಾಡಬೇಕು, ಮಂಗಳೂರು ಸೆಂಟ್ರಲ್‌ ಅನ್ನು ವಿಶ್ವದರ್ಜೆ ನಿಲ್ದಾಣವಾಗಿಸಬೇಕು.
– ಬಂದರು ಗೂಡ್ಸ್‌ಶೆಡ್‌ ಅನ್ನು ಟ್ರೈನ್‌ ಪಾರ್ಕಿಂಗ್‌, ನಿರ್ವಹಣ ಯಾರ್ಡ್‌ ಮಾಡುವ ಜತೆ ಸೂಕ್ತವಾದ ರಸ್ತೆ ಮೇಲ್ಸೇತುವೆಯನ್ನು ಪಾಂಡೇಶ್ವರದಲ್ಲಿ ನಿರ್ಮಿಸಬೇಕು.
– ಹಿಂದೆ ಸಂಚರಿಸುತ್ತಿದ್ದ ಮಂಗಳೂರು-ಮಾತಾ ವೈಷ್ಣೋದೇವಿ ಕಾಟ್ರ ನವಯುಗ ಎಕ್ಸ್‌ಪ್ರೆಸ್‌ ಅನ್ನು ಸುಬ್ರಹ್ಮಣ್ಯ ರಸ್ತೆ ಅರಸೀಕೆರೆ ಪುಣೆ ಹೊಸದಿಲ್ಲಿ ಮಾರ್ಗವಾಗಿ ಮರು ಪರಿಚಯಿಸಬೇಕು.
– 12133/34 ಸಿಎಸ್‌ಟಿಎಂ ಮುಂಬಯಿ ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಬೇಕು ಹಾಗೂ 12134 ರೈಲು ಮಂಗಳೂರಿನಿಂದ ಸಂಜೆ 4 ಕ್ಕೆ ಬಿಡುವಂತಾಗಬೇಕು.
– ಗುಜರಾತ್‌ ಸಂಪರ್ಕಿಸುವ ಮಂಗಳೂರು- ಭಾವನಗರ ರೈಲಿಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಅದನ್ನು ಪರಿಚಯಿಸಲು ಕ್ರಮ ಕೈಗೊಳ್ಳುವುದು.
-ಬೆಂಗಳೂರು-ಮಂಗಳೂರು-ಕಣ್ಣೂರುನಂ.16511/12 ರೈಲನ್ನು ಕೋಝಿಕೋಡ್‌ಗೆ ವಿಸ್ತರಿಸುವ ಆಲೋಚನೆಯನ್ನು ಕೈ ಬಿಡಬೇಕು.
-ಮಂಗಳೂರು-ವಿಜಯಪುರ ಮಧ್ಯೆ ಸಂಚರಿಸುವ 07377/78 ರೈಲುಗಳು ಈಗಲೂ ವಿಶೇಷ ರೈಲುಗಳಾಗಿಯೇ ಓಡುತ್ತಿರುವುದು ಪ್ರಯಾಣಿಕರಿಗೆ ದುಬಾರಿಯಾಗುತ್ತಿದೆ, ಹಾಗಾಗಿ ಅವುಗಳನ್ನು ಸಾಮಾನ್ಯ ರೈಲುಗಳಾಗಿ ಪರಿವರ್ತಿಸಬೇಕು.
– 16575/76 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಸೆಂಟ್ರಲ್‌ ವರೆಗೂ ವಿಸ್ತರಿಸಬೇಕು ಎನ್ನುವುದಕ್ಕೆ ದಕ್ಷಿಣ ರೈಲ್ವೇಯವರು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಮಂಡಳಿ ಅನುಮೋದನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು.

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.