Gangavali ನದಿಯಲ್ಲೇ 30 ಟನ್ ಗ್ಯಾಸ್ ಖಾಲಿಗೊಳಿಸಲು ಯೋಜನೆ!
ಗುಡ್ಡ ಕುಸಿದಾಗ ನದಿಯಲ್ಲಿ ಕೊಚ್ಚಿಹೋಗಿದ್ದ ಅನಿಲ ಟ್ಯಾಂಕರ್ ; 19 ಲ.ರೂ. ಅಡುಗೆ ಅನಿಲ ನೀರುಪಾಲು!
Team Udayavani, Jul 18, 2024, 6:45 AM IST
ಕಾರವಾರ: ಅಂಕೋಲಾ ಸಮೀಪದ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದ ವೇಳೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಿಂದ ನದಿಯಲ್ಲೇ ಅಡುಗೆ ಅನಿಲ ಖಾಲಿ ಮಾಡಲು ನಿರ್ಧರಿಸಲಾಗಿದೆ. 19 ಲಕ್ಷ ರೂ. ಮೌಲ್ಯದ ಅಡುಗೆ ಅನಿಲ ನೀರು ಪಾಲಾಗಲಿದೆ!
ಸುಮಾರು 30 ಟನ್ ಅನಿಲ ಹೊಂದಿರುವ ಈ ಟ್ಯಾಂಕರ್ ದುರಂತ ಸ್ಥಳದಿಂದ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಿದೆ. ಗುರುವಾರವೇ ಟ್ಯಾಂಕರ್‌ನಿಂದ ಅನಿಲವನ್ನು ವೈಜ್ಞಾನಿಕವಾಗಿ ನೀರಿಗೆ ಸೇರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ “ಉದಯವಾಣಿ’ಗೆ ತಿಳಿಸಿದರು.
ಮಂಗಳೂರಿನಿಂದ ಆಗಮಿಸಿರುವ ಎಂಆರ್‌ಪಿಎಲ್ ಹಾಗೂ ಎಚ್‌ಪಿಸಿಎಲ್‌ನ ತಜ್ಞರು, ನದಿಯಿಂದ ಟ್ಯಾಂಕರ್ ತೆರವುಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಆರಂಭದಲ್ಲಿ ನದಿಯಲ್ಲೇ ಅನಿಲವನ್ನು ವಿಲೀನ ಮಾಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸದಿದ್ದರೂ ಟ್ಯಾಂಕರನ್ನು ಬದಿಗೆ ತಂದು ಖಾಲಿ ಮಾಡುವುದು ಅಪಾಯಕಾರಿ ಎಂದು ತಜ್ಞರ ತಂಡ ಮನವರಿಕೆ ಮಾಡಿಕೊಟ್ಟ ಬಳಿಕ ಇದಕ್ಕೆ ಅನುಮತಿ ನೀಡಲಾಗಿದೆ.
ಈ ನಡುವೆ ಬುಧವಾರ ಎನ್‌ಡಿಆರ್‌ಎಫ್ ತಂಡದವರು ಟ್ಯಾಂಕರ್ ಮತ್ತಷ್ಟು ತೇಲಿ ಹೋಗದಂತೆ ಹಗ್ಗ ಹಾಕಿ ಕಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.