Ganja peddler: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ
Team Udayavani, Jul 18, 2024, 10:57 AM IST
ಹೊಸಕೋಟೆ: ಪೊಲೀಸರ ಮೇಲೆ ಯೇ ಲಾಂಗ್‌ನಿಂದ ಹಲ್ಲೆ ನಡೆಸಲು ಯತ್ನಿಸಿದ ಗಾಂಜಾ ಪೆಡ್ಲರ್ ಕಾಲಿಗೆ ಗುಂಡು ಹೊಡೆದು ಬಂಧನ ಮಾಡಿದ ಘಟನೆ ಹೊಸಕೋಟೆ ಟೋಲ್ ಬಳಿ ನಡೆದಿದೆ.
ಬೈಕ್ ಕಳವು ಮಾಡಿ, ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದ ಸೈಯದ್ ಸುಹೇಲ್ (32) ಬಂಧಿತ ಆರೋಪಿ.
ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಸೈಯದ್ ಸುಹೇಲ್‌ನನ್ನು ಹೊಸಕೋಟೆ ಬಳಿಯ ದೊಡ್ಡ ಅಮಾನಿಕೆರೆ ಸಮೀ ಪದ ಟೋಲ್ ಬಳಿ ಬಂಧಿಸಲು ತೆರ ಳಿದ್ದ ಪೊಲೀ ಸರ ಮೇಲೆಯೇ ಲಾಂಗ್ ಬೀಸಿ ತಪ್ಪಿಸಿಕೊಂಡು ಪರಾರಿ ಯಾಗಲು ಪ್ರಯತ್ನಿಸಿದ್ದ. ಈ ವೇಳೆ, ಶರಣಾಗುವಂತೆ ಎಚ್ಚರಿಕೆ ನೀಡಿದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ಅಶೋಕ್ ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಗುಂಡೇಟಿನಿಂದ ಸ್ಥಳದಲ್ಲೇ ಕುಸಿದು ಬಿದ್ದ ಸೈಯದ್ ನನ್ನು ವಶಕ್ಕೆ ಪಡೆದು ಹತ್ತಿರದ ಹೊರವಲಯದ ಎಂವಿಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಸಕೋಟೆ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ಕಡೆ ಮಹಿಳೆಯರ ಸರ ಕಳವು ಪ್ರಕರಣಗಳು ಹೆಚ್ಚಾಗಿದ್ದರಿಂದ ಕಾರ್ಯಾಚರಣೆ ನಡೆಸಲಾಗಿದೆ.
ಬಂಧಿಸಲು ತೆರಳಿದ್ದ ವೇಳೆ ಆರೋಪಿಗೆ ಶರಣಾಗುವಂತೆ ತಿಳಿಸಲಾಗಿತ್ತು. ಆದರೆ, ಪ್ರತಿರೋಧ ತೋರಿದ. ಈ ವೇಳೆ ಗಾಳಿಯಲ್ಲಿ ಮೇಲಕ್ಕೆ ಗುಂಡು ಹಾರಿಸಿದರೂ ನಮ್ಮ ಮಾತನ್ನು ಕೇಳಿಲ್ಲ. ಹೀಗಾಗಿ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.-ಅಶೋಕ್, ಇನ್ಸ್‌ಪೆಕ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Students; ಮಕ್ಕಳಲ್ಲಿ ನೈತಿಕತೆಯ ನೆಲೆಗಟ್ಟನ್ನು ಗಟ್ಟಿಗೊಳಿಸೋಣ
Chikkaballapura: ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್
ರಾಜ್ಯದಲ್ಲಿ ದಿನಕ್ಕೊಂದು ಮಾನಭಂಗ, ಅತ್ಯಾಚಾರ ಕೇಸ್: ಆರ್.ಅಶೋಕ್
Union Budget: ಬಜೆಟ್‌ನಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ: ಮಾಜಿ ಸಂಸದ ಡಿ.ಕೆ.ಸುರೇಶ್
Mandya: ಬಾಲಕಿ ಮೇಲೆ ಮೂವರು ದುರುಳರಿಂದ ಸಾಮೂಹಿಕ ದೌರ್ಜನ್ಯ!